Advertisement

ಇದೋ ಇಲ್ಲಿದೆ ಆನ್‌ಲೈನ್‌ e-ಎನ್‌ಪಿಎಸ್‌

03:45 AM Jan 30, 2017 | Harsha Rao |

ಇತ್ತೀಚೆಗಿನ ದಿನಗಳಲ್ಲಿ ಬಹಳಷ್ಟು ಸುದ್ದಿ ಮಾಡುತ್ತಿರುವ ಎನ್‌ಪಿಎಸ್‌ ಅಥವಾ ನ್ಯಾಶನಲ… ಪೆನÒನ್‌ ಸ್ಕೀಮಿಗೆ ನೋಂದಾಯಿಸಿಕೊಳ್ಳುವುದು ಹೇಗೆ ಎನ್ನುವುದು ಹಲವರ ಪ್ರಶ್ನೆ. ಜೀವ ವಿಮೆ ಮಾಡಿಸಿಕೊಳ್ಳಿ ಎಂದು ದುಂಬಾಲು ಬೀಳುವ ಏಜೆಂಟರು ಈ ಸ್ಕೀಮಿನಲ್ಲಿ ಕಾಣಸಿಗುವುದಿಲ್ಲ. ಅದು ಬಿಟ್ಟು ಅದರ ಬಗ್ಗೆ ನೀವಾಗಿಯೇ ಹೋಗಿ ಸಂಬಂಧಪಟ್ಟ ಸಂಸ್ಥೆಗಳಲ್ಲಿ ಕೇಳಿದರೂ ನಿಮಗೆ ಸೂಕ್ತ ಮಾಹಿತಿ ದೊರಕುವುದಿಲ್ಲ. ವಿತ್ತೀಯ ಕ್ಷೇತ್ರದಲ್ಲಿ ಎಲ್ಲವೂ ಕಮೀಷನ್‌ ಮಹಾತೆ¾. ಯಾವ ಯೋಜನೆಯಲ್ಲಿ ಆಕರ್ಷಕ ಕಮೀಶನನ್ನು ನೀಡಲಾಗುವುದಿಲ್ಲವೋ ಆ ಯೋಜನೆಗಳ ಪ್ರಚಾರಕ್ಕೆ ಯಾರೊಬ್ಬನೂ ಬರುವುದಿಲ್ಲ. ಅದು ಎಷ್ಟೇ ಉತ್ತಮವಾದ ಸ್ಕೀಮ… ಆಗಿದ್ದರೂ ಸಹ! 

Advertisement

ಶಾಸ್ತ್ರೀಯ ರೀತಿಯಲ್ಲಿ ಬ್ಯಾಂಕು, ಪೋಸ್ಟಾಫೀಸು,  ಕ್ಯಾಮ್ಸ್‌, ಇತ್ಯಾದಿ ಕಚೇರಿಗಳಿಗೆ ಭೇಟಿ ನೀಡಿ ಅರ್ಜಿ ಹಾಕಿದರೆ ಖಾತೆ ತೆರೆಯಲು ಕನಿಷ್ಠ ಒಂದು ತಿಂಗಳಾದರೂ ಹಿಡಿದೀತು. ಆದರೆ ನಮ್ಮ ಕೈಯಲ್ಲಿ ಜಾಸ್ತಿ ಸಮಯವಿಲ್ಲ ಅಥವಾ ನೀವು ಅಷ್ಟು ದಿನ ಕಾಯಲು ಇಚ್ಛಿಸುವುದಿಲ್ಲ ಎಂದಾದರೆ ಅದಕ್ಕೆ ಪರಿಹಾರ ಇ-ಎನ್‌ಪಿಎಸ್‌. 

ಮೊತ್ತ ಮೊದಲ ವಿಚಾರ ಏನೆಂದರೆ, ಇಲ್ಲಿ ಇ-ಎನ್‌ಪಿಎಸ್‌ ಹಾಗೂ ಎನ್‌ಪಿಎಸ್‌ ಯೋಜನೆಗಳು ಬೇರೆ ಬೇರೆ ಅಲ್ಲ. ಅವೆರಡೂ ಒಂದೇ. ಆನ್‌ಲೈನ್‌ ಮೂಲಕ ಮನೆಯಲ್ಲಿ ಕುಳಿತಲ್ಲಿಂದಲೇ ಮಾಡುವ ಸೌಲಭ್ಯಕ್ಕಾಗಿ ಇ-ಎನ್‌ಪಿಎಸ್‌ ಎನ್ನುವ ವಿಶೇಷಣವನ್ನು ಬಳಸಲಾಗಿದೆ ಅಷ್ಟೆ. ನಿಮ್ಮ ಎನ್‌ಪಿಎಸ್‌ ಖಾತೆಯನ್ನು ತೆರೆಯಲು ಅಥವಾ ಕಂತು ತುಂಬಲು ಇದು ಇನ್ನೊಂದು ಬಾಗಿಲು ಅಷ್ಟೆ. 

ಎರಡನೆಯದಾಗಿ, ಇ-ಎನ್‌ಪಿಎಸ್‌ ತೆರೆಯಲು ಆಧಾರ್‌ ಕಾರ್ಡ್‌ ಅಥವಾ ಪ್ಯಾನ್‌ ಕಾರ್ಡ್‌ ಇರುವುದು ಅಗತ್ಯ. ಆಧಾರ್‌/ಪ್ಯಾನ್‌ ಕಾರ್ಡ್‌ ಇಲ್ಲದವರು ಈ ದಾರಿಯಲ್ಲಿ ವ್ಯವಹರಿಸಲು ಸಾಧ್ಯವಿಲ್ಲ. ಆಧಾರ್‌ ಕಾರ್ಡಿನಲ್ಲಿ ನೋಂದಾಯಿತ ಒಂದು ಮೊಬೈಲ್‌ ನಂಬರ್‌ ಹೊಂದಿರುವುದು ಕೂಡಾ ಅಗತ್ಯ. ಹೊಂದದೆ ಇರುವವರು ಮೊತ್ತಮೊದಲು ತಮ್ಮ ಆಧಾರ ಕಾರ್ಡಿನಲ್ಲಿ ಮೊಬೈಲ್‌ ನಂಬರ್‌ ನೋಂದಾಯಿಸುವುದು ಅಗತ್ಯ. 

ಖಾತೆ ತೆರೆಯುವುದು
ಒಂದು ಇ-ಎನ್‌ಪಿಎಸ್‌ ಖಾತೆ ತೆರೆಯಲು ಹಾಗೂ ಖಾತೆಗೆ ದುಡ್ಡು ಕಟ್ಟಲು https://enps.nsdl.com ಜಾಲತಾಣಕ್ಕೆ ಭೇಟಿ ನೀಡಬೇಕು. ಅಲ್ಲಿಗೆ ಹೋಗಿ ಮೊತ್ತ ಮೊದಲು ರಿಜಿಸ್ಟ್ರೇಷನ್‌ ಮಾಡಿಸಿಕೊಳ್ಳಬೇಕು. ರಿಜಿಸ್ಟ್ರೇಷನ್‌ ಮಾಡಲು ಅಲ್ಲಿ ನಿಮ್ಮ ಆಧಾರ್‌ ಅಥವಾ ಪಾನ್‌ ಕಾರ್ಡನ್ನು ಬಳಸಬೇಕು. ಆಧಾರ್ಕಾರ್ಡನ್ನು ಬಳಸಲು ಇಚ್ಛಿಸುವವರು ಅವರ ಆಧಾರ್‌ ಸಂಖ್ಯೆಯನ್ನು ನಮೂದಿಸಿದರಾಯಿತು. ಫೋಟೊ ಸಹಿತ ನಿಮ್ಮ ಹೆಸರು, ವಿಳಾಸ, ಜನ್ಮ ದಿನಾಂಕವನ್ನು ಅದುವೇ ತಪಾಸಣೆ ನಡೆಸಿ ಸ್ಕಿ$›àನ್‌ ಮೇಲೆ ತೋರಿಸುತ್ತದೆ. ಅಲ್ಲದೆ, ನಿಮ್ಮ ನೋಂದಾಯಿತ ಮೊಬೈಲ್‌ ನಂಬರಿಗೆ ಒಂದು ಒಟಿಪಿ (ಒಂದು ಬಾರಿ ಮಾತ್ರ ಉಪಯೋಗಿಸಬಹುದಾದ ‘ಒನ್‌ ಟೈಮ್‌ ಪಾಸ್‌ವರ್ಡ್‌’) ಕಳುಹಿಸುತ್ತದೆ. ಆ ಒಟಿಪಿಯನ್ನು ಸ್ಕ್ರೀನ್‌ ಮೇಲೆ ಸೂಕ್ತ ಜಾಗದಲ್ಲಿ ತುಂಬಿ ರಿಜಿಸ್ಟ್ರೇಷನ್‌ ಪ್ರಕ್ರಿಯೆಯನ್ನು ಮುಂದುವರಿಸಿರಿ.  ಅಲ್ಲಿ ಕೇಳಲ್ಪಟ¤ ವೈಯಕ್ತಿಕ ಮಾಹಿತಿ, ಸಂಪರ್ಕ ಮಾತಿಗಳು, ಬ್ಯಾಂಕ್‌ ವರಗಳು, ಎನ್‌ಪಿಎಸ್‌ ಸ್ಕೀಮಿನಲ್ಲಿ ನಿಮ್ಮ ಆಯ್ಕೆಗಳು ಇತ್ಯಾದಿಗಳನ್ನು ತುಂಬಿರಿ. ಕೊನೆಗೆ ನಿಮ್ಮ ಸಮಯವನ್ನು ಸ್ಕ್ಯಾನ್‌ ಮಾಡಿ ಅಪ್‌ಲೋಡ್‌ ಮಾಡಬೇಕು. ಆಧಾರ್‌ ನೀಡಿದ ಫೋಟೋ ಅಲ್ಲದೆ ಬೇರೆಯೇ ಫೋಟೋ ಬೇಕೆಂದವರು ಅದನ್ನೂ ಅಪ್‌ಲೋಡ್‌ ಮಾಡಬಹುದು. 

