Advertisement

ಚುಟುಕಾದ ಟೆಸ್ಟ್: ಅತೀ ಕಡಿಮೆ ಅವಧಿಯಲ್ಲಿ ಮುಗಿದ 5 ಪಂದ್ಯಗಳ ಮಾಹಿತಿ ಇಲ್ಲಿದೆ

08:53 AM Mar 10, 2021 | Team Udayavani |

ನವದೆಹಲಿ: ಅಹ್ಮದಾಬಾದ್‌ನಲ್ಲಿ ನಡೆದ 3ನೇ ಟೆಸ್ಟ್‌ ಪಂದ್ಯ 2 ದಿನಕ್ಕೂ ಮುನ್ನವೇ ಮುಗಿದು ಹೋಗಿದೆ! ನಾಲ್ಕನೇ ಟೆಸ್ಟ್‌ ಕೂಡ ಎರಡೂವರೆ ದಿನಕ್ಕೆ ಮುಗಿದಿದೆ. ಟೆಸ್ಟ್‌ ಪಂದ್ಯಗಳು ಇಷ್ಟು ಬೇಗ ಮುಗಿದು ಹೋದರೆ ಅವುಗಳ ಮಹತ್ವ ಕಳೆದು ಹೋಗುತ್ತದೆ ಎಂಬ ಆರೋಪಗಳೂ ಕೇಳಿ ಬಂದಿವೆ. ಬಹು ಬೇಗನೇ ಮುಗಿ ಯಲು ಪಿಚ್‌ಗಳು ಕಾರಣ ಎಂಬ ಪುಕಾರೂ ಎದ್ದಿದೆ.

Advertisement

ಚೆಂಡು ಎಸೆತದ ಲೆಕ್ಕಾಚಾರ

ಫೆ.24, 25ರಂದು ವಿಶ್ವದ ಬೃಹತ್‌ ಕ್ರಿಕೆಟ್‌ ಮೈದಾನ ನರೇಂದ್ರ ಮೋದಿ ಅಂಗಳದಲ್ಲಿ 3ನೇ ಟೆಸ್ಟ್‌ ಪಂದ್ಯ ನಡೆಯಿತು. ಇದು ಚೆಂಡು ಎಸೆತದ ಲೆಕ್ಕಾಚಾರದಲ್ಲಿ 1935ರ ಅನಂತರ ಅತ್ಯಂತ ಕಡಿಮೆ ಅವಧಿಯಲ್ಲಿ ಮುಗಿದ ಪಂದ್ಯ. ಎರಡನೇ ವಿಶ್ವಯುದ್ಧದ ಅನಂತರ ಕಡಿಮೆ ದಿನಗಳಲ್ಲಿ ಮುಗಿದ ಪಂದ್ಯವೂ ಹೌದು. ಈ ನಿಟ್ಟಿನಲ್ಲಿ ಅತೀ ಕಡಿಮೆ ಅವಧಿಯಲ್ಲಿ ಮುಗಿದ 5 ಪಂದ್ಯಗಳ ಮಾಹಿತಿ ಇಲ್ಲಿದೆ.

656 ಎಸೆತ:  ಆಸ್ಟ್ರೇಲಿಯ-ದ.ಆಫ್ರಿಕಾ (1932)

ದ. ಆಫ್ರಿಕಾ -ಆಸ್ಟ್ರೇಲಿಯಾದ ನಡುವೆ ಮೆಲ್ಬರ್ನ್ ನಲ್ಲಿ ನಡೆದ ಸರಣಿಯ 5ನೇ ಪಂದ್ಯವಿದು. ಮೊದಲು ಬ್ಯಾಟ್‌ ಮಾಡಿದ ಆಫ್ರಿಕನ್ನರು 36ಕ್ಕೆ ಆಲೌಟಾದರು. ಆಸ್ಟ್ರೇಲಿಯಾ 155 ರನ್‌ ಗಳಿಸಿತು. ದ. ಆಫ್ರಿಕಾ 2ನೇ ಇನಿಂಗ್ಸ್‌ನಲ್ಲಿ ಕೇವಲ 45ಕ್ಕೆ ಆಲೌಟಾಯಿತು.ಪರಿಣಾಮ ಆಫ್ರಿಕನ್ನರು ಇನಿಂಗ್ಸ್‌ ಮತ್ತು 72 ರನ್‌ ಗಳಿಂದ ಸೋತುಹೋದರು.

Advertisement

ಇದನ್ನೂ ಓದಿ:  ‘ಸ್ಯಾಟಲೈಟ್ ಮ್ಯಾನ್’ ಉಡುಪಿ ರಾಮಚಂದ್ರರಾವ್ ಅವರ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ

672 ಎಸೆತ:  ವೆಸ್ಟ್‌ಇಂಡೀಸ್‌-ಇಂಗ್ಲೆಂಡ್‌ (1935)

ವಿಂಡೀಸ್‌ನ ಬ್ರಿಜ್‌ಟೌನ್‌ನಲ್ಲಿ ನಡೆದ ಪಂದ್ಯದಲ್ಲಿ ವಿಂಡೀಸ್‌ 1ನೇ ಇನಿಂಗ್ಸ್‌ನಲ್ಲಿ 102ಕ್ಕೆ ಆಲೌಟಾಯಿತು. ಇಂಗ್ಲೆಂಡ್‌ 1ನೇ ಇನಿಂಗ್ಸ್‌ನಲ್ಲಿ 7ಕ್ಕೆ 81 ರನ್‌ ಗಳಿಸಿ ಡಿಕ್ಲೇರ್‌. ವಿಂಡೀಸಿಗರು 2ನೇ ಇನಿಂಗ್ಸ್‌ನಲ್ಲಿ 51 ರನ್‌ಗೆ ಡಿಕ್ಲೇರ್‌. ಇಂಗ್ಲೆಂಡ್‌ಗೆ 4 ವಿಕೆಟ್‌ಗಳ ಜಯ.

788 ಎಸೆತ: ಇಂಗ್ಲೆಂಡ್‌-ಆಸ್ಟ್ರೇಲಿಯಾ (1888)

ಮ್ಯಾಂಚೆಸ್ಟರ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಇಂಗ್ಲೆಂಡ್‌ 1ನೇ ಇನಿಂಗ್ಸ್‌ನಲ್ಲಿ 172 ರನ್‌ಗಳಿಗೆ ಆಲೌಟ್‌. ಆಸೀಸ್‌ 81ಕ್ಕೆ ಆಲೌಟ್‌. ಫಾಲೋಆನ್‌ಗೊಳಗಾಗಿ 2ನೇ ಇನಿಂಗ್ಸ್‌ ಆರಂಭಿಸಿದ ಆಸೀಸ್‌ 70 ರನ್‌ಗೆ ಆಲೌಟ್‌. ಇಂಗ್ಲೆಂಡ್‌ಗೆ ಇನಿಂಗ್ಸ್‌, 21 ರನ್‌ ಜಯ.

842 ಎಸೆತ:  ಭಾರತ-ಇಂಗ್ಲೆಂಡ್‌ (2021)

ಅಹ್ಮದಾಬಾದ್‌ನಲ್ಲಿ ಫೆ.24,25 ಪಂದ್ಯ ನಡೆಯಿತು. ಇಂಗ್ಲೆಂಡ್‌ ಮೊದಲ ಇನಿಂಗ್ಸ್‌ ನಲ್ಲಿ 112ಕ್ಕೆ ಆಲೌಟ್‌. ಭಾರತ 145ಕ್ಕೆ ಆಲೌಟ್‌. ಇಂಗ್ಲೆಂಡ್‌ 2ನೇ ಇನಿಂಗ್ಸ್‌ನಲ್ಲಿ 81ಕ್ಕೆ ಆಲೌಟ್‌. 49 ರನ್‌ ಗುರಿ ಪಡೆದ ಭಾರತ 7.4 ಓವರ್‌ಗಳಲ್ಲಿ ಜಯಿಸಿತು.

872 ಎಸೆತ:  ಆಸ್ಟ್ರೇಲಿಯಾ-ನ್ಯೂಜಿಲೆಂಡ್‌ (1945-46)

ವೆಲ್ಲಿಂಗ್ಟನ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್‌ 1ನೇ ಇನಿಂಗ್ಸ್‌ ನಲ್ಲಿ 42ಕ್ಕೆ ಆಲೌಟಾಯಿತು. ಆಸ್ಟ್ರೇಲಿಯಾ 199 ರನ್‌ ಗಳಿಸಿತು. ನ್ಯೂಜಿಲೆಂಡ್‌ 2ನೇ ಇನಿಂಗ್ಸ್‌ನಲ್ಲಿ 54ಕ್ಕೆ ಆಲೌಟಾಗಿ ಇನಿಂಗ್ಸ್‌, 103 ರನ್‌ಗಳಿಂದ ಸೋಲನುಭವಿಸಿತು.

ಇದನ್ನೂ ಓದಿ:  ಅಯೋಧ್ಯೆ ಸುಸಜ್ಜಿತ ವಿಮಾನ ನಿಲ್ದಾಣ ಶೀಘ್ರ ಸಾರ್ವಜನಿಕರಿಗೆ ಸಂಚಾರ ಮುಕ್ತ

Advertisement

Udayavani is now on Telegram. Click here to join our channel and stay updated with the latest news.

Next