ಮಿಚಿಗನ್ (ಓಕ್ಲಾಂಡ್
) : ವಾಹನಗಳನ್ನು ಚಲಾಯಿಸುವಾಗ ಬಹಳ ಜಾಗರೂಕತೆಯಿಂದ ಇರಬೇಕು. ಮೈಯೆಲ್ಲಾ ಕಣ್ಣಾಗಿದ್ದು ಗಾಡಿ ಓಡಿಸಿದರೂ ಕೆಲವು ಬಾರಿ ಅಪಘಾತಗಳು ನಡೆದೇ ಹೋಗುತ್ತವೆ. ಅದರಲ್ಲೂ ಅರಣ್ಯ ಪ್ರದೇಶದ ರಸ್ತೆಗಳಲ್ಲಿ ಹೋಗುವಾಗ ಹೆಚ್ಚು ಜಾಗ್ರತೆ ವಹಿಸಬೇಕಾಗುತ್ತದೆ. ಯಾಕಂದ್ರೆ ಯಾವುದಾದರೂ ಪ್ರಾಣಿಗಳು ವಾಹನದ ಅಡ್ಡಕ್ಕೆ ಬಂದು ಯಡವಟ್ಟು ಆಗಬಹುದು. ಅಂತಹದ್ದೇ ಒಂದು ಘಟನೆ ಇಲ್ಲಿ ನಡೆದಿದೆ. ಆದ್ರೆ ಕಾರು ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅವಘಡ ತಪ್ಪಿದೆ.
ಇದು ಓಕ್ಲಾಂಡ್ ದೇಶದ ಮಿಚಿಗನ್ ಹೆದ್ದಾರಿಯಲ್ಲಿ ನಡೆದ ಘಟನೆ. ಎರಡು ಕಾರುಗಳು ರಸ್ತೆಯಲ್ಲಿ ವೇಗವಾಗಿ ಹೋಗುವಾಗ ಇದ್ದಕ್ಕಿದ್ದಂತೆ ಆರು ಜಿಂಕೆಗಳ ಒಂದು ಗುಂಪು ಕಾರುಗಳಿಗೆ ಬಂದಿದ್ದವು. ಅದ್ರಲ್ಲಿದ್ದ ನಾಲ್ಕು ಜಿಂಕೆಗಳು ಹೇಗೋ ಪಾರಾಗಿದ್ದು, ಕೊನೆಯಲ್ಲಿ ಓಡಿ ಬಂದ ಎರಡು ಜಿಂಕೆಗಳು ಕಾರಿಗೆ ಡಿಕ್ಕಿ ಹೊಡೆದಿವೆ. ಯಾವ ರೀತಿ ಅಂದ್ರೆ ಆ ಜಿಂಕೆಗಳು ಓಡಿ ಬರುವ ವೇಗಕ್ಕೆ ಕಾರು ಅಡ್ಡಲಾದ ಕಾರಣ ಜಿಂಕೆಗಳು ಕಾರಿನ ಮೇಲೆಯೇ ಹಾರಿವೆ. ಅದೃಷ್ಟವೇಂಬಂತೆ ಕಾರು ಚಾಲಕ ತಕ್ಷಣ ಬ್ರೇಕ್ ಹಾಕಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ. ಮತ್ತೊಂದು ವಿಶೇಷ ಅಂದ್ರೆ ಈ ಎಲ್ಲಾ ಘಟನೆಯ ವಿಡಿಯೋವನ್ನು ಕಾರಿನಲ್ಲಿದ್ದ ವ್ಯಕ್ತಿಯು ಶೂಟ್ ಮಾಡಿಕೊಂಡಿದ್ದಾರೆ.
ಸಿನಿಮೀಯ ರೀತಿಯಲ್ಲಿ ಜಿಂಕೆ ಹಾರಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಶೆರೀಫ್ ಎಂಬುವವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ವಿಡಿಯೋ ನೋಡಿದ ಬಹುಪಾಲು ಮಂದಿ ಘಟನೆಯ ಪರ ಮತ್ತು ವಿರೋಧ ಎರಡನ್ನೂ ಮಾತನಾಡುತ್ತಿದ್ದಾರೆ. ಅರಣ್ಯ ಪ್ರದೇಶದಲ್ಲಿ ಹೋಗುವಾಗ ಜಾಗರೂಕತೆಯಿಂದ ಹೋಗಬೇಕು, ಈ ವಿಡಿಯೋ ನೋಡಿ ಎದೆ ಒಡೆದೇ ಹೋಯಿತು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.