Advertisement

ಪರ್ಯಾಯವಾಗಿ ಇ-ಎನ್‌ಪಿಎಸ್‌ ತೆರೆಯಲು ಪ್ಯಾನ್‌ ಕಾರ್ಡ್‌ ಕೂಡಾಬಳಸಬಹುದು. ಅಂತಹವರು ಪ್ಯಾನ್ಕಾರ್ಡಿನ ನಂಬರನ್ನು ಜಾಲತಾಣದಲ್ಲಿ ನಮೂದಿಸಿದರೆ ಆಯಿತು. ಆಧಾರ್‌ ಅಥವಾ ಪ್ಯಾನ್‌ ಕಾರ್ಡ್‌ ಇಲ್ಲದವರು ಈ ದಾರಿಯಲ್ಲಿ ವ್ಯವಹರಿಸಲು ಸಾಧ್ಯವಿಲ್ಲ. 

ಅದರೊಡನೆ ಪಿಂಚಣಿ ನಿಯಂತ್ರಕರು ಗುರುತಿಸಿದ ಆಯ್ದ 25 ಬ್ಯಾಂಕುಗಳಲ್ಲಿ ಯಾವುದಾದರು ಒಂದು ಬ್ಯಾಂಕಿನಲ್ಲಿ ನೀವು ಆನ್‌-ಲೈನ್‌ ಸೌಲಭ್ಯವುಳ್ಳ ಖಾತೆ ಹೊಂದಿರುವುದು ಕೂಡಾ ಅಗತ್ಯ. ಜೊತೆಗೆ ಒಂದು ಮೊಬೈಲ್‌ ನಂಬರ್‌ ಹಾಗೂ ಇ-ಮೈಲ್‌ ಐಡಿ ಹೊಂದಿರುವುದು ಕೂಡಾ ಅವಶ್ಯಕ. 

ಪಾವತಿ ಹೀಗೆ!
ಈ ರೀತಿ ನೋಂದಣಿ ಮಾಡಿದಾಕ್ಷಣ ಜಾಲತಾಣವು ನಿಮ್ಮನ್ನು ದುಡ್ಡು ಪಾವತಿ ಮಾಡುವ ಕಿಟಕಿಗೆ ಕರೆದೊಯ್ಯುತ್ತದೆ. ಅಲ್ಲಿ ಹೋಗಿ ಇಂಟರ್ನೆಟ್‌ ಬ್ಯಾಂಕಿಂಗ್‌/ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ ಮೂಲಕ ಮೊತ್ತ ಮೊದಲ ಕಂತಿನ ಪಾವತಿ ಮಾಡಿರಿ. ಖಾತೆ ತೆರೆಯಲು ಟಯರ್‌-1 ಖಾತೆಯಲ್ಲಿ ರೂ 500 ಕನಿಷ್ಠ (ಐಚ್ಚಿಕವಾದ ಟಯರ್‌-2 ಖಾತೆಯಲ್ಲಿ ರೂ 1000) ಪಾವತಿ ಮಾಡಬೇಕು. ನಿಮ್ಮ ಖಾತೆ ಆ ಕೂಡಲೇ ತೆರೆಯಲ್ಪಟ್ಟು ನಿಮ್ಮ ಪರ್ಮನೆಂಟ್‌ ರೆಟೈರ್‌ವೆುಂಟ್‌ ಅಕೌಂಟ್‌ ನಂಬರ್‌ ನಿಮಗೆ ನೀಡಲಾಗುತ್ತದೆ. ಇಲ್ಲಿಗೆ ನಿಮ್ಮ ಖಾತೆ ತೆರೆದಂತೆಯೇ ಹಾಗೂ ಈ ಕೂಡಲೇ ನೀವು ಹೆಚ್ಚುವರಿ ಹೂಡಿಕೆಯನ್ನು ಮಾಡುವುದು ಸಾಧ್ಯ.  

