Advertisement
ಹಿಂದೆಲ್ಲ ಜ್ಞಾನವೃದ್ಧಿಗಾಗಿ ಓದುವ ಹವ್ಯಾಸ ಹೆಚ್ಚಾಗಿದ್ದರೂ ಈಗಿನ ಆಧುನಿಕ ಕಾಲ ಘಟ್ಟದಲ್ಲಿ ಅದು ತುಂಬಾ ಕಡಿಮೆಯಾಗಿದೆ.
Related Articles
Advertisement
ಈ ಸಂಕಲನದಲ್ಲಿ ನನಗೆ ಪ್ರಿಯವಾದದ್ದು “ಭಯಂಕರ ನಟ ಸೋಮಯ್ಯ’. ಇದರಲ್ಲಿ ಆ ವ್ಯಕ್ತಿತ್ವವನ್ನು ವ್ಯಂಗ್ಯವಾಗಿ ನೋಡಿದರೂ, ಮನುಷ್ಯನ ಜೀವನದ ವಾಸ್ತವ ಸ್ಥಿತಿಯಾವಾಗಾದರೂ ಬದಲಾ ಗಬಹುದು. ತುತ್ಛವಾಗಿ ನೋಡದೇ ಅಲ್ಲಿಯೂ ಧನಾತ್ಮಕವಾದ ವಿಷ ಯಗಳು ಅಡಗಿವೆ ಎನ್ನುವುದು ವ್ಯಕ್ತವಾಗಿದೆ.
ಅದರಲ್ಲಿ ಕೂಪ ಮಂಡೂಕ, ಟೊಮ್ಯಾ ಟೋ ವ್ರತ, ಕಿಸೆಯಲ್ಲಿ ತರಕಾರಿ!, ಭಯಕೃದ್, ದನ ತಿಂದ ಬೆಕ್ಕು, ಹಲೋ ಹಲೋ..! ಮಾತುಕತೆ, ಫೊನೋ ರಂಜನೆ , ಎಲ್ಲಿ? ಎಲ್ಲಿ? ಹೀಗೆ ಹಲವಾರು ಪುಟ್ಟ ಪುಟ್ಟ ಸನ್ನಿವೇಶಗಳು ನಮಗೆ ವಿನೋದವನ್ನು ಉಂಟು ಮಾಡುತ್ತವೆ.
ಈ ಕಥಾ ಸಂಕಲನವನ್ನು ಓದಿದಾಗ ನಮ್ಮ ಬದುಕಿನಲ್ಲಿಯೇ ಸಂಭವಿಸಿದ ಕೆಲವು ಘಟನೆಗಳು ಕಣ್ಣೆದುರು ನಿಲ್ಲುತ್ತವೆ. ಜತೆಗೆ ಆಕ್ರೋಶ ಗಳ ವಿಚಾರ ವನ್ನು ವ್ಯಂಗ್ಯ ಹಾಗೂ ಹಾಸ್ಯದ ರೂಪ ದಲ್ಲಿ ಮನಸ್ಪರ್ಶಿಯಾಗಿ ನಿರೂಪಿ ಸಲಾಗಿದೆ. ಸರಳವಾಗಿ ನಿರೂಪಿಸಲ್ಪ ಟ್ಟಿರುವ ಈ ಪುಸ್ತಕವನ್ನು ಓದುತ್ತಾ ಹೋದಂತೆ ಸಾಮಾಜಿಕ ಕಳಕಳಿ ಹಾಗೂ ಸಮಸ್ಯೆ ಗಳು ವ್ಯಂಗ್ಯದ ರೂಪದಲ್ಲಿ ಕಣ್ಣೆದುರು ನಿಲ್ಲುತ್ತವೆ.
ಜನರ ನಡುವಿನ ಫೋನ್ ಕರೆಗಳು, ಮಾತುಗಳು, ವಾಸ್ತು, ಹವ್ಯಾಸಗಳು ಎಲ್ಲವನ್ನೂ ಸುಲಲಿತವಾಗಿ ಲೇಖಕರು ಅಕ್ಷರ ರೂಪಕ್ಕಿಳಿಸಿದ್ದಾರೆ.
ಗಂಭೀರ ವಿಷಯಗಳನ್ನು ಓದಲು ಆಸಕ್ತರಲ್ಲ ದವರನ್ನೂ ಈ ಕೃತಿಯು ತನ್ನ ಲಘು ಧಾಟಿಯಿಂದ ಸೆಳೆಯುವಲ್ಲಿ ಯಶಸ್ವಿ ಯಾಗುತ್ತದೆ. ಇದರಿಂದ ಸಿಗುವ ಜೀವನ ಪಾಠವು ಎಲ್ಲರಿಗೂ ಅನುಕೂ ಲವಾಗಲಿದೆ ಹಾಗೂ ಮನಸ್ಸು ಹಗುರ ಮಾಡಲು ಪೂರಕವಾಗುತ್ತದೆ.
ಯಶಸ್ವಿ ದೇವಾಡಿಗ, ಶಿರಸಿ