Advertisement

ಪರಂಪರೆ ರಕ್ತಗತವಾಗಿ ಬರುವುದಿಲ್ಲ

12:27 AM Apr 09, 2019 | Team Udayavani |

ಬೆಂಗಳೂರು: ನಮ್ಮ ಪರಂಪರೆ ರಕ್ತಗತವಾಗಿ ಬರುವುದಿಲ್ಲ. ಅದು ಸಿದ್ಧ ಆಹಾರದಂತೆಯೂ ಸಿಗುವುದಿಲ್ಲ ಎಂದು ವಿರ್ಮಶಕ ಎಸ್‌.ಆರ್‌.ವಿಜಯಶಂಕರ್‌ ಅಭಿಪ್ರಾಯಪಟ್ಟರು.

Advertisement

ಮಲ್ಲೇಶ್ವರದ ಎಂಇಎಸ್‌ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ನಡೆದ, ಕಾಲೇಜಿನ ಅಂತಿಮ ಬಿ.ಎ ವಿದ್ಯಾರ್ಥಿನಿ ಮೇದಿನಿ ಅವರ “ಬೀದಿ ಬದಿ ಬೆಳದಿಂಗಳು’ ಕವನ ಸಂಕಲ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಪರಂಪರೆ ಮತ್ತು ಸಂಸ್ಕೃತಿ ಹಿರಿಯರಿಂದ ಬರುತ್ತದೆ. ಆದರೆ, ಅದು ಹಿರಿಯರು ಗಳಿಸಿದ ಆಸ್ತಿಯಂತೆ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಹಸ್ತಾಂತರವಾಗುವುದಿಲ್ಲ. ಅದನ್ನು ನಾವು ಶ್ರಮಪಟ್ಟು ತಿಳಿದುಕೊಳ್ಳಬೇಕು’ಎಂದು ಹೇಳಿದರು.

ಯುವಕರು ಪರಂಪರೆಯನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಬಹುತೇಕರು ಅದಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ಇದ್ದಾರೆ. ಮೇದಿನಿ ಅವರು, ತಮ್ಮ ಕವನಗಳಲ್ಲಿ ಪರಂಪರೆಯ ಬಗ್ಗೆ ಬೆಳಕು ಚಲ್ಲಿದ್ದಾರೆ ಎಂದರು.

ಕವಿ ಡಾ.ಎಂ.ಆರ್‌.ಕಮಲಾ, ಯುವಕರು ಎಲ್ಲ ಬಂಧಗಳಿಂದ ಮುಕ್ತರಾಗಿರಲು ಆಪೇಕ್ಷಿಸುತ್ತಾರೆ. ಅದು ಅವರ ಕವನಗಳಲ್ಲಿ ಪ್ರತಿಧ್ವನಿಸುತ್ತಿದೆ. ಯುವಕರಿಗೆ ನಿರ್ಭಂದಿತ ಸ್ಥಿತಿ ಬೇಕಾಗಿಲ್ಲ. ಇಂದು ಹೊಸ ತಲೆಮಾರು ಬರೆಯುತ್ತಿರುವ ಬಹುತೇಕ ಕವನಗಳಲ್ಲಿ ಅದನ್ನು ಕಾಣಬಹುದಾಗಿದೆ ಎಂದರು.

Advertisement

ಮೇದಿನಿ ಕವನಗಳಲ್ಲಿ ಭಾವತೀವ್ರತೆ ಇದೆ. ಸೃಷ್ಟಿಯ ವಿಸ್ಮಯಗಳನ್ನು ತಾನು ಬೆರಗಿನಿಂದ ನೋಡಿ, ಅದನ್ನು ಇತರರಿಗೂ ಹಂಚಿದ್ದಾಳೆ. ಎಲ್ಲ ವಿದ್ಯಾರ್ಥಿಗಳಲ್ಲಿಯೂ ಭಿನ್ನ ಕಲೆ ಅಡಗಿರುತ್ತದೆ. ಅಧ್ಯಾಪಕರು ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಮೇದಿನಿ, ಎಂ.ಇ.ಎಸ್‌ ಕಾಲೇಜಿನ ಪ್ರಾಂಶುಪಾಲಾರದ ಡಾ.ಲೀಲಾವತಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next