ಅರ್ಜಿ ರವಾನೆ
ಆದರೂ ಸಂಪೂರ್ಣವಾದ ರಿಜಿಸ್ಟ್ರೇಷನ್‌ ಪ್ರಕ್ರಿಯೆಗೆ ಸ್ಕಿ$›àನಿನಲ್ಲಿ ಇರುವ ತುಂಬಲ್ಪಟ್ಟ ಅರ್ಜಿ ಫಾರ್ಮನ್ನು ಪ್ರಿಂಟ್‌ ತೆಗೆದು ಅದರಲ್ಲಿ ಫೋಟೋ ಅಂಟಿಸಿ, ಸಹಿ ಹಾಕಿ, 180 ದಿನಗಳೊಳಗಾಗಿ ಅಲ್ಲಿ ನೀಡಲಾದ ‘ಸಿಆರ್‌ಎ’ ಸಂಸ್ಥೆಯ ವಿಳಾಸಕ್ಕೆ ಕಳುಹಿಸಬೇಕು. ಟಯರ್‌-2 ಖಾತೆ ಬೇಕಾದವರು ಇದರೊಂದಿಗೆ ತಮ್ಮ ಪಾನ್‌ ಕಾರ್ಡ್‌ ಪ್ರತಿ ಹಾಗೂ ಒಂದು ಕ್ಯಾನ್ಸಲ್‌ ಆದ ಚೆಕ್‌ ಹಾಳೆಯನ್ನೂ ಕಳುಹಿಸತಕ್ಕದ್ದು. 

ನಿಮ್ಮ ಅರ್ಜಿ ತಲುಪಿದ ಮೇಲೆ ನಿಮಗೆ ಒಂದು ವೆಲ್ಕಮ್‌ ಕಿಟ್‌ ಬರುತ್ತದೆ. ಅದರಲ್ಲಿ ನಿಮ್ಮ ಪ್ಯಾನ್‌ ಕಾರ್ಡ್‌, ಮಾಹಿತಿ ಪತ್ರ, ಖಾತೆ ವಿವರಗಳು, ಅಂತಜಾìಲ ಮುಖಾಂತರ ಖಾತೆಯನ್ನು ನೋಡಲು ಬೇಕಾದ ‘ಐಪಿನ್‌’, ಹಾಗೂ ಟೆಲಿಫೋನ್‌ ಮುಖಾಂತರ ವ್ಯವಹರಿಸಲು ಬೇಕಾದ ‘ಟಿಪಿನ್‌’ ಇರುತ್ತವೆ. 

ಒಂದು ಎನ್‌ಪಿಎಸ್‌ ಖಾತೆ ಒಂದು ವಿಶಿಷ್ಟವಾದ ಪರ್ಮನೆಂಟ್‌ ರಿಟೈರ್ಮೆಂಟ್‌ ಅಕೌಂಟ್‌ ನಂಬರ್‌ ಅಥವಾ ಪಿಆರ್‌ಎಎನ್‌ ಸಂಖ್ಯೆಯಿಂದ ಗುರುತಿಸಲ್ಪಡುತ್ತದೆ. ನಿಮ್ಮ ಖಾತೆ ತೆರೆದೊಡನೆ ನಿಮಗೆ ಒಂದು ‘ಪ್ರಾಣ್‌’ ಕಿಟ್‌ ಬರುತ್ತದೆ. ಅದರಲ್ಲಿ ನಿಮ್ಮ “ಪ್ರಾಣ್‌’ ಕಾರ್ಡ್‌ ಹಾಗೂ ಎಲ್ಲಾ ಮಾಹಿತಿಗಳ ಕರಪತ್ರಗಳು ಇರುತ್ತವೆ. ಇದು ನಿಮ್ಮ ಖಾತೆಯ ಯುನಿಕ್‌ ನಂಬರ್‌. ಆಜೀವ ಪರ್ಯಂತ ಈ ಒಂದು ನಂಬರನ್ನೇ ಹೊತ್ತು ತಿರುಗಾಡಬೇಕು. ಒಬ್ಟಾತ ಇನ್ನೊಂದು ಖಾತೆಯನ್ನು ತನ್ನ ಹೆಸರಿನಲ್ಲಿ ತೆರೆಯುವಂತಿಲ್ಲ. ಆದರೆ ಈ “ಪ್ರಾಣ್‌’ ನಂಬರ್‌ ಮೂಲಕ ದೇಶದ ಎಲ್ಲೆಡೆ ಯಾವ ಪಿಓಪಿಯ ಮೂಲಕವಾದರೂ ಪೆನÒನ್‌ ಖಾತೆಯನ್ನು ಬಳಸಬಹುದು, ವರ್ಗಾಯಿಸಬಹುದು. 

ಮುಂದಿನ ಪಾವತಿಗಳು
ಖಾತೆಯನ್ನು ತೆರೆದಾಕ್ಷಣ ಮುಂದಿನ ಪಾವತಿಗಳನ್ನೂ ಕೂಡಾ ಅದೇ ರೀತಿ ಆನ್‌ಲೈನ್‌ನಲ್ಲಿ ಮಾಡಬಹುದು. ಪಾವತಿ ಮಾಡಬೇಕೆಂದಾಗ ಜಾಲತಾಣಕ್ಕೆ ಹೋಗಿ ಪ್ರಾನ್‌ ನಂಬರ್‌ ತುಂಬಿ ಇಂಟರ್ನೆಟ್‌ ಬ್ಯಾಂಕಿಂಗ್‌/ಡೆಬಿಟ್‌/ಕ್ರೆಡಿಟ್‌ ಕಾರ್ಡುಗಳ ಮೂಲಕ ಪಾವತಿ ಮಾಡಬಹುದು. ಇ-ಎನ್‌ಪಿಎಸ್‌ ಮೂಲಕ ಖಾತೆ ತೆರೆಯದೆ ಬೇರಾವ ಹಾದಿಯಲ್ಲಿ ಖಾತೆ ತೆರೆದವರೂ ಈ ರೀತಿ ಆನ್‌ಲೈನ್‌ ಪಾವತಿಗಳನ್ನು ಮಾಡಬಹುದು. ಸರಕಾರಿ ನೌಕರರೂ ಕೂಡಾ ತಮ್ಮ ಸಂಬಳದಿಂದ ಕಡಿತವಾಗುವುದಲ್ಲದೆ ಹೆಚ್ಚುವರಿ ಪಾವತಿ ಮಾಡಲಿಚ್ಚಿಸುವವರು ಇಲ್ಲಿ ಆ ರೀತಿ ಮಾಡಬಹುದು. 

