Advertisement

ಪತಿ ಸ್ನೇಹಿತನಿಂದ ಬೆತ್ತಲೆ ವಿಡಿಯೋ: ಪತ್ನಿ ಆತ್ಮಹತ್ಯೆ

10:46 AM Mar 03, 2017 | |

ಮಂಡ್ಯ/ಮದ್ದೂರು: ವಿವಾಹಿತ ಮಹಿಳೆಯ ಬೆತ್ತಲೆ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದರಿಂದ ಅವಮಾನ ತಾಳಲಾರದೆ ಮಹಿಳೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಬುಧವಾರ
ಸಂಜೆ ನಡೆದಿದೆ.

Advertisement

ಗ್ರಾಮದ ಎಸ್‌.ಎನ್‌.ನವೀನ್‌ ಕುಮಾರ್‌ ಪತ್ನಿ ಸಂಗೀತಾ ಉ. ಪವನ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ರೈಲ್ವೆ ಇಲಾಖೆ ಉದ್ಯೋಗಿಯಾಗಿರುವ ಬಿ.ಕೆ. ಅನಿಲ್‌ಕುಮಾರ್‌ ವಿಡಿಯೋ ಮಾಡಿದ ಆರೋಪಿ. ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಮೃತ ಮಹಿಳೆ ಪತಿ ನವೀನ್‌ ಕುಮಾರ್‌ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಏನಿದು ಪ್ರಕರಣ?:
ಸೋಮನಹಳ್ಳಿಯ ಎಸ್‌. ಎನ್‌. ನವೀನ್‌ಕುಮಾರ್‌ ಆರು ವರ್ಷದ ಹಿಂದೆ ಅದೇ ಗ್ರಾಮದ ಸಂಗೀತ ಉ.ಪವನ ಅವರನ್ನು ಮದುವೆಯಾಗಿದ್ದು, 5 ವರ್ಷದ ಹೆಣ್ಣು ಮಗಳಿದ್ದಾಳೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನವೀನ್‌ಕುಮಾರ್‌ಗೆ ಅದೇ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿ.ಕೆ.ಅನಿಲ್‌ಕುಮಾರ್‌ ಎಂಬುವನ ಪರಿಚಯವಾಗಿದೆ. ಬಳಿಕ ನವೀನ್‌ ಕುಮಾರ್‌ ಆಗಾಗೆÂ ಅನಿಲ್‌ ಕುಮಾರ್‌ನನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದರು.

3 ವರ್ಷಗಳ ಹಿಂದೆ ಅನಿಲ್‌ ಕುಮಾರ್‌ಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಸಿಕ್ಕಿತು. ಕೆಲಸಕ್ಕೆ ಸೇರಿದ ಬಳಿಕ ಉಮ್ಮಡಹಳ್ಳಿ ಗ್ರಾಮದ
ಸುಗಂಧಿನಿ ಎಂಬಾಕೆಯನ್ನು ಅನಿಲ್‌ಕುಮಾರ್‌ ಮದುವೆಯಾಗಿದ್ದನು. 3 ತಿಂಗಳ ಹಿಂದೆ ಅನಿಲ್‌ಕುಮಾರ್‌ ಪತ್ನಿ ಸುಗಂಧಿನಿ ನವೀನ್‌ಕುಮಾರ್‌ನನ್ನು ಉಮ್ಮಡಹಳ್ಳಿ ಗೇಟ್‌ ಬಳಿ ಬರುವಂತೆ ತಿಳಿಸಿದ್ದಾಳೆ. ನವೀನ್‌ಕುಮಾರ್‌ ತನ್ನ ಪತ್ನಿಯೊಂದಿಗೆ ಅಲ್ಲಿಗೆ ಹೋದಾಗ “ನನ್ನ ಗಂಡ ಅನಿಲ್‌ಕುಮಾರ್‌, ನಿನ್ನ ಹೆಂಡತಿ ಬೆತ್ತಲೆಯಾಗಿರುವುದನ್ನು ವಿಡಿಯೋ ಮಾಡಿದ್ದಾನೆ’ ಎಂದು ಸುಗಂಧಿನಿ ಆ ವಿಡಿಯೋ ತೋರಿಸಿದ್ದಾಳೆ. ಬಳಿಕ ನವೀನ್‌ ಕುಮಾರ್‌ ಮತ್ತು ಅನಿಲ್‌ಕುಮಾರ್‌ ನಡುವೆ ದೊಡ್ಡ ಜಗಳವೇ ನಡೆದಿದೆ ಎನ್ನಲಾಗಿದೆ.

15 ದಿನಗಳ ಹಿಂದೆ ನವೀನ್‌ಕುಮಾರ್‌ ಗೆ ಕರೆ ಮಾಡಿದ ಅನಿಲ್‌ಕುಮಾರ್‌, “ನಿನ್ನ ಹೆಂಡತಿಯ ಬೆತ್ತಲೆ ವಿಡಿಯೋವನ್ನು ಎಲ್ಲ ಸ್ನೇಹಿತರಿಗೆ ತೋರಿಸುತ್ತೀನಿ’ ಎಂದು ಬೆದರಿಕೆ ಹಾಕಿದ್ದನು. ಬಳಿಕ ಸಾಮಾಜಿಕ ಜಾಲ ತಾಣಗಳಿಗೆ ವಿಡಿಯೋ ಅಪ್‌ ಲೋಡ್‌ ಮಾಡಿದ್ದನು ಎನ್ನಲಾಗಿದೆ. ಇವೆಲ್ಲ ವಿಚಾರ ಸಂಗೀತಾಳಿಗೆ ಗೊತ್ತಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ನವೀನ್‌ಕುಮಾರ್‌ ದೂರಿನಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next