ಜಗತ್ತಿನಲ್ಲಿ ಹಲವಾರು ವಿಧದ ಚಹಾಗಳಿವೆ. ಕಪ್ಪು ಚಹಾ, ಊಲಾಂಗ್ ಚಹಾ, ಹಸಿರು ಚಹಾ ಮತ್ತು ಬಿಳಿ ಚಹಾ ಇವು ಮಾರುಕಟ್ಟೆಯಲ್ಲಿ ಅತ್ಯಂತ ಸಾಮಾನ್ಯವಾಗಿ ಕಂಡು ಬರುವ ಚಹಾದ ವಿಧಗಳಾಗಿವೆ. ಆದರೆ ಮಚ್ಚಾ ಚಹಾದ ಬಗ್ಗೆ ಕೇಳಿದ್ದೀರಾ? ಇದು ಜಪಾನ್ ನ ಸಾಂಪ್ರದಾಯಿಕ ಚಹಾವಾಗಿದೆ. ಮಚ್ಚಾ ಚಹಾವನ್ನು ಗ್ರೀನ್ ಟೀಗಿಂತ ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಇದನ್ನು ಸೂಪರ್ ಫುಡ್ ವರ್ಗದಲ್ಲಿ ಸೇರ್ಪಡೆ ಮಾಡಲಾಗಿದೆ. ವಿಶೇಷ ಏನೆಂದರೆ ಗ್ರೀನ್ ಟೀ ಮತ್ತು ಮಚ್ಚಾ ಚಹಾ ಎರಡನ್ನೂ ಒಂದೇ ಸಸ್ಯದ ಎಲೆಯಿಂದ ತಯಾರಿಸಲಾಗುತ್ತದೆ.
ಇದನ್ನೂ ಓದಿ:ಹೊಸ ಉದ್ಯೋಗಿಗಳ ವೇತನ ಶೇ.50ರಷ್ಟು ಕಡಿತ; ವಿಪ್ರೋ ನಿರ್ಧಾರಕ್ಕೆ ಆಕ್ರೋಶ, ಟೀಕೆ
ಮಚ್ಚಾ ಚಹಾ ತಯಾರಿಸುವಾಗ ಎಲೆಗಳನ್ನು ಕಾಂಡಗಳಿಂದ ಬೇರ್ಪಡಿಸಿ, ನಂತರ ಕುದಿಸಿ ಒಣಗಿಸಿ ಉತ್ತಮವಾದ ಪುಡಿಯನ್ನು ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಚಹಾ ಎಲೆಗಳನ್ನು ಅಥವಾ ಚಹಾ ಪುಡಿಯನ್ನು ಬಿಸಿ ನೀರಿನಲ್ಲಿ ಕುದಿಸಿ ತಯಾರಿಸಲಾಗುತ್ತದೆ. ಆದರೆ ಮಚ್ಚಾ ಚಹಾ ತಯಾರಿಕೆಯಲ್ಲಿ ಚಹಾ ಎಲೆಗಳನ್ನು ಪುಡಿ ರೂಪದಲ್ಲಿ ತಯಾರಿಸಿಟ್ಟು, ಅದನ್ನು ಬಿಸಿ ನೀರಿಗೆ ಹಾಕಿದ ಮೇಲೆ ಫಿಲ್ಟರ್ ಮಾಡಬೇಕಾಗಿಲ್ಲ. ಯಾಕೆಂದರೆ ಮಚ್ಚಾ ಚಹಾ ಪುಡಿ ಬಿಸಿ ನೀರಿನಲ್ಲಿ ಕರಗಿಹೋಗಲಿದೆ. ಈ ಮಚ್ಚಾ ಚಹಾ ಸೇವನೆಯಿಂದ ಕೆಲವು ಆರೋಗ್ಯಕರ ಲಾಭಗಳಿವೆ…
ಅಧಿಕ ರೋಗನಿರೋಧಕ ಶಕ್ತಿ:
ಮಚ್ಚಾ ಚಹಾದಲ್ಲಿ ಕ್ಯಾಟೆಚಿನ್ (ಶ್ರೇಷ್ಠಗುಣಮಟ್ಟದ ಚಹಾದ ಹರಳು) ಸಮೃದ್ಧವಾಗಿದ್ದು, ಇದು ನೈಸರ್ಗಿಕ ರೋಗನಿರೋಧಕಗಳಾಗಿ ಕಾರ್ಯನಿರ್ವಹಿಸುವ ಚಹಾದಲ್ಲಿನ ಸಸ್ಯ ಸಂಯುಕ್ತಗಳ ವರ್ಗವಾಗಿದೆ. ಹಾನಿಕಾರಕ Radicalsಗಳಿಂದಾಗುವ ಅಪಾಯವನ್ನು ತಡೆಗಟ್ಟುತ್ತದೆ. ಅಲ್ಲದೇ ಜೀವಕೋಶಗಳಿಗೆ ಹಾನಿ ಮಾಡುವ ಮತ್ತು ದೀರ್ಘ ಕಾಯಿಲೆಗಳನ್ನು ತಡೆಯಲು ಮಚ್ಚಾ ಚಹಾ ಪ್ರಯೋಜನಕಾರಿಯಾಗಿದೆ.
ಆರೋಗ್ಯಕರ ಚರ್ಮಕ್ಕೆ ಸಹಕಾರಿ:
ಮಚ್ಚಾ ಚಹಾ ಆಂತರಿಕ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುವುದರ ಜತೆಗೆ, ಮಚ್ಚಾ ಚಹಾ ಪುಡಿ ಕೆಫೀನ್ ಮತ್ತು ಇಜಿಸಿಜಿ ಸಂಯುಕ್ತಾಂಶ ಒಳಗೊಂಡಿದೆ.
ಹೃದಯರಕ್ತನಾಳದ ಆರೋಗ್ಯ ಸುಧಾರಣೆ:
ಮಚ್ಚಾದಲ್ಲಿ ಸೂಕ್ಷ್ಮ ಪೌಷ್ಠಿಕಾಂಶಗಳು ಹೇರಳವಾಗಿದೆ. ಮುಖ್ಯವಾಗಿ ಇದು ಎಪಿಗಲ್ಲೊಕಾಟೆಚಿನ್ 3 ಗ್ಯಾಲೇಟ್ (ಇಜಿಸಿಜಿ) ಎಂದು ಕರೆಯಲ್ಪಡುವ ಒಂದು ಸಸ್ಯದ ಸಂಯುಕ್ತ ಮಿಶ್ರಣವಾಗಿದೆ. ಇಜಿಸಿಜಿ ಸಂಶೋಧನೆಯಲ್ಲಿನ ಸಲಹೆಯಂತೆ, ಮಚ್ಚಾ ಚಹಾ ಪುಡಿ ಹೃದಯರಕ್ತನಾಳದ ಮತ್ತು ಚಯಾಪಚಯ ಕ್ರಿಯೆ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ.
ಒತ್ತಡ ನಿವಾರಕಕ್ಕೆ ಸಹಕಾರಿ:
ಜಪಾನ್ ನ ಮಚ್ಚಾ ಚಹಾದಲ್ಲಿ ಅಮೈನೋ ಆ್ಯಸಿಡ್ ಎಲ್ ಥಿಯಾನೈನ್ ಹೆಚ್ಚಿನ ಪ್ರಮಾಣದಲ್ಲಿದ್ದು, ಕಡಿಮೆ ಪ್ರಮಾಣದ ಕೆಫೀನ್ ಮತ್ತು ಕ್ಯಾಟೆಚಿನ್ ಗಳನ್ನು ಹೊಂದಿದೆ. ಮಚ್ಚಾ ಚಹಾ ಸೇವನೆಯಿಂದ ಖಿನ್ನತೆ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.