ಮಾರುಕಟ್ಟೆಯ ಪ್ರತಿಫ‌ಲವುಳ್ಳ ಅತ್ಯಂತ ಕಡಿಮೆ ವೆಚ್ಚವುಳ್ಳ ಒಂದು ದೀರ್ಘಾವಧಿ ನಿವೃತ್ತಿ ಸೌಲಭ್ಯವೇ ಈ ಯೋಜನೆ. ಮಾರುಕಟ್ಟೆಯ ಗೊಡವೆ ಬೇಡವೆನ್ನುವವರು ಈ ಯೋಜನೆಯ ಸಾಲಪತ್ರದ (ಡೆಟ್‌) ಆಯ್ಕೆಯಲ್ಲಿ ತೊಡಗಿಸಿಕೊಳ್ಳಬಹುದು. ಎನ್‌ಪಿಎಸ್‌ ನಲ್ಲಿ ಪ್ರತಿಫ‌ಲ ಇಂತಿಷ್ಟೇ ಬರುತ್ತದೆ ಎನ್ನುವ ಗ್ಯಾರಂಟಿ ಎಲ್ಲೂ ನೀಡಲಾಗುವುದಿಲ್ಲ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಈ ಯೋಜನೆ ಸುಮಾರು 10% ನೀಡಿದ್ದು ಜನ ಸಾಮಾನ್ಯರಿಗೆ ನಿರಾಸೆ ಹುಟ್ಟಿಸಿಲ್ಲ. 

ಈ ವರ್ಷ 80 ಸಿ ಸೆಕ್ಷನ್‌ ಅನ್ವಯ ರೂ 1.5 ಲಕ್ಷ ಹೂಡಿಕೆ ಮಾಡಿ ಆದ ಮೇಲೆ ಹೆಚ್ಚುವರಿ ವಿನಾಯಿತಿಗಾಗಿ ಸೆಕ್ಷನ್‌ 80ಸಿಸಿಡಿ(1ಬಿ) ಅನ್ವಯ ಎನ್‌ಪಿಎಸ್‌ ಯೋಜನೆಯಲ್ಲಿ ರೂ 50,000 ವರೆಗೆ ಹೂಡಿಕೆ ಮಾಡಬಹುದಾಗಿದೆ. ಈ ಹೆಚ್ಚುವರಿ ಸೌಲಭ್ಯ ಅಟಲ್‌ ಪೆನÒನ್‌ ಸಹಿತ ಎನ್‌ಪಿಎಸ್‌ ಹೊರತಾಗಿ ಬೇರಾವ ಯೋಜನೆಯಿಂದಲೂ ಅಸಾಧ್ಯ. ಅಷ್ಟೇ ಅಲ್ಲದೆ ಈ ಹೊಸ ಬಜೆಟ್ಟಿನಲ್ಲಿ ಎನ್‌ಪಿಎಸ್‌ನಿಂದ ಹಿಂಪಡೆಯುವ ದುಡ್ಡಿನ ಶೇ.60ರ ಭಾಗದ ಮೇಲೆ ಮಾತ್ರ ತೆರಿಗೆ ಬೀಳುವಂತೆ ಮತ್ತು ಬಾಕಿ ಶೇ.40ರಷ್ಟು ಮೇಲೆ ತೆರಿಗೆ ಬೀಳದಂತೆ ಕಾನೂನು ಮಾಡಲಾಗಿದೆ. ಹಾಗಾಗಿ ಇದುವರೆಗೆ ಈ ಸೆಕ್ಷನ್‌ ಅಡಿಯಲ್ಲಿ ರೂ 50,000 ಹೂಡಿಕೆಯ ಲಾಭ ಪಡೆಯದವರು ಇನ್ನುಳಿದ 4 ದಿನಗಳಲ್ಲಿ ಖಾತೆ ತೆರೆದು ಹೂಡಿಕೆ ಮಾಡಿ ಕರಲಾಭ ಪಡಕೊಳ್ಳಬಹುದಾಗಿದೆ. ಅದೂ ಅಲ್ಲದೆ ಕಂಪೆನಿಗಳು ತಮ್ಮ ಉದ್ಯೋಗಿಗಳ ಹೆಸರಿನಲ್ಲಿ ಎನ್‌ಪಿಎಸ್‌ ಕಟ್ಟಿದರೆ ಅದು ಉದ್ಯೋಗಿಗಳ ಕೈಯಲ್ಲಿ ಸೆಕ್ಷನ್‌ 80ಸಿಸಿಡಿ(2) ಅಡಿಯಲ್ಲಿ ಕರ ವಿನಾಯಿತಿಯುಳ್ಳ ಆದಾಯವಾಗುತ್ತದೆ. ಹಾಗಾಗಿ ಇರುವ ಸಂಬಳದಲ್ಲಿಯೇ ಕೊಂಚ ಕರಾರ್ಹ ಭತ್ಯೆಗಳನ್ನು ಕಡಿಮೆ ಮಾಡಿ ಅದೇ ಮೊತ್ತವನ್ನು ಉದ್ಯೋಗಿಗಳ ಎನ್‌ಪಿಎಸ್‌ ಖಾತೆಯಲ್ಲಿ ಹಾಕಿದರೆ ಅವರಿಗೆ ಒಂದು ಉತ್ತಮ ಹೂಡಿಕೆಯೂ ಆದೀತು, ಅವರಿಗೆ ಹೆಚ್ಚುವರಿ ಕರನಾಯಿತಿಯೂ ಲಭಿಸೀತು.

