Advertisement

ಹತ್ತು ಕಾಡಾನೆಗಳ ಹಿಂಡು ಪ್ರತ್ಯಕ್ಷ

11:43 AM Jan 12, 2017 | Team Udayavani |

ಚನ್ನಪಟ್ಟಣ: ಹತ್ತು ಆನೆಗಳ ತಂಡ ಕಾಣಿಸಿಕೊಂಡು ಜನರಲ್ಲಿ ¸‌ಯಭೀತಿ ಉಂಟು ಮಾಡಿರುವ ಘಟನೆ ತಾಲೂಕಿನ ಕೋಡಂಬಹಳ್ಳಿ ಸಿಂಗರಾಜಿಪುರ ರಸ್ತೆಯಲ್ಲಿ ಬುಧವಾರ ನಡೆದಿದೆ. ಕೋಡಂಬಹಳ್ಳಿ ಕೆರೆಯಲ್ಲಿ ನೀರು ತುಂಬಿರುವ ಹಿನ್ನೆಲೆಯಲ್ಲಿ ಈ ಆನೆಗಳು ಕೆರೆ ನೀರು ಕುಡಿಯಲು ಬಂದಿದ್ದು ಕೋಡಂಬಹಳ್ಳಿ ಸಿಂಗರಾಜಿಪುರ ರಸ್ತೆಯಲ್ಲಿ ಬೀಡುಬಿಟ್ಟಿದ್ದ ಆನೆಗಳನ್ನು ಕಂಡ ಸಾರ್ವಜನಿಕರು ಭಯದಲ್ಲಿ ದಿಕ್ಕಾಪಾಲಾಗಿ ಓಡಿದ್ದಾರೆ.

Advertisement

ಸುದ್ದಿ ತಿಳಿದು ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಗಳನ್ನು ಕಾಡಿಗೆ ಅಟ್ಟಲು ಹರಸಾಹಸ ಪಟ್ಟಿದ್ದಾರೆ. ಆನೆಗಳು ಕಾಡಿನ ಕಡೆಗೆ ಹೋಗುವ ಮಾರ್ಗದಲ್ಲಿ ಸಿಕ್ಕ ಬೆಳೆಗಳು, ಪಂಪ್‌ಸೆಟ್‌ಗಳನ್ನು ತುಳಿದು ನಾಶಮಾಡಿವೆ. ಆನೆಗಳ ದಾಳಿಯಿಂದ ಬಾಳೆ, ಟೊಮೆಟೋ, ತೆಂಗಿನ ಬೆಳೆ ಸೇರಿದಂತೆ ಹಲವು ಬೆಳೆಗಳು ಧ್ವಂಸವಾಗಿವೆ.

ಇಷ್ಟೊಂದು ಆನೆಗಳನ್ನು ಒಟ್ಟಿಗೆ ನೋಡಿ ಜನರು ಭಯಭೀತರಾಗಿದ್ದಾರೆ. ಆನೆಗಳು ಹನಿಯೂರು, ಮಾದೇಗೌಡನದೊಡ್ಡಿ, ಸಾತನೂರು ವ್ಯಾಪ್ತಿಯ ಕಂಚನಹಳ್ಳಿ ಮುಂತಾದ ಕಡೆ ಓಡಾಡಿವೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಬುಧವಾರ ಸಂಜೆಯ ವೇಳೆಗೆ ಕಬ್ಟಾಳು ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಇದುವರೆಗೆ 4 ಗಂಡಾನೆ ಮತ್ತು 1 ಹೆಣ್ಣಾನೆ ಸೇರಿದಂತೆ 5 ಆನೆಗಳ ತಂಡ ತೆಂಗಿನಕಲ್ಲು ಅರಣ್ಯಪ್ರದೇಶದ ವ್ಯಾಪಿಯಲ್ಲಿ ಸತತವಾಗಿ ದಾಳಿ ಮಾಡುತ್ತ ಬಂದಿದ್ದವು. ಆದರೆ, ಇದೀಗ ಆನೆಗಳ ಸಂಖ್ಯೆ 10ಕ್ಕೆ ಏರಿಕೆಯಾಗಿವೆ. ಆನೆಗಳ ಸರಣಿ ದಾಳಿ ಬಗ್ಗೆ ವನಪಾಲಕ ಕುಮಾರ್‌ ಪ್ರತಿಕ್ರಿಯೆ ನೀಡಿ, ಆನೆಗಳು ನೀರು ಹುಡುಕಿಕೊಂಡು ಕೆರೆಗಳಿಗೆ ಲಗ್ಗೆ ಇಡುತ್ತಿವೆ. ಶೀಘ್ರವೇ ಮುತ್ತತ್ತಿ ಕಾಡಿಗೆ ಓಡಿಸುವ ಕಾರ್ಯ ಮಾಡಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next