Advertisement
ಹಿಡಿದ ಕಾರ್ಯವನ್ನು ಸುಲಭವಾಗಿ ಕೈಬಿಡದವರುಕುಂಭರಾಶಿಯ ಜನ ಒಮ್ಮೆ ಒಂದು ಕೆಲಸವನ್ನು ಮಾಡಿ ಮುಗಿಸಬೇಕು ಎಂಬ ಜಿದ್ದಿಗೆ ಬಿದ್ದರೆ ಆ ಕಾರ್ಯವನ್ನು ಮುಗಿಸದೆ ವಿರಮಿಸಲಾರರು. ನಮ್ಮ ದೇಶದ ಮಾಜಿ ಪ್ರಧಾನಿಗಳಾದ ದೇವೇಗೌಡರ ಜಿಗುಟುತನವನ್ನೇ ಗಮನಿಸಿ. ಚಂದ್ರನು ಅವರ ಜಾತಕದಲ್ಲಿ ಲಗ್ನಾಧಿಪತಿಯಾಗಿ ಕರ್ಕರಾಶಿಯ ಅಧಿಪತಿಯಾಗಿದ್ದಾನೆ. ಮೇಲ್ನೋಟಕ್ಕೆ ಅಷ್ಠಮಸ್ಥಾನದಲ್ಲಿ ಕೇತುವಿನೊಂದಿಗೆ ಕೂಡಿ ಬಹುಶಃ ಗೌಡರಿಗೆ ತೊಂದರೆ ತರುವ ಗ್ರಹವಾಗಿ ಪರಿವರ್ತಿತನಾಗುತ್ತಾನೆ ಎಂದು ತಿಳಿಯುವಂತೆ ರಾಹುಗ್ರಸ್ಥನಾಗಿ ಕುಂಭರಾಶಿಯಲ್ಲಿ ಕುಳಿತಿದ್ದಾನೆ. ಆದರೆ ರಾಹುವು ಪೂರ್ವಾಭಾದ್ರ ನಕ್ಷತ್ರದಲ್ಲಿರುವ ಚಂದ್ರನೊಂದಿಗೆ ಇರುವುದರಿಂದ ತನ್ನ ಸ್ವಂತ ನಕ್ಷತ್ರ ಶತಭಿಷಾದಲ್ಲಿದ್ದು ಅಲ್ಪಾಯುಷ್ಯವನ್ನು ತಪ್ಪಿಸಿದ್ದಾನೆ. ದೇವೇಗೌಡರು ಅಷ್ಟಮದಲ್ಲಿ ರಾಹುವಿನ ಜೊತೆ ಇರುವ ಚಂದ್ರನ ಕಾರಣದಿಂದ ದೀರ್ಘಾಯುಸ್ಸನ್ನು ಸಂಪಾದಿಸಿಕೊಂಡರು. ಶನೈಶ್ಚರನು ಚಂದ್ರನ ಉಪಸ್ಥಿತಿ ತನ್ನ ಅಧಿಪತ್ಯದ ಕುಂಭರಾಶಿಯಲ್ಲೇ ಇದ್ದುದರಿಂದ ದೇವೇಗೌಡರ ಜಾತಕದಲ್ಲಿ ದುಷ್ಟನಾಗಿ ಮೇಲ್ನೋಟಕ್ಕೆ ಕಂಡರೂ ಕಳತ್ರಸ್ಥಾನಾಧಿಪತಿಯಾಗಿ ದೇವೇಗೌಡರ ಪತ್ನಿಯ ಯೋಗಬಲದ ಹಿನ್ನೆಲೆಯಲ್ಲಿ ಸಮಾಜದ ಕೆಳಸ್ತರದ ಜನರಲ್ಲಿಆತ್ಮವಿಶ್ವಾಸ ಬೆಳೆಸಿ ಒಳ್ಳೆಯ ರಾಜಕೀಯ ಸಂಘಟಕನನ್ನಾಗಿ ದೇವೇಗೌಡರನ್ನು ರೂಪಿಸಿದ್ದಲ್ಲದೆ ಹಿಡಿದ ಹಠವನ್ನು ಬಿಡದೆ ಬೆಂಬತ್ತಿ ಹೋರಾಡುವ ಜಿಗುಟುತನ ಒದಗಿಸಿ ಕೊಟ್ಟನು. ಸಾಡೇ ಸಾತಿ ಕಾಟ ಇದ್ದರೂ ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟುಗಳ ನಡುವೆಯೇ ವಿರೋಧಿಗಳ ಮೇಲೆ ಹಿಡಿತ ಸಾಧಿಸಿ ಕರ್ನಾಟಕದ ಮುಖ್ಯಮಂತ್ರಿಗಳೂ ಆದರು. ಮುಖ್ಯಮಂತ್ರಿಪಟ್ಟ ಹೊಯ್ದಾಡುವ ಜೋಕಾಲಿಯಂತೆ ದೇವೇಗೌಡರ ಎದುರು ಕಣ್ಣಾಮುಚ್ಚಾಲೆ ಆಟ ಆಡಿದರೂ ಅಂತಿಮವಾದ ಶಕ್ತಿಯ ಒಟ್ಟೂ ಸಾಂದ್ರತೆ ಕುಂಭರಾಶಿ ಯವರಾಗಿದ್ದರಿಂದಲೇ ಗೌಡರು ಪಟ್ಟಾಭಿಷಿಕ್ತರಾದರು. ಲಾಭವನ್ನು ಒದಗಿಸುತ್ತಲೇ ಬೇಕಾದ ಶುಕ್ರನು ಗೌಡರಿಗೆ ಸಂಪನ್ನನಲ್ಲದಿದ್ದರೂ ತನ್ನ ದಶಾಕಾಲದಲ್ಲಿ ಚಂದ್ರನಿಂದ ಬಹುಮುಖ್ಯವಾದ ಸುಖಸ್ಥಾನದಲ್ಲಿದ್ದುದರಿಂದ ಪೂರ್ವಪುಣ್ಯ ನಿರ್ದೇಶಿತ ಪ್ರಧಾನಿ ಪಟ್ಟವನ್ನು ಕೂಡಾ ನಾಟಕೀಯ ಸನ್ನಿವೇಶಗಳೊಂದಿಗೆ ಗೌಡರು ಅಲಂಕರಿಸುವ ಅದ್ಭುತ ಯೋಗವನ್ನು ಕರುಣಿಸಿದನು. ಕುಂಭರಾಶಿಯು ಗೌಡರಿಗೆ ನಕಾರಾತ್ಮಕ ಅಲೆಗಳನ್ನು ಸಕಾರಾಥ¾ಕಗೊಳಿಸಿದ ಅದ್ಭುತವನ್ನು ಕುಂಭರಾಶಿಯ ಚಂದ್ರನಿಂದ ಪಡೆಯುವಂತಾಯ್ತು. ಬಹುದೊಡ್ಡ ವಾಗ್ಮಿ ಎಂಬ ಹಣೆಪಟ್ಟಿ ಪಡೆಯದಿದ್ದರೂ ಗೌಡರ ಮಾತುಗಳು ತಮ್ಮೆದುರಿಗಿರುವ ಜನರನ್ನು ಮೋಡಿಗೊಳಿಸುವ ವಿಶೇಷ ಪಡೆದಿದ್ದಂತೂ ಸತ್ಯ.
ದೇವೇಗೌಡರ ಕುಂಭರಾಶಿಯ ಚಂದ್ರನ ಶಕ್ತಿ ಸಕಾರಾತ್ಮಕ ಅಂಶ ಪಡೆದಿದ್ದರೆ ಇಂಗ್ಲೆಂಡಿನ ಮಾಜಿ ಯುವರಾಣಿ ಲೇಡಿ ಡಯಾನ ಕುಂಭರಾಶಿಯ ಚಂದ್ರನ ನಕಾರಾತ್ಮಕ ಸ್ಪಂದನಗಳಿಂದಾಗಿ ಭೀಕರ ರಸ್ತೆ ಅಪಘಾತದಲ್ಲಿ ದಾರುಣ ಮೃತ್ಯುವನ್ನು ಕಂಡಳು. ಮರಣಸ್ಥಾನದ ಅಧಿಪತಿಯಾದ ಚಂದ್ರ ವಿಪರೀತ ರಾಜಯೋಗ ದಯಪಾಲಿಸಿದ್ದನಾದರೂ ಶನಿಕಾಟದ ಸಂದರ್ಭದಲ್ಲಿ ಶನೈಶ್ಚರನು ಒದಗಿಸಿದ ಮೃತ್ಯುದಂಡವನ್ನು ಸಾಧ್ಯವಾಗಲಿಲ್ಲ. ಲಗ್ನಾಧಿಪತಿಯಾದ ನೀಚಗುರುವಿನ ಜತೆ ಇದ್ದ ಶನೈಶ್ಚರ ಸಾಡೆಸಾತಿ ಕಾಟದ ಯಾತನಾಮಯ ಶನೈಶ್ಚರನಾಗಿ ತೀರಾ ಎಳೆವಯಸ್ಸಿನ ಡಯಾನರನ್ನು ರಸ್ತೆ ಅಪಘಾತಕ್ಕೆ ಸಿಲುಕಿಸಿ ಬದುಕಿನ ಅಂತ್ಯಕ್ಕೆ ಚರಮಗೀತೆ ಹಾಡಿದ್ದ. ವೈರಿಯಾದ ಸೂರ್ಯನ ಉತ್ತರಾಷಾಢ ನಕ್ಷತ್ರಸ್ಥಿತ ಶನೈಶ್ಚರನಿಗೆ ಗುರು ಗೋಚಾರದಲ್ಲಿ ಮಾರಕಸ್ಥಾನಕ್ಕೆ ಬಂದಾಗ ಬದುಕಿನ ವ್ಯಾಪಾರ ಮುಗಿಸಿ ಹೊರಡಿಸುವಲ್ಲಿ ಚಂದ್ರನ ದೌರ್ಬಲ್ಯ ಬಲ ಪಡೆದು ಅಂತಿಮ ಯಾತ್ರೆಗೆ ವರ್ತಮಾನವನ್ನು ಸಿದ್ಧಪಡಿಸಿ ಡಯಾನರ ಬಲಿ ಪಡೆದಿದ್ದ. ಗುರು ದಶಾವೂ ಆಗಿದ್ದರಿಂದ ಶನೈಶ್ಚರನಿಗೆ ಡಯಾನಾರ ಸಾವನ್ನು ಮೂರ್ತಗೊಳಿಸಲು ತೊಂದರೆ ಬರಲೇ ಇಲ್ಲ. ಅಲ್ಪಾಯುಷಿವಿನಲ್ಲಿಯೇ ಡಯಾನ ದಾರುಣ ಅಂತ್ಯ ಕಂಡರು. ಹೊಂದಾಣಿಕೆಯಾಗದ ದಾಂಪತ್ಯದ ಬೇಗುದಿಯಲ್ಲಿ ಶನಿಕಾಟದ ದಿನಗಳನ್ನು ಕಳೆದರು. ಗಂಡನಿಂದ ವಿಚ್ಛೇದನ ಹಿಡಿತವನ್ನು ಸಾಧಿಸಲಾಗದ ಮನೋವ್ಯಾಕುಲತೆ ರಾಜಕುಮಾರಿಯಾದರೂ ಸುಖವಿರದ ದಿನಗಳನ್ನು ಕಳೆದರು. ಒಟ್ಟಿನಲ್ಲಿ ಕುಂಭರಾಶಿಯ ಚಂದ್ರ ದುರ್ಬಲನಾದಾಗ ಯಾವ ವಿವಿಧ ಕಾರಣಗಳಿಂದ ಸಂಪನ್ನತೆ ತರಬಲ್ಲ, ತಾರದೆಯೇ ಯಾತನೆಯ ಗಂಟು ಒದಗಿಸಿ ಬಿಡಬಲ್ಲ ಎಂಬುದಲಕ್ಕೆ ದೇವೇಗೌಡ ಹಾಗೂ ಡಯಾನ ಜಾತಕಗಳೇ ಸಾಕ್ಷಿ.
