ಮಣಿಪಾಲ: ಮಣಿಪಾಲ ಆಟೋ ಕ್ಲಬ್‌ವತಿಯಿಂದ ಮಂಗಳವಾರ ಪಾರಂಪರಿಕ ಕಾರ್ ಹಾಗೂ ಬೈಕ್‌ಗಳನ್ನು ನೋಡುವ ಸದವಕಾಶ ಲಭಿಸಿತು.
ಸಂಘದ ಅಧ್ಯಕ್ಷ ನಿಶಾಂತ್ ಭಟ್ ಈ ವಿನೂತನ ಜಾಥಾಗೆ ಹಸಿರು ಬಾವುಟ ಹಾರಿಸಿ ಚಾಲನೆ ನೀಡಿದರು. ಮಣಿಪಾಲ ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭವಾದ ಈ ಜಾಥಾ ಸಿಂಡಿಕೇಟ್ ಸರ್ಕಲ್, ಇಂದ್ರಾಳಿ, ಕಡಿಯಾಳಿ, ಸಿಟಿ ಬಸ್‌ಸ್ಟಾಂಡ್ ಹಾಗೂ ಕರಾವಳಿ ಬೈ ಪಾಸ್ ಮೂಲಕ ಸ್ವಸ್ಥಾನಕ್ಕೆ ಮರಳಿದವು.
ಜಾಥಾದಲ್ಲಿ ಭಾಗವಹಿಸಿದ್ದ ಪ್ರಮುಖ ಕಾರ್‌ಗಳಾದ ಪ್ಲೇಮೌತ್ (1929), ಮೋರಿಸ್ (1934), ಫೋರ್ಡ್ (1936), ಮೋರಿಸ್ ಮೈನರ್ (1948), (1048) ಬಗ್ ಫಿಯೇಟ್, ಮೋರಿಸ್ ಮತ್ತು ಪ್ಲೇಮೌತ್ (1956) ಹಾಗೂ ಬೈಕ್‌ಗಳು ಗತವೈಭವವನ್ನು ಪರಿಚಯಿಸಿದವು. ಯುನೈಟೆಡ್ ರೈಡರ್ಸ್ ಮತ್ತು ಉಡುಪಿ ಜಾವಾ ಕ್ಲಬ್ ಬೈಕ್ ಜಾಥಾದಲ್ಲಿ ಭಾಗವಹಿಸಿದ್ದವು.
ಪಾರಂಪರಿಕ ಕಾರು ಸಂಗ್ರಹಗಾರರಾದ ಪ್ರಕಾಶ್ ಶೆಟ್ಟಿ, ಅರುಣ್ ಶಿರಾಲಿ, ಗಣೇಶ್ ಉದ್ಯಾವರ, ವಸಂತ್, ರಶೀದ್ ಸಹಕರಿಸಿದ್ದರು.
ಸಂಘದ ಉಪಾಧ್ಯಕ್ಷ ಡಾ| ಅಫjಲ್ ಪಿ.ಎಂ., ಕಾರ್ಯದರ್ಶಿ ರಾಜೇಶ್ ನಾಯಕ್, ಡಾ| ಟಾಮ್ ದೇವಾಸ್ಯ, ಡಾ| ದಿನೇಶ್ ನಾಯಕ್, ಜೆರ್ರಿ ಜೋಸೆಫ್, ಡಾ| ಅಶ್ವಿನಿ ಮಹಾಪಾತ್ರ ಮತ್ತಿತರರು ಉಪಸ್ಥಿತರಿದ್ದರು.