Advertisement

ಬಿಎಚ್‌-ಸೀರೀಸ್‌: ಮಾನದಂಡ ಬದಲು

01:01 AM Dec 23, 2021 | Team Udayavani |

ಹೊಸದಿಲ್ಲಿ: ಹೊಸ ವಾಹನಗಳನ್ನು “ಭಾರತ್‌ ಸರಣಿ'(ಬಿಎಚ್‌-ಸೀರೀಸ್‌) ಯಲ್ಲಿ ನೋಂದಣಿ ಮಾಡುವ ಪ್ರಕ್ರಿಯೆ ಆಗಸ್ಟ್‌ನಿಂದಲೇ ಆರಂಭ­ವಾಗಿದ್ದರೂ, ಈಗ ಕೇಂದ್ರ ಸರಕಾರವು ಮಾನದಂಡವನ್ನು ಬದಲಾಯಿಸಿದೆ.

Advertisement

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ರಾಜ್ಯಸಭೆಗೆ ಈ ಮಾಹಿತಿ ನೀಡಿದ್ದಾರೆ. ಅದರಂತೆ, ವೈಯಕ್ತಿಕ ವಾಹನವೊಂದು ಭಾರತ್‌ ಸೀರೀಸ್‌ನಲ್ಲಿ ನೋಂದಣಿ­ಯಾಗಿದ್ದರೆ, ಅದರ ಮಾಲಿಕನು ಒಂದು ರಾಜ್ಯದಿಂದ ಮತ್ತೂಂದು ರಾಜ್ಯಕ್ಕೆ ಶಿಫ್ಟ್ ಆದಾಗ, ಹೊಸ ನೋಂದಣಿ ಪಡೆಯಬೇಕಾದ ಅಗತ್ಯವಿರುವುದಿಲ್ಲ ಎಂದು ಗಡ್ಕರಿ ತಿಳಿಸಿದ್ದಾರೆ.

ಇದನ್ನೂ ಓದಿ:ಕೊಡಗು ಜಿಲ್ಲೆಯಲ್ಲಿ ಆರ್‌ಟಿಸಿ ಸಮಸ್ಯೆ ನಿವಾರಣೆಗೆ ಕ್ರಮ: ಸಚಿವ ಆರ್‌. ಅಶೋಕ್‌

ಅಲ್ಲದೇ, ರಕ್ಷಣಾ ಸಿಬಂದಿ, ಕೇಂದ್ರ ಸರಕಾರ/ರಾಜ್ಯ ಸರಕಾರ/ ಕೇಂದ್ರ ಅಥವಾ ರಾಜ್ಯ ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಚೇರಿಗಳನ್ನು ಹೊಂದಿರುವಂತಹ ಖಾಸಗಿ ವಲಯದ ಕಂಪೆನಿಗಳು/ ಸಂಸ್ಥೆಗಳ ಉದ್ಯೋಗಿಗಳು ಸ್ವಇಚ್ಛೆಯಿಂದ ಈ ಸೌಲಭ್ಯವನ್ನು ಪಡೆಯಬಹುದು ಎಂದು ಗಡ್ಕರಿ ಹೇಳಿದ್ದಾರೆ.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next