Advertisement
ಮಕ್ಕಳಲ್ಲಿ ಹೆಪಟೈಟಿಸ್‌ಗೆ ಸಾಮಾನ್ಯ ಕಾರಣಗಳು
Related Articles
Advertisement
ಹಸಿವು ಕಡಿಮೆಯಾಗುವುದು, ಲಘು ಜ್ವರ, ದಣಿವು, ದೇಹಾಲಸ್ಯ, ಸ್ನಾಯು ಮತ್ತು ಹೊಟ್ಟೆಯಲ್ಲಿ ನೋವು, ಹೊಟ್ಟೆ ತೊಳೆಸುವಿಕೆ ಮತ್ತು ವಾಂತಿ ಇತ್ಯಾದಿ. ರೋಗ ಬಲಿಯುತ್ತಿದ್ದಂತೆ ಮಕ್ಕಳಲ್ಲಿ ಕಾಮಾಲೆಯ ಲಕ್ಷಣಗಳು, ಗಾಢ ವರ್ಣದ ಮೂತ್ರವಿಸರ್ಜನೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಹಠಾತ್ ಹೆಪಟೈಟಿಸ್ ಪಿತ್ತಜನಕಾಂಗದ ಹಠಾತ್ ವೈಫಲ್ಯವಾಗಿಯೂ ಉಲ್ಬಣಿಸಬಹುದಾಗಿದೆ.
ಚಿಕಿತ್ಸೆ ಮತ್ತು ಪ್ರತಿಬಂಧಾತ್ಮಕ ಕ್ರಮಗಳು
ಹಠಾತ್ ಹೆಪಟೈಟಿಸ್‌ಗೆ ಅನುಸರಿಸುವ ಚಿಕಿತ್ಸಾ ಕ್ರಮಗಳು ಪ್ರಧಾನವಾಗಿ ರೋಗ ಲಕ್ಷಣಗಳನ್ನು ಕಡಿಮೆ ಮಾಡುವುದು ಮತ್ತು ಪಿತ್ತಜನಕಾಂಗವನ್ನು ರಕ್ಷಿಸುವ ಉದ್ದೇಶದವಾಗಿರುತ್ತವೆ. ಕೆಲವೊಮ್ಮೆ ಲಭ್ಯವಿದ್ದಲ್ಲಿ ಹೆಪಟೈಟಿಸ್‌ಗೆ ಕಾರಣವನ್ನು ಚಿಕಿತ್ಸೆಗೆ ಗುರಿಪಡಿಸಲಾಗುತ್ತದೆ.
ಹಠಾತ್ ಹೆಪಟೈಟಿಸ್ ಪ್ರಸಾರವಾಗುವ ಪ್ರಧಾನ ಮಾಧ್ಯಮ ಮಲಿನ ನೀರು ಮತ್ತು ಆಹಾರ. ಹೀಗಾಗಿ ನೈರ್ಮಲ್ಯ ಕ್ರಮಗಳನ್ನು ಅನುಸರಿಸುವ ಮೂಲಕ ವೈರಸ್ ಪ್ರಸರಣವನ್ನು ತಡೆಯಬಹುದು. ಹೆಪಟೈಟಿಸ್ ಎ ಮತ್ತು ಬಿ ವೈರಸ್‌ಗಳ ವಿರುದ್ಧ ಈಗ ಲಸಿಕೆಗಳು ಲಭ್ಯವಿದ್ದು, ಇವುಗಳನ್ನು ಮಕ್ಕಳಿಗೆ ಕೊಡಿಸುವ ಮೂಲಕ ಪ್ರಸರಣವನ್ನು ತಡೆಯಬಹುದು.
ರೋಗ ಪತ್ತೆ
ಹಠಾತ್ ಹೆಪಟೈಟಿಸ್ ಕಾಯಿಲೆಯನ್ನು ರಕ್ತಪರೀಕ್ಷೆ ಮತ್ತು ಅಲ್ಟ್ರಾಸೌಂಡ್ ಪರೀಕ್ಷೆಗಳ ಮೂಲಕ ವೈದ್ಯಕೀಯ ಚಿತ್ರಣವನ್ನು ಪಡೆದು ಪತ್ತೆ ಮಾಡಲಾಗುತ್ತದೆ. ರಕ್ತಪರೀಕ್ಷೆಯಂತಹ ವಿಧಾನಗಳಿಂದ ರೋಗಪತ್ತೆಯಾಗದ ಸನ್ನಿವೇಶಗಳು ಮತ್ತು ಕಾಯಿಲೆ ವೇಗವಾಗಿ ಉಲ್ಬಣಿಸುವ ಅಪರೂಪದ ಸಂದರ್ಭಗಳಲ್ಲಿ ಪಿತ್ತಜನಕಾಂಗದ ಬಯಾಪ್ಸಿ ನಡೆಸಬೇಕಾಗಬಹುದು.
-ಡಾ| ಅನುರಾಗ್ ಶೆಟ್ಟಿ, ಮೆಡಿಕಲ್ ಗ್ಯಾಸ್ಟ್ರೊಎಂಟರಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಗ್ಯಾಸ್ಟ್ರೊಎಂಟರಾಲಜಿ ವಿಭಾಗ, ಕೆಎಂಸಿ, ಮಂಗಳೂರು)