Related Articles
ಈ ಹಿಂದಿನ ಸೋವಿಯತ್ ರಷ್ಯಾ ಒಕ್ಕೂಟದ ಖ್ಯಾತ ಬರಹಗಾರ ಸೋಲೆl ನಿತಿನ್ ತನ್ನ ಕ್ರಾಂತಿಯ ಬರಹ ವಿಚಾರಧಾರೆಗಳಿಂದ ಸೋವಿಯತ್ ಯೂನಿಯನ್ನಿನ ಕೆಂಗಣ್ಣಿಗೆ ಗುರಿಯಾಗಿದ್ದ ಮಹಾನ್ ಹೋರಾಟಗಾರ. ಅಭಿವ್ಯಕ್ತಿ ಸ್ವಾತಂತ್ರ್ಯವೇ ಇರದ ಮನುಷ್ಯನ ಬದುಕು ಒಂದು ವಿಕಾರ ಬದುಕಾಗದೆ ಇರಲು ಹೇಗೆ ಸಾಧ್ಯ? ಎಂಬುದು ಅವನ ನಿಲುವಾಗಿತ್ತು. ಸೋವಿಯತ್ ಯೂನಿಯನ್ನಿನ ಪಟ್ಟಭದ್ರ ಜನವಿರೋಧಿ ದಮನಕಾರಕ ಆಡಳಿತದ ವಿರುದ್ಧ ಲೇಖನಿಯನ್ನೇ ಖಡ್ಗವನ್ನಾಗಿಸಿಕೊಂಡಿದ್ದ ನಿತ್ಸಿನ್ ಸೋವಿಯತ್ ಪ್ರಭುತ್ವವನ್ನು ಖಂಡಿಸಿದ್ದಾತ, ಎದುರು ಹಾಕಿಕೊಂಡಿದ್ದು ಸೋವಿಯತ್ ಯೂನಿಯನ್ನಿನ ಕಮ್ಯುನಿಷ್ಟ್ ಸರಕಾರದ ವರಿಷ್ಟ ಸ್ಟಾಲಿನ್‌ನನ್ನು. ಸ್ಟಾಲಿನ್ ಮನಸ್ಸು ಮಾಡಿದ್ದರೆ ಇವನನ್ನು ರಾಜಕೀಯ ಕೈದಿಯನ್ನಾಗಿಸಿ ರಾಜದ್ರೋಹದ ಆರೋಪದ ಮೇಲೆ ಮರಣದಂಡನಗೆ ಗುರಿಪಡಿಸಬಹುದಿತ್ತು. ಆದರೆ ಇವನ ಪರ ಜಾಗತಿಕ ಬೆಂಬಲವಿದ್ದುದರಿಂದ ಸ್ಟಾಲಿನ್ ಕೇವಲ ಕಾರಾಗೃಹವಾಸ ವಿಧಿಸಿದ್ದ. ಎಂಟು ವರ್ಷಗಳ ದೀರ್ಘಕಾಲ ನಿರಂತರ ಬಂಧಿಯಾಗಿ ಕಾಲಕಳೆದ. ಆದರೆ ಬುಧದಶಾ ಕಾಲವಾದುದರಿಂದ ಬುಧನಿಂದ ಸಂಪನ್ನತೆ ಪಡೆದಿದ್ದ ಕೇತು ಬಂಧನದಲ್ಲೂ ನಿತ್ಸಿನ್‌ನ ಕೂದಲೂ ಕೊಂಕದಂತೆ ಆರೈಕೆ ನಡೆಸಿದ್ದ. ಬೌದ್ಧಿಕತೆಯ ವಿಚಾರಧಾರೆಯನ್ನು ಕಮ್ಯುನಿಷ್ಟ್ ಸರಕಾರ ನಿತ್ಸಿನ್ ಕಸಿಯಲು ಸಾಧ್ಯವಾಗಲಿಲ್ಲ. ಇಲ್ಲಿಯೂ ವಿಪರೀತ ರಾಜಯೋಗದ ಸಿದ್ಧಿ ಪಡೆದ ಕುಂಭರಾಶಿಯ ಚಂದಸ್ರನಿಗೆ ಮರಣಾಧಿಪತಿಯಾದರೂ ಮರಣವನ್ನು ತರಲಾಗಲಿಲ್ಲ. ಅಷ್ಟೇ ಏಕೆ ಕೇವಲ 52ನೇ ವಯಸ್ಸಿನಲ್ಲಿ ಅನುಪಮವಾದ ದಿವ್ಯಶಕ್ತಿಯನ್ನು ಪಡೆದಿದ್ದ ಕೇತುದಶೆ ನೋಬೆಲ್ ಪುರಸ್ಕಾರವನ್ನು ಕೂಡಾ ಒದಗಿಸಿಕೊಟ್ಟಿತು. ವಿಪರೀತ ರಾಜಯೋಗಕಾರಕ ಕುಂಭರಾಶಿಯ ಚಂದ್ರನಿಗೆ ಲಗ್ನಾಧಿಪತಿ ಗುರುವಿನ ದೃಷ್ಟಿ ಇದ್ದದ್ದು ಇವನನ್ನು ಉತ್ತಮ ಚಿಂತಕನನ್ನಾಗಿಯು ಬರಹಗಾರನನ್ನಾಗಿಯೂ ರೂಪಿಸಿತು.
Advertisement
ಅನಂತಶಾಸ್ತ್ರೀ