Advertisement
ಹೌದು, ಬೀಳಗಿ ತಾಲೂಕಿನ ಹೆರಕಲ್‌ಮೂಗಿ ಬಳಿ ಒಟ್ಟು 72 ಕೋಟಿ ವೆಚ್ಚದಲ್ಲಿಜಿಲ್ಲೆಯಲ್ಲೇ ಮಾದರಿಯಾದ ಬ್ಯಾರೇಜ್ ನಿರ್ಮಿಸಲಾಗಿದೆ. ಸದ್ಯ ಜಿಲ್ಲೆಯಮಲಪ್ರಭಾ, ಕೃಷ್ಣಾ ಹಾಗೂ ಘಟಪ್ರಭಾನದಿ ಪಾತ್ರದಲ್ಲಿರುವ ಅಷ್ಟೂ ಬ್ಯಾರೇಜ್‌ಗಳಲ್ಲಿ ಹೆರಕಲ್ ಬ್ಯಾರೇಜ್‌ನ ಡಿಸೈನ್‌ಹಾಗೂ ನೀರು ನಿಲ್ಲುವ ಸ್ಥಳ ಅತ್ಯಂತಅದ್ಬುತವಾಗಿದೆ. ಹೆರಕಲ್ ಮೂಕಿ ಎಂದೇಕರೆಯುತ್ತಿದ್ದ ಸ್ಥಳದಲ್ಲಿ ಈ ಬ್ಯಾರೇಜ್ ಇದ್ದು,ಇದೊಂದು ಪ್ರವಾಸಿ ತಾಣವಾಗಿ ರೂಪಿಸುವ ಚರ್ಚೆ ಕೂಡ ನಡೆಯುತ್ತಿವೆ.
Related Articles
Advertisement
ಮೂರು ತಾಲೂಕಿಗೆ ಆಸರೆ ಈ ಬ್ಯಾರೇಜ್: ಈ ಬ್ಯಾರೇಜ್ ಹಾಗೂಆಲಮಟ್ಟಿ ಜಲಾಶಯದ ಹಿನ್ನೀರುಬಳಸಿಕೊಂಡು ಹೆರಕಲ್(ದಕ್ಷಿಣ) ಏತನೀರಾವರಿ ಯೋಜನೆ ಕೈಗೊಂಡಿದ್ದು,ಇದರಿಂದ ದಕ್ಷಿಣ ಭಾಗದ ಜಲಗೇರಿ,ಯಂಕಂಚಿ, ನರೇನೂರ, ಸಾಗನೂರ,ನರೇನೂರ ತಾಂಡಾ, ಫಕೀರಬೂದಿಹಾಳ,ಮಾಳಗಿ, ಒಡೆಯನ ಹೊಸಕೋಟೆ,ಯರಗೊಪ್ಪ, ಕಲಬಂದಕೇರಿ, ಅಗಸನಗೊಪ್ಪ,ಕೆರೂರ, ಕಡಪಟ್ಟಿ , ಜಮ್ಮನಕಟ್ಟೆ, ಮತ್ತಿಕಟ್ಟೆ,ಚಿಂಚಲಕಟ್ಟಿ, ಮನಿನಗರ, ಹೂಲಗೇರಿ,ಗೂಬರಕೊಪ್ಪ ಸೇರಿ ಒಟ್ಟು 20 ಹಳ್ಳಿಗೆ ಆಸರೆಯಾಗಿದೆ.
ಇನ್ನು ಹೆರಕಲ್ ಉತ್ತರ ಯೋಜನೆಯಡಿಜಾನಮಟ್ಟಿ, ಅರಕೇರಿ, ಅರಕೇರೆ ತಾಂಡಾ,ಕುಂದರಗಿ, ಸುನಗ, ಸುನಗ ತಾಂಡಾ,ಬಾವಲತ್ತಿ, ಕೋವಳ್ಳಿ ಗ್ರಾಮಗಳಿಗೆ ನೀರು,ನೀರಾವರಿ ಒದಗಿಸಲು ಸಹಕಾರಿಯಾಗಿದೆ.
7 ಬಹುಹಳ್ಳಿ ಯೋಜನೆಗೂ ನೀರು:
ಈ ಬ್ಯಾರೇಜ್ ಎತ್ತರಿಸುವುದರಿಂದ ಬಾಗಲಕೋಟೆ ನಗರ ಸೇರಿದಂತೆ ಸುಮಾರುಏಳು ಬಹುಹಳ್ಳಿ ಕುಡಿಯುವ ನೀರುಪೂರೈಕೆ ಯೋಜನೆಯಡಿ ಸುಮಾರು 80ಕ್ಕೂಹೆಚ್ಚು ಹಳ್ಳಿ, ಪುನರ್‌ವಸತಿ ಕೇಂದ್ರಗಳಿಗೆ ನೀರಿನ ಸಮಸ್ಯೆ ನೀಗಲಿದೆ. 72 ಕೋಟಿವೆಚ್ಚದಲ್ಲಿ ಬ್ಯಾರೇಜ್ ನಿರ್ಮಿಸಿದ್ದರೂ ಕೇವಲ 1.80 ಟಿಎಂಸಿ ಅಡಿ ನೀರು ಸಂಗ್ರಹ ಮಾಡುತ್ತಿದ್ದ ಹೆರಕಲ್ ಬ್ಯಾರೇಜ್‌ನಲ್ಲಿಇನ್ನು 517.50 ಮೀಟರ್‌ವರೆಗೂ ನೀರು ಸಂಗ್ರಹ ಮಾಡಬಹುದು. ಇದರಿಂದಘಟಪ್ರಭಾ ನದಿಯಲ್ಲಿ (ಆಲಮಟ್ಟಿ ಹಿನ್ನೀರುಸಹಿತ) ಕಲಾದಗಿ ಬ್ಯಾರೇಜ್ ವರೆಗೆ ನೀರುಒತ್ತಿ ನಿಲ್ಲಲಿದೆ. ಹೀಗಾಗಿ ಬಾಗಲಕೋಟೆ,ಬಾದಾಮಿ ಹಾಗೂ ಬೀಳಗಿ ಸೇರಿ ಮೂರುತಾಲೂಕಿನ ನೀರಿನ ಬವಣೆ ನೀಗಿಸಲುಈ ಬ್ಯಾರೇಜ್‌ನ ಎತ್ತರ ಯೋಜನೆ ಪರಿಣಾಮಕಾರಿಯಾಗಲಿದೆ.
ಹೆರಕಲ್ ಬ್ಯಾರೇಜ್ ಎತ್ತರಿಸಬೇಕು ಎಂಬುದು ನನ್ನ ಬಹುದಿನಗಳ ಆಶಯವಾಗಿತ್ತು. ನಾನು ಬೀಳಗಿ ಕ್ಷೇತ್ರದಿಂದ 2018ರಚುನಾವಣೆಯಲ್ಲಿ ಆಯ್ಕೆಯಾದಾಗಿನಿಂದಲೂ ಪ್ರಯತ್ನಿಸುತ್ತಿದ್ದೆ.ಹಿಂದಿನ ಸಮ್ಮಿಶ್ರ ಸರ್ಕಾರ ಇದಕ್ಕೆ ಅನುದಾನ, ಅನುಮತಿ ಕೊಡಲಿಲ್ಲ.ಇದೀಗ ನಮ್ಮದೇ ಸರ್ಕಾರ ಬಂದಿದ್ದು, ಸಚಿವನೂ ಆಗಿದ್ದೇನೆ. ಹೀಗಾಗಿಜಲ ಸಂಪನ್ಮೂಲ ಇಲಾಖೆ, ಮುಖ್ಯಮಂತ್ರಿಗಳ ಮನವೊಲಿಸಿ, ಬ್ಯಾರೇಜ್ ಎತ್ತರಿಸುವುದರಿಂದ ಆಗುವ ಲಾಭಗಳ ಕುರಿತು ಯೋಜನೆ ಸಲ್ಲಿಸಿ, 16 ಕೋಟಿಅನುದಾನ ಪಡೆಯಲಾಗಿದೆ. ಇದರಿಂದ ಮೂರು ತಾಲೂಕಿನ ರೈತರಿಗೆ ಕುಡಿಯುವನೀರಿಗೆ ಅನುಕೂಲವಾಗಲಿದೆ. – ಮುರುಗೇಶ ನಿರಾಣಿ, ಗಣಿ ಮತ್ತು ಭೂ ವಿಜ್ಞಾನ ಸಚಿವ
- ಶ್ರೀಶೈಲ ಕೆ. ಬಿರಾದಾರ