ಯಾರು ಅರ್ಹರು?
18-60 ವರ್ಷ ವಯಸ್ಸಿನ ಎಲ್ಲಾ ಅನಿವಾಸಿ ಭಾರತಿಯರೂ ಈ ಖಾತೆಯನ್ನು ತೆರೆಯಬಹುದು. ನಿವಾಸಿಗಳೊಂದಿಗೆ ಜಂಟಿ ಖಾತೆ ತೆರೆಯುವಂತಿಲ್ಲ ಹಾಗೂ ಪವರ್‌ ಆಫ್ ಅಟರ್ನಿ ಮೂಲಕ ಕೂಡಾ ಈ ಖಾತೆಯನ್ನು ತೆರೆಯುವಂತಿಲ್ಲ.
ಅನಿವಾಸಿ ಭಾರತೀಯರು ತಮ್ಮ ಎನ್ನಾರಿ ಅಥವಾ ಎನ್ನಾರೋ ಖಾತೆಗಳ ಮೂಲಕ ಎನ್‌ಪಿಎಸ್‌ಗೆ ದೇಣಿಗೆ ತುಂಬಬಹುದು. ದೇಣಿಗೆ ರುಪಾಯಿ ಲೆಕ್ಕದಲ್ಲಿ ಹೂಡಲ್ಪಡುತ್ತದೆ. ದೇಶಿ ಕರೆನ್ಸಿಯಲ್ಲಿ ಎನ್‌ಪಿಎಸ್‌ ಲಭ್ಯವಿಲ್ಲ. 

ವಾರ್ಷಿಕ ದೇಣಿಗೆ
ಎನ್‌ಪಿಎಸ್‌ನಲ್ಲಿ ಎರಡು ಉಪಖಾತೆಗಳಿರುತ್ತವೆ. ಕಡ್ಡಾಯವಾದ ಟೈರ್‌-1 ಖಾತೆಯಲ್ಲಿ ವಾರ್ಷಿಕ ಕನಿಷ್ಟ ರೂ 6000 ಅನ್ನು 1 ಅಥವಾ ಹಲವು ಕಂತುಗಳಲ್ಲಿ ಕಟ್ಟುತ್ತಾ ಮುಂದುವರಿಯಬಹುದು. ಒಂದು ಕಂತಿಗೆ ಕನಿಷ್ಠ ಮಿತಿ ರೂ 500. ವಾರ್ಷಿಕ ದೇಣಿಗೆಗೆ ಗರಿಷ್ಟ ಮಿತಿ ಇಲ್ಲ. ಆದರೆ ಕರವಿನಾಯಿತಿಗೆ ಮಾತ್ರ ವಿನಾಯಿತಿ ಇರುತ್ತದೆ.
ಐಚ್ಛಿಕವಾದ ಒಂದು ಎಸ್‌ಬಿ ಖಾತೆಯನ್ನು ಹೋಲುವ ಟೈರ್‌-2 ಖಾತೆಯಲ್ಲಿ ವಾರ್ಷಿಕ ಕನಿಷ್ಠ 1 ದೇಣಿಗೆ ಮತ್ತು ವರ್ಷಾಂತ್ಯದಲ್ಲಿ ಕನಿಷ್ಟ ಉಳಿಕೆ ರೂ 2,000 ಹೊಂದಿರ ಬೇಕು.  

ಕನಿಷ್ಟ ವಾರ್ಷಿಕ ದೇಣಿಗೆ ನೀಡದ ಖಾತೆಗಳನ್ನು ‘ಫ್ರೀಜ‚…’ ಮಾಡಲಾಗುತ್ತದೆ. ಆಮೇಲೆ ಬಾಕಿ ಪಾವತಿ ಮತ್ತು ಪೆನಾಲ್ಟಿ ತೆತ್ತು ಅಂತಹ ಖಾತೆಗಳನ್ನು ಪುನಃ ಓಪನ್‌ ಮಾಡಬೇಕಾಗುತ್ತದೆ. 

ಸ್ಕೀಮುಗಳು ಏನೇನು?

ನಿಮ್ಮ ಹೂಡಿಕೆಯ ಗರಿಷ್ಟ ಶೇ.50ರಷ್ಟು  ಇಂಡೆಕ್ಸ್‌ ಶೇರುಗಳಲ್ಲೂ(ಇ), ಉಳಿದದ್ದನ್ನು ಸ್ಥಿರ ಆದಾಯದ ಕಾರ್ಪೊàರೇಟ್‌ ಸಾಲಪತ್ರ(ಅ) ಹಾಗೂ ಸರಕಾರಿ ಸಾಲಪತ್ರಗಳಲ್ಲಿ(ಉ) ನೀವು ನಿರ್ದೇಶಿಸಿದ ಪ್ರಮಾಣದಲ್ಲಿ ಹೂಡುತ್ತಾರೆ. ಖಾತೆ ತೆರೆಯುವ ವ್ಯಕ್ತಿ ತನ್ನ ರಿಸ್ಕ್ ಧಾರಣೆಯನ್ನು ಆಧರಿಸಿ ಬೇಕೆನಿಸಿದ ಅನುಪಾತವನ್ನು ಆಯ್ದುಕೊಳ್ಳಬೇಕು. ಇವೆಲ್ಲವನ್ನೂ ಬಳಿಕ ಬೇಕಾದಂತೆ ಬದಲಾಯಿಸಲೂ ಬಹುದು. ‘ಇ’ ಆಯ್ಕೆಯಲ್ಲಿ ಇಂಡೆಕ್ಸ್‌ ಶೇರುಗಳಲ್ಲಿ ಅದೇ ಅನುಪಾತದಲ್ಲಿ ಹೂಡಿಕೆ ಮಾಡಲಾಗುತ್ತದೆ ಎನ್ನುವುದನ್ನು ಗಮನಿಸಬೇಕು. ಮ್ಯೂಚುವಲ್‌ ಫ‌ಂಡುಗಳಂತೆ ತಮಗೆ ಬೇಕಾದ ಶೇರುಗಳಲ್ಲಿ ತೊಡಗಿಸುವ ಸ್ವಾತಂತ್ರ್ಯ ಎನ್‌ಪಿಎಸ್‌ ನಿರ್ವಾಹಕರಿಗೆ ಇರುವುದಿಲ್ಲ. ನಿಮ್ಮ ಆಯ್ಕೆಯ ಬದಲಾಗಿ ಸ್ವಯಂಚಾಲಿತ ಆಯ್ಕೆಯನ್ನು ನಮೂದಿಸಿದರೆ ನಿಮ್ಮ ವಯೋಮಾನವನ್ನು ಅನುಸರಿಸಿ ಅವರೇ ಒಂದು ಪೂರ್ವ ನಿಗದಿತ ಕೋಷ್ಟಕದ ಪ್ರಕಾರ ಹೂಡಿಕೆ ಮಾಡುತ್ತಾರೆ.ವಯಸ್ಸು ಏರಿದಂತೆ ಇಕ್ವಿಟಿ ಕಡಿಮೆಯಾಗಿ ಡೆಟ್‌ ಜಾಸ್ತಿಯಾಗುವ ಸೂತ್ರವನ್ನು ಇದರಲ್ಲಿ ಪಾಲಿಸುತ್ತಾರೆ.

ವಾಪಸ್ಸು ಪಡೆಯೋ ಬಗೆ ಹೇಗೆ?
60 ವರ್ಷ ವಯಸ್ಸಾದ ಬಳಿಕ ಈ ರೀತಿ ಬೆಳೆದು ಬಂದ ಫ‌ಂಡಿನಲ್ಲಿರುವ ಗರಿಷ್ಟ 60% ವನ್ನು ಏಕಗಂಟಿನಲ್ಲಿ ಂತೆಗೆಯಬಹುದಾಗಿದೆ. ಬಾಕಿ ಕನಿಷ್ಟ 40% ವನ್ನು ಖಡ್ಡಾಯವಾಗಿ ಯಾವುದೇ ಇನ್ಶೂರನ್ಸ್‌ ಕಂಪೆನಿಯ ಆನ್ಯುಟಿ ಯೋಜನೆಯಲ್ಲಿ ತೊಡಗಿಸಬೇಕು. ಆ ಯೋಜನೆ ಮಾಸಿಕ ಪೆನÒನ್‌ ನೀಡುತ್ತಾ ಹೋಗುತ್ತದೆ. ಸ್ವಂತಕ್ಕೆ ಹಾಗೂ ಬಳಿಕ ಹೆಂಡತಿ/ಗಂಡನಿಗೆ ಈ ಮೂಲಕ ಪಿಂಚಣಿಯನ್ನು ಪಡೆಯಬಹುದು. ಈ ಮೊತ್ತಗಳನ್ನು ಭಾರತಲ್ಲಿಯೂ ಅಥವಾ ಹೊರದೇಶದಲ್ಲಿಯೂ ಪಡೆಯಬಹುದು. 

ಇಲ್ಲಿ ಹಿಂಪಡೆಯುವ ಮೊತ್ತ ಗರಿಷ್ಠ 60% ಅಂದರೆ ಅದರಿಂದ ಕೆಳಗಿನ ಯಾವ ಮೊತ್ತವನ್ನಾದರೂ ಹಿಂಪಡೆಯಬಹುದು – 0% ಕೂಡಾ. ಅಂದರೆ ನೂರಕ್ಕೆ ನೂರು ಶತಮಾನ ಆನ್ಯೂಟಿ ಕೂಡಾ ಪಡೆಯಬಹುದು. ಅಲ್ಲದೆ ಈ ಂಪಡೆತಕ್ಕೆ ಸಮಯಾವಕಾಶವೂ ಇದೆ. ಆನ್ಯೂಟಿ ಆರಂಭ 60 ವರ್ಷದ ಬಳಿಕ 3 ವರ್ಷಗಳೊಳಗೆ ಯಾವಾಗ ಬೇಕಾದರೂ ಆರಂಭಿಸಬಹುದು ಹಾಗೂ ಂಪಡೆಯುವ ಮೊತ್ತ 60 ಕಳೆದು 10 ವರ್ಷಗಳ ಒಳಗೆ ಯಾವಾಗ ಬೇಕಾದರೂ ಆರಂಭಿಸ ಬಹುದು. ಈ ಅವಕಾಶವನ್ನು ಕರ ಉಳಿತಾಯದ ದೃಷ್ಟಿಯಿಂದ ಬಳಸಿಕೊಳ್ಳಬಹುದು.  

ಫ‌ಂಡ್‌ ನಿರ್ವಹಣೆ:
ಆದರೆ ಇದರಲ್ಲಿ ಶೇಖರಗೊಂಡ ದುಡ್ಡಿನ ಹೂಡಿಕೆಯ ಜವಾಬ್ದಾರಿ ಮಾತ್ರ UTI, ICICI, LIC, HDFC, SBI, Kotak Mahindra, Reliance ಕಂಪೆನಿಗಳ ಪೆನÒನ್‌ ಫ‌ಂಡ್‌ ಹೌಸ್‌ಗಳ ಕೈಗೆ ನೀಡಲಾಗಿದೆ. ಅರ್ಜಿಯ ಸಮಯದಲ್ಲಿ ನಿಮ್ಮ ಫ‌ಂಡು ನಿರ್ವಾಹಕರನ್ನು ಆಯ್ದುಕೊಳ್ಳುವ ಹಕ್ಕು ನಿಮಗಿದೆ. ಅದನ್ನು ಆಮೇಲೆ ಬದಲಿಸಲೂಬಹುದು; ಆದರೆ ವರ್ಷಕ್ಕೆ ಒಂದೇ ಬಾರಿ. ನಿರ್ವಾಹಕರ ಈ ಪಟ್ಟಿಗೆ ಶೀಘ್ರವೇ ಬಿರ್ಲಾ ಸನ್‌ಲೈಫ್ ಸೇರುವ ಸೂಚನೆ ಇದೆ.

ಈ ಸ್ಕೀಮಿನಲ್ಲಿ ಪಿಓಪಿ, ಸಿಆರ್‌ಎ, ಕಸ್ಟೊಡಿಯನ್‌ ಹಾಗೂ ಫ‌ಂಡ್‌ ನಿರ್ವಾಹಕರು – ಈ ರೀತಿ 4 ಸಂಸ್ಥೆಗಳು ಧ ಹಂತಗಳಲ್ಲಿ ನಿಮಗೆ ಸೇವೆ ಒದಗಿಸುತ್ತಾರೆ. ಇವರೆಲ್ಲರ ವೆಚ್ಚಗಳನ್ನು ಟೇಬಲ್‌ನಲ್ಲಿ ನೀಡಲಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ವಹಣೆಗೊಳ್ಳುವ ಸ್ಕೀಮ್‌ ಅಂದರೆ ಅದು ನ್ಯಾಶನಲ್‌ ಪೆನÒನ್‌ ಸ್ಕೀಮೇ ಸರಿ.

– ಜಯದೇವ ಪ್ರಸಾದ ಮೊಳೆಯಾರ

Advertisement

Udayavani is now on Telegram. Click here to join our channel and stay updated with the latest news.

Next