ಇಟಾನಗರ: ಒಂದು ಚೀಲ ಸಿಮೆಂಟ್‌ಗೆ ಅಬ್ಬಬ್ಟಾ ಅಂದ್ರೆ ಎಷ್ಟು ರೂಪಾಯಿ ನೀಡಿ ಕೊಂಡುಕೊಳ್ಳಬಹುದು. 300, 400, 500 ರೂ.! ಐನೂರೆಲ್ಲ ಜಾಸ್ತಿಯಾಯಿತು ಅಂತಿದ್ದೀರಾ? ಆದ್ರೆ, ನೀವಿದನ್ನು ನಂಬಿ¤àರೋ, ಬಿಡ್ತೀರೋ ಗೊತ್ತಿಲ್ಲ. ಇಲ್ಲೊಂದು ಊರಲ್ಲಿ ಜನ ಒಂದು ಚೀಲ ಸಿಮೆಂಟ್‌ಗೆ ಬರೋಬ್ಬರಿ 8 ಸಾವಿರ ರೂ. ನೀಡಿ ಕೊಂಡುಕೊಳ್ತಿದ್ದಾರೆ. ಅದೂ ಅವರ ಅದೃಷ್ಟ ಚೆನ್ನಾಗಿದ್ದು, ಸಿಮೆಂಟ್ ಸಿಕ್ಕಿದ್ರೆ ಮಾತ್ರ!
ಹೌದು, ಇದು ಅರುಣಾಚಲ ಪ್ರದೇಶದ ವಿಜೋಯ್‌ನಗರ ಗ್ರಾಮದ ನಿವಾಸಿಗಳ “ಕಥೆಯಲ್ಲ ಜೀವನ’. ಇಲ್ಲಿನ ಸಂಪರ್ಕ ವ್ಯವಸ್ಥೆಯ ದುಃಸ್ಥಿತಿ ಬಗ್ಗೆ ವಿವರಿಸುತ್ತಾ ಹೋದರೆ, ಬೆವರಿಳಿಯುವುದು ಖಚಿತ. ಏಕೆಂದರೆ, ಒಂದು ಚೀಲ ಸಿಮೆಂಟ್ ತರ ಬೇಕೆಂದರೆ, ಇವರು 5 ದಿನಗಳ ಕಾಲ ನಡೆದು ಪಟ್ಟಣ ತಲುಪಿ, 8 ಸಾವಿರ ರೂ. ವೆಚ್ಚ ಮಾಡಬೇಕು.
ಅಷ್ಟಕ್ಕೂ ಈ ವಿಷಯ ಬೆಳಕಿಗೆ ಬಂದಿದ್ದು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳ ಜಂಟಿ ಯೋಜನೆಯಾದ “ಪ್ರತಿ ಮನೆಗೂ ಶೌಚಾಲಯ’ (ಐಎಚ್‌ಎಚ್‌ಎಲ್)ದ ಅನುಷ್ಠಾನದ ವೇಳೆ. ಶೌಚಾಲಯ ನಿರ್ಮಿಸಬೇಕಿದ್ದರೂ ಅಗತ್ಯ ವಸ್ತುಗಳನ್ನು ಇಲ್ಲಿಗೆ ತರಿಸಲೇಬೇಕಲ್ಲವಾ? ಅವು ಗಳನ್ನು ತರಿಸಿಕೊಳ್ಳುವುದು ಎಂಥಾ ಕಷ್ಟದ ಕೆಲಸ ಎಂದು ಅಧಿಕಾರಿಗಳು ಹೇಳಿದ ಬಳಿಕವೇ ಇಲ್ಲಿನ ಜನರ ವ್ಯಥೆ ಹೊರಜಗತ್ತಿನ ಅರಿವಿಗೆ ಬಂದಿದ್ದು.
ಹಾಗಿದ್ದರೆ, ಇಲ್ಲಿಗೆ ದಿನಬಳಕೆಯ ಅಗತ್ಯ ವಸ್ತು ಗಳು ತಲುಪುವುದಾದರೂ ಹೇಗೆ? ಅದಕ್ಕಾಗಿ, ಇಲ್ಲಿ ವಾರಕ್ಕೊಂದು ಹೆಲಿಕಾಪ್ಟರ್ ಸೌಲಭ್ಯವಿದೆ ಯಂತೆ. ಆದರೆ, ಈ ವ್ಯವಸ್ಥೆ ಕೂಡ ಹವಾಮಾನ ಪರಿಸ್ಥಿತಿಯನ್ನು ನೆಚ್ಚಿಕೊಂಡಿದೆ. ಪ್ರತಿಕೂಲ ಹವಾ ಮಾನವಿದ್ದರೆ ಕಾಪ್ಟರ್‌ನ ಸುಳಿವೇ ಇರುವುದಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಆದ್ದರಿಂದ ಈ ವ್ಯವಸ್ಥೆಯೂ ಜನರ ಉಪಯೋಗಕ್ಕೆ ಬರುವುದು ಅಷ್ಟಕ್ಕಷ್ಟೆ.
ಹೊತ್ತು ತರೋ ಚಿಂತೆ: ಐಎಚ್‌ಎಚ್‌ಎಲ್ ಯೋಜನೆ ಅಡಿ ಈ ಗ್ರಾಮದಲ್ಲಿ ಶೌಚಾಲಯ ನಿರ್ಮಿಸುವ ಯೋಜನೆ ರೂಪಿಸಿದ ಬಳಿಕ ಅದರ ನಿರ್ಮಾಣಕ್ಕೆ ಸಿಮೆಂಟ್ ಮತ್ತು ಇತರ ವಸ್ತುಗಳನ್ನು ಸಾಗಿಸಲು ಜನರು ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ಸಾರ್ವಜನಿಕ ಆರೋಗ್ಯ ಇಲಾಖೆಯು ಶೌಚಾಲಯ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದೆ. ಭಾರತ-ಚೀನಾ-ಮ್ಯಾನ್ಮಾರ್ ಟ್ರೈಜಂಕ್ಷನ್‌ನಲ್ಲಿರುವ ಈ ಪಟ್ಟಣಕ್ಕೆ ನಂಪಾದ ಅಭಯಾರಣ್ಯ ಮಾರ್ಗವಾಗಿ ಸಿಮೆಂಟು ಮತ್ತಿತರ ವಸ್ತುಗಳನ್ನು ತರಬೇಕು. ಇದನ್ನು ಮಾನವರೇ ಹೊತ್ತೂಯ್ಯಬೇಕು. ಒಂದು ಬಾರಿ ಪಟ್ಟಣಕ್ಕೆ ಹೋಗಿ ಬರಲು ಐದಾರು ದಿನಗಳೇ ಬೇಕಾಗುತ್ತದೆ. ಏಕೆಂದರೆ ಪಟ್ಟಣ ಇರುವುದು 156 ಕಿ.ಮೀ. ದೂರದಲ್ಲಿ ಎನ್ನುತ್ತಾರೆ ಪಿಎಚ್‌ಇ ಅಧಿಕಾರಿ ಆಡೊ.
1 ಡಬುÉ é ಸಿ ಪ್ಯಾನ್‌ಗೆ 2,000 ರೂ., 1 ಚೀಲ ಸಿಮೆಂಟಿಗೆ 8,000 ರೂ. (ಕೆ.ಜಿ.ಗೆ ಸುಮಾರು 150 ರೂ.) ಕೊಟ್ಟು ತರಬೇಕಾಗುತ್ತದೆ. ಇಷ್ಟೆಲ್ಲ ಅನಾನು ಕೂಲಗಳ ಮಧ್ಯೆಯೂ ಶೌಚಾಲಯ ನಿರ್ಮಾಣ ಕೆಲಸವನ್ನು ವೇಗವಾಗಿಯೇ ಮಾಡುತ್ತಿದ್ದೇವೆ ಎಂದಿದ್ದಾರೆ. ಏಕೆಂದರೆ, ಈ ಗ್ರಾಮವನ್ನು ಡಿಸೆಂಬರ್ ಅಂತ್ಯದೊಳಗೆ ಬಯಲು ಶೌಚ ಮುಕ್ತಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ.
ವಿಜೋಯ್‌ನಗರಕ್ಕೆ ರಸ್ತೆ ನಿರ್ಮಾಣ ಮಾಡಲು ರಾಜ್ಯ ಸರಕಾರ ಒಪ್ಪಿಗೆ ನೀಡಿದೆ ಎಂದು ರಾಜ್ಯದ ಸಾರಿಗೆ ಸಚಿವರು ಹೇಳಿದ್ದಾರೆ. ರಸ್ತೆಯಿಲ್ಲದೇ ಈ ಗಡಿ ಪ್ರದೇಶ ಅಭಿವೃದ್ಧಿಯಿಂದ ತುಂಬಾ ದೂರವೇ ಉಳಿದಿದೆ. ಮೂಲ ಸೌಕರ್ಯಗಳ ಕೊರತೆಯಿಂದಾಗಿ ಬಹುತೇಕರು ಪಟ್ಟಣಗಳಿಗೆ ವಲಸೆ ಹೋಗಿದ್ದಾರೆ. 2014ರಲ್ಲಿ ಕೇಂದ್ರ ಸರಕಾರ ಅರುಣಾಚಲ ಪ್ರದೇಶದ 100 ಹಳ್ಳಿಗಳನ್ನು ವಾಸಯೋಗ್ಯ ಹಳ್ಳಿಗಳನ್ನಾಗಿ ಪರಿವರ್ತಿಸುವುದಾಗಿ ಘೋಷಿಸಿತ್ತು. ಆದರೆ ಈವರೆಗೂ ಈ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಎಲ್ಲಿದೆ ಈ ಕುಗ್ರಾಮ?
ಅರುಣಾಚಲ ಪ್ರದೇಶದ ವಿಜೋಯ್‌ನಗರ ಚಾಂಗ್ಲಾಂಗ್ ಜಿಲ್ಲೆಯಲ್ಲಿರುವ ಪುಟ್ಟ ಗ್ರಾಮ. ಜನಸಂಖ್ಯೆ 1,500. ಚಕಾ¾ ಮತ್ತು ಹಜೋಂಗ್ ಜನಾಂಗದವರೇ ನೆಲೆಸಿದ್ದಾರೆ. ಸರಿಯಾದ ಸಂಪರ್ಕ ವ್ಯವಸ್ಥೆಯೇ ಈ ಊರಿಗೆ ಇಲ್ಲ. ಇಲ್ಲಿಯ ಜನ ಮಾರುಕಟ್ಟೆ ಪ್ರದೇಶಕ್ಕೆ ತೆರಳಬೇಕು ಎಂದರೆ 5 ದಿನಗಳ ಕಾಲ ನಡೆದುಕೊಂಡು ಮಿಯಾವೊ ಪಟ್ಟಣ ತಲುಪಬೇಕು.