Advertisement

ಪಾಕಿಸ್ಥಾನ ಜಾಧವ್‌ ಪತ್ನಿಯ ಶೂ ಮರಳಿಸದಿರಲು ಕಾರಣ ಇದು !

11:31 AM Dec 27, 2017 | udayavani editorial |

ಹೊಸದಿಲ್ಲಿ : ಇಸ್ಲಾಮಾಬಾದ್‌ನಲ್ಲಿ ಕುಲಭೂಷಣ್‌ ಜಾಧವ್‌ ತನ್ನ ತಾಯಿ ಮತ್ತು ಪತ್ನಿಯನ್ನು ಕೂಲಂಕಷ ಅವಲೋಕನದ ಬಿಗಿ ಭದ್ರತೆಯಲ್ಲಿ ಭೇಟಿಯಾದ ಒಂದು ದಿನದ ತರುವಾಯ, ಜಾಧವ್‌ ಅವರ ಪತ್ನಿ ಚೇತನ್‌ಕುಲ್‌ ಅವರ ಶೂಗಳನ್ನು ಕಳಚಿಸಿಕೊಂಡು ತನ್ನ ವಶದಲ್ಲಿ ಇರಿಸಿಕೊಂಡ ಬಗ್ಗೆ ವಿಲಕ್ಷಣಕಾರಿ ವಿವರಣೆಯನ್ನು ಪಾಕ್‌ ಸರಕಾರ ನೀಡಿದೆ.

Advertisement

“ಜಾಧವ್‌ ಪತ್ನಿಯ ಶೂನಲ್ಲಿ ಅದೇನೋ ಇತ್ತು. ಅದೇನೆಂಬುದನ್ನು ಪರೀಕ್ಷಿಸಲು ನಾವು ಭದ್ರತೆಯ ಕಾರಣಕ್ಕಾಗಿ ಆಕೆಯ ಶೂ ತೆಗೆಸಿ ಆಕೆಗೆ ಬದಲಿ ಶೂ ನೀಡಿದೆವು. ಆಕೆಯ ಶೂಗಳನ್ನು ನಾವೀಗ ಪರೀಕ್ಷಿಸುತ್ತಿದ್ದೇವೆ. ಶೂ ಹೊರತು ಪಡಿಸಿ ತನ್ನ ಉಳಿದೆಲ್ಲ ವಸ್ತುಗಳನ್ನು ತನಗೆ ಮರಳಿಸಲಾಗಿರುವುದನ್ನು ಸ್ವತಃ ಜಾಧವ್‌ ಪತ್ನಿಯೇ ದೃಢೀಕರಿಸಿದ್ದಾರೆ’ ಎಂದು ಪಾಕ್‌ ವಿದೇಶಾಂಗ ಕಚೇರಿಯ ವಕ್ತಾರ ಡಾ. ಮುಹಮ್ಮದ್‌ ಫೈಸಲ್‌ ಹೇಳಿದ್ದಾರೆ. 

ಭದ್ರತೆಯ ನೆಪ ಒಡ್ಡಿ ಮುನ್ನೆಚ್ಚರಿಕೆಯ ಕಾರಣಕ್ಕಾಗಿ ಜಾಧವ್‌ ಕುಟುಂಬದ ಸಾಂಸ್ಕೃತಿಕ ಮತ್ತು ಧಾರ್ಮಿಕ ಸೂಕ್ಷ್ಮತೆಗಳನ್ನು ಪಾಕ್‌ ಸರಕಾರ ಕಡೆಗಣಿಸಿತು; ಜಾಧವ್‌ ಪತ್ನಿಯ ಮಂಗಲ ಸೂತ್ರ, ಬಳೆ ಮತ್ತು ಬಿಂದಿಯನ್ನು ತೆಗೆಸಲಾಯಿತು ಎಂದು ಭಾರತ ಸರಕಾರ ವ್ಯಕ್ತಪಡಿಸಿದ ಆಕ್ರೋಶಕ್ಕೆ ಪ್ರತಿಯಾಗಿ ಪಾಕ್‌ ಸರಕಾರ ಈ ಹೇಳಿಕೆಯನ್ನು ನೀಡಿದೆ. 

ಪಾಕ್‌ ಸರಕಾರ ತನ್ನ ಹೇಳಿಕೆಯಲ್ಲಿ “ಭಾರತದ ನಿರಾಧಾರ ಆರೋಪಗಳು 24 ತಾಸುಗಳ ಬಳಿಕ ಬಂದಿವೆ. ಭಾರತದ ಆಕ್ಷೇಪಗಳನ್ನು ನಾವು ಸಾರಾಸಗಟು ತಿರಸ್ಕರಿಸುತ್ತೇವೆ. ನಾವು ಅನಗತ್ಯವಾಗಿ ಅರ್ಥಹೀನ ಪದ-ಸಮರದಲ್ಲಿ ಪಾಲ್ಗೊಳ್ಳಲು ಇಷ್ಟಪಡುವುದಿಲ್ಲ. ನಮ್ಮ ಮುಕ್ತತೆ ಮತ್ತು ಪಾರದರ್ಶಕತೆಯು ಭಾರತ ಸರಕಾರದ ಎಲ್ಲ ಆರೋಪಗಳು ಸುಳ್ಳೆಂಬದನ್ನು ತೋರಿಸುತ್ತವೆ’ ಎಂದು ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next