Advertisement

ಕೋಳಿ ಕೂಗಿದ್ದಕ್ಕೆ ಟೆಕ್ಕಿ ದೂರು!

12:10 PM Dec 19, 2022 | Team Udayavani |

ಬೆಂಗಳೂರು: ಕೋಳಿ ಹುಂಜಗಳು ಕೂಗುವುದರಿಂದ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಟೆಕ್ಕಿಯೊಬ್ಬ ರೈತನ ವಿರುದ್ಧ ಇ-ಮೇಲ್‌ ಮತ್ತು ಟ್ವಿಟರ್‌ಮೂಲಕ ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿರುವ ಘಟನೆ ಬೆಳಕಿಗೆ ಬಂದಿದೆ.

Advertisement

ಜೆ.ಪಿ.ನಗರದ 8ನೇ ಹಂತದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ ಉತ್ತರ ಭಾರತ ಮೂಲದ ಟೆಕ್ಕಿಯೊಬ್ಬರು ದೂರು ನೀಡಿದ್ದರು. ನಮ್ಮ ಅಪಾರ್ಟ್‌ಮೆಂಟ್‌ನ ಬಳಿಯ ಜಮೀನಿನಲ್ಲಿ ಕೋಳಿ ಹುಂಜುಗಳುಮತ್ತು ಬಾತುಕೋಳಿಗಳನ್ನು ಸಾಕಲಾಗಿದೆ. ಅವುಗಳು ಪದೇ ಪದೆ ಕೂಗುವುದರಿಂದ ನಮಗೆ ತೊಂದರೆ ಆಗುತ್ತಿದೆ. 2 ವರ್ಷದ ಮಗು ಮತ್ತು ಕುಟುಂಬದವರ ನಿದ್ದೆಗೆ ತೊಂದರೆಯಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದರು.

ಬಳಿಕ ತಲ್ಲಘಟ್ಟಪುರ ಠಾಣೆ ಪೊಲೀಸರು ಟೆಕ್ಕಿ ಮತ್ತು ರೈತನನ್ನು ಕರೆಸಿ ವಿಚಾರಣೆನಡೆಸಿದ್ದರು. ಆಗ ರೈತ “ನಾನು ಸುಮಾರು ವರ್ಷಗಳಿಂದ ಕೋಳಿಗಳನ್ನು ಸಾಕುತ್ತಿದ್ದೇನೆ.ಇದರಲ್ಲಿ ತಪ್ಪೇನಿದೆ? ಕೋಳಿಗಳು ಕೂಗಿದರೆ,ಅದಕ್ಕೆ ನಾನೇನು ಮಾಡಲಿ’ ಎಂದು ಪ್ರಶ್ನಿಸಿದ್ದರು.

ಟೆಕ್ಕಿ ಕೂಡ ತನ್ನ ಸಮಸ್ಯೆಗಳನ್ನು ಹೇಳಿಕೊಂಡಿದ್ದಾನೆ. ನಂತರ ಪೊಲೀಸರು ಇಬ್ಬರಿಗೂ ಬುದ್ದಿವಾದ ಹೇಳಿ ಕಳುಹಿಸಿದ್ದರು. ಈ ಸಂಬಂಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ದೂರು ಆಧರಿಸಿ ವಿಚಾರಣೆ ನಡೆಸಿ ಇತ್ಯರ್ಥ ಪಡಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next