Advertisement

Israel-Hamas ಬಲಾಬಲಗಳ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ

01:16 AM Oct 10, 2023 | Team Udayavani |

ಇಸ್ರೇಲ್‌ ಮತ್ತು ಹಮಾಸ್‌ ಉಗ್ರ ಸಂಘಟನೆ ನಡುವೆ ಯುದ್ಧ ನಡೆಯುತ್ತಿದೆ. ಒಂದು ಶಕ್ತಿಯುತ ರಾಷ್ಟ್ರವಾಗಿ ಇಸ್ರೇಲ್‌ ಯುದ್ಧ ಸಾಮರ್ಥ್ಯವನ್ನು ಹೊಂದಿದೆ. ಹಮಾಸ್‌ ಉಗ್ರರು ಕೂಡ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಮೂಲಕ ದಾಳಿ ನಡೆಸುತ್ತಿದ್ದಾರೆ. ಎರಡೂ ಕಡೆಯ ಬಲಾಬಲಗಳ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Advertisement

ಹಮಾಸ್‌ ಬತ್ತಳಿಕೆಯಲ್ಲಿ ಏನಿವೆ?
– ಹಮಾಸ್‌ ತನ್ನ ಉಗ್ರರನ್ನು ಇಸ್ರೇಲ್‌ಗೆ ನುಸುಳಿಸಲು ಗ್ಲೈಡರ್ ಗಳನ್ನು ಬಳಸುತ್ತಿದೆ. ಚೆಕ್‌ ಪೋಸ್ಟ್‌ಗಳಲ್ಲಿ ಬಿಗಿ ಭದ್ರತೆ ಹಿನ್ನೆಲೆ ಆಕಾಶ ಮಾರ್ಗದಲ್ಲಿ ಗ್ಲೈಡರ್ ಗಳನ್ನು ಬಳಸಿ, ಉಗ್ರರನ್ನು ರವಾನಿಸುತ್ತಿದೆ.
– ಇಸ್ರೇಲ್‌ನ “ಮರ್ಕಾವಾ 4′ ಯುದ್ಧ ಟ್ಯಾಂಕ್‌ಗಳನ್ನು ಹೊಡೆದುರುಳಿಸಲು ಮೊದಲ ಬಾರಿಗೆ ಹಮಾಸ್‌ ಶಸ್ತ್ರಸಜ್ಜಿತ ಡ್ರೋನ್‌ಗಳನ್ನು ಬಳಸುತ್ತಿದೆ.
– ಹಮಾಸ್‌ ಉಗ್ರರು ರಾಕೆಟ್‌ ಮೂಲಕ ದಾಳಿ ನಡೆಸುತ್ತಿದ್ದಾರೆ. ನೇರವಾಗಿ ಇಸ್ರೇಲ್‌ ರಾಜಧಾನಿ ಟೆಲ್‌ಅವಿವ್‌ ಮೇಲೆ ದಾಳಿ ನಡೆಸುವ ಸಾಮರ್ಥಯವುಳ್ಳ ರಾಕೆಟ್‌ಗಳು ಹಮಾಸ್‌ ಬಳಿ ಇವೆ.
– ಹಮಾಸ್‌ ಬಳಿ ಹಲವು ಯುದ್ಧ ಹಡಗುಗಳಿವೆ. ಇವುಗಳನ್ನು ಬಳಸಿಕೊಂಡು ದಾಳಿ ನಡೆಸಲು ಹಮಾಸ್‌ ಮುಂದಾಗಿದೆ. ಆದರೆ ಹಲವು ಹಡಗುಗಳನ್ನು ಇಸ್ರೇಲ್‌ ಸೇನೆ ವಶಕ್ಕೆ ಪಡೆದಿದೆ.
-ಹಲವು ಯುದ್ಧ ಟ್ಯಾಂಕ್‌ಗಳು, ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಹಾಗೂ ಅಪಾರ ಪ್ರಮಾಣದ ಮದ್ದು-ಗುಂಡುಗಳು ಹಮಾಸ್‌ ಬತ್ತಳಿಕೆಯಲ್ಲಿ ಇವೆ.

ಇಸ್ರೇಲ್‌ ಮಿಲಿಟರಿ ಪವರ್‌:
– ಎಫ್-35 ಯುದ್ಧ ವಿಮಾನಗಳು
– ಸ್ಮಾರ್ಟ್‌ ಬಾಂಬುಗಳು. ಇವು ಗುರಿಗಳ ಮೇಲೆ ಕನಿಷ್ಠ ಹಾನಿ ಉಂಟುಮಾಡುತ್ತವೆ.
– ಸುಮಾರು 500 “ಮರ್ಕಾವಾ 4′ ಯುದ್ಧ ಟ್ಯಾಂಕ್‌ಗಳು
– ಸೆನ್ಸರ್‌ಗಳನ್ನು ಬಳಸಿ ಗುರಿಗಳನ್ನು ಪತ್ತೆಹಚ್ಚಲು ಹಾಗೂ ಅವುಗಳ ಮೇಲೆ ದಾಳಿ ನಡೆಸಲು ನ್ವೆಟÌರ್ಕ್‌ ಕೇಂದ್ರಿತ ಕಾರ್ಯಾಚರಣೆ ವ್ಯವಸ್ಥೆ.
– ಶತ್ರುಗಳ ಕ್ಷಿಪಣಿಗಳು ಹಾಗೂ ನೌಕಾ ಡ್ರೋನ್‌ಗಳ ದಾಳಿಯನ್ನು ತಡೆಯಬಲ್ಲ, ಜತೆಗೆ ಪ್ರತಿ ದಾಳಿ ನಡೆಸಬಲ್ಲ ಕ್ಷಿಪಣಿ ಹಡಗುಗಳು.
– ಇಸ್ರೇಲ್‌ ಅಣುಬಾಂಬ್‌ಗಳನ್ನು ಕೂಡ ಹೊಂದಿವೆ. ಪರಿಸ್ಥಿತಿ ಹದಗೆಟ್ಟರೆ ಇವುಗಳನ್ನು ಬಳಸಬಹುದು. ಆದರೆ ಸದ್ಯದ ಮಟ್ಟಿಗೆ ಇದರ ಬಳಕೆ ಸಾಧ್ಯತೆ ತುಂಬ ಕಡಿಮೆ.

Advertisement

Udayavani is now on Telegram. Click here to join our channel and stay updated with the latest news.

Next