Advertisement
ಈ ವರುಷದ ವಿಷಯ ಪರಿಕಲ್ಪನೆ: ಎಲ್ಲರಿಗೂ ಮೂತ್ರಪಿಂಡ (ಕಿಡ್ನಿ) ಆರೋಗ್ಯ ಆರೈಕೆ ಮತ್ತು ಸೂಕ್ತ ಔಷಧ ಅಭ್ಯಾಸಕ್ಕೆ ಸಮಾನ ಪ್ರವೇಶವನ್ನು ಮುನ್ನಡೆಸುವುದು.
Related Articles
Advertisement
ಈ ಹೊಸ ಚಿಕಿತ್ಸೆಗಳು ಎಲ್ಲ ರೋಗಿಗಳಿಗೆ ಸಾರ್ವತ್ರಿಕವಾಗಿ ಲಭ್ಯವಿದ್ದರೂ ಪ್ರತೀ ದೇಶ ಮತ್ತು ಪರಿಸರದಲ್ಲಿ ಶಾಶ್ವತ ಮೂತ್ರಪಿಂಡ ವೈಫಲ್ಯ ಕಾಯಿಲೆಯ ಬಗ್ಗೆ ಅರಿವಿನ ಕೊರತೆ, ಮೂತ್ರಪಿಂಡದ ತಜ್ಞರ ಕೊರತೆ, ಹೊಸ ಚಿಕಿತ್ಸೆಗಳ ಬಗ್ಗೆ ಅರಿವಿಲ್ಲದಿರುವುದು ಮತ್ತು ದುಬಾರಿ ಚಿಕಿತ್ಸಾ ವೆಚ್ಚಗಳ ಕಾರಣ ಎಲ್ಲ ವರ್ಗಗಳ ಜನತೆಗೆ ಇದು ಸುಲಭವಾಗಿ ತಲುಪುವಲ್ಲಿ ನಿಧಾನಗತಿಯನ್ನು ಹೊಂದುತ್ತಿದೆ.
ಈ ಲೇಖನವು ಮೂತ್ರಪಿಂಡ ವೈಫಲ್ಯ ಹೊಂದಿರುವ ವ್ಯಕ್ತಿಗೆ ನೀಡಲಾಗುವ ವಿವಿಧ ರೀತಿಯ ವೈದ್ಯಕೀಯ ಚಿಕಿತ್ಸೆಗಳ ಪೈಕಿ ಒಂದಾದ ಮತ್ತು ಬಹು ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಕೃತಕವಾಗಿ ರಕ್ತ ಶುದ್ಧೀಕರಿಸುವ ಹಿಮೋಡಯಾಲಿಸಿಸ್ ಚಿಕಿತ್ಸೆಯ ಬಗ್ಗೆ ಕಿರು ಪರಿಚಯವನ್ನು ಮಾಡುತ್ತದೆ.
1. ಹಿಮೋಡಯಾಲಿಸಿಸ್ ಚಿಕಿತ್ಸೆ ಎಂದರೇನು ?
“ಹಿಮೋ’’ (hemo-blood) ಎಂದರೆ ರಕ್ತ ಮತ್ತು “ಡಯಾಲಿಸಿಸ್’’ ಎಂದರೆ ಸೋಸುವುದು ಅಥವಾ ಏನೋ ಒಂದನ್ನು/ಕೆಲವೊಂದನ್ನು ತೆಗೆಯುವುದು ಎಂದರ್ಥ. ಅಂದರೆ ರಕ್ತದಿಂದ ಕಶ್ಮಲಗಳನ್ನು ಸೋಸುವುದು/ಬೇರ್ಪಡಿಸುವುದು.
- ವೇಗವಾಗಿ ಕಡಿಮೆ ಅವಧಿಯಲ್ಲಿ ರಕ್ತದಿಂದ ಕಶ್ಮಲ ಬೇರ್ಪಡಿಸಬಹುದು.
- ನಿಯಮಿತ ಹಿಮೋಡಯಾಲಿಸಿಸ್ ಚಿಕಿತ್ಸೆಯು ವ್ಯಕ್ತಿಯ ಜೀವಿತಾವಧಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಸಹಾಯ ಮಾಡುತ್ತದೆ.
- ಚಿಕಿತ್ಸೆಯನ್ನು ತರಬೇತಿ ಹೊಂದಿದ ಹಾಗೂ ನುರಿತ ಆರೋಗ್ಯ ತಜ್ಞರಿಂದ ಮಾಡಲಾಗುತ್ತದೆ.
- ಚಿಕಿತ್ಸೆಯ ಮಿತಿಗಳು/ನ್ಯೂನತೆಗಳು
- ಚಿಕಿತ್ಸಾ ವೆಚ್ಚವು ದುಬಾರಿಯಾಗಿರುತ್ತದೆ.
- ಶಾಶ್ವತ ಮೂತ್ರಪಿಂಡ ಕಾಯಿಲೆಗೆ ಇದು ಜೀವನಪರ್ಯಂತ ಚಿಕಿತ್ಸೆಯಾಗಿರುತ್ತದೆ.
- ಚಿಕಿತ್ಸೆಗಾಗಿ ವಾರದಲ್ಲಿ 3 ದಿನ ಆಸ್ಪತ್ರೆಗೆ ಭೇಟಿಯಾಗಬೇಕಾಗುತ್ತದೆ. ಮತ್ತು ಪ್ರತಿ ಚಿಕಿತ್ಸೆಯ ಪ್ರಾರಂಭದಲ್ಲಿ ಸೂಜಿ ಚುಚ್ಚುವಿಕೆ ಇರುತ್ತದೆ.
- ಈ ಚಿಕಿತ್ಸೆಯಿಂದ ಮೂತ್ರಪಿಂಡದ ಎಲ್ಲಾ ಕಾರ್ಯಗಳನ್ನು ಪರ್ಯಾಯವಾಗಿ ಮಾಡಲಾಗುವುದಿಲ್ಲ. ಆದ್ದರಿಂದ ಇದು ಮೂತ್ರಪಿಂಡದ ತೊಂದರೆಯನ್ನು ಗುಣಪಡಿಸುವುದಿಲ್ಲ ಮತ್ತು ಶಾಶ್ವತ ಮೂತ್ರಪಿಂಡ ವೈಫಲ್ಯದಲ್ಲಿ ಈ ಚಿಕಿತ್ಸೆಯನ್ನು ಜೀವನಪರ್ಯಂತ ನಿರಂತರವಾಗಿ ಮಾಡಬೇಕಾಗುತ್ತದೆ.
- ಹಿಮೋಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗುವ ವ್ಯಕ್ತಿಗಳಿಗೆ ಕೆಲವು ವೈದ್ಯಕೀಯ ಮಾಹಿತಿಗಳು
- ಶಾಶ್ವತ ಮೂತ್ರಪಿಂಡ ವೈಫಲ್ಯ ಜೀವನದ ಅಂತಿಮವಲ್ಲ. ಅನಂತರವೂ ಜೀವಿಸಲು ಅವಕಾಶಗಳಿವೆ. ಸರಿಯಾದ ಚಿಕಿತ್ಸೆಯ ಪಾಲನೆಯಿಂದ ದೀರ್ಘಕಾಲ ಉತ್ತಮ ಜೀವನವನ್ನು ನಡೆಸಿಕೊಂಡು ಹೋಗಬಹುದು.
- ವಿವಿಧ ರೀತಿಯ ಡಯಾಲಿಸಿಸ್ ಚಿಕಿತ್ಸಾ ವಿಧಾನಗಳಲ್ಲಿ ನಿಮಗೆ ಮೂತ್ರಪಿಂಡ ತಜ್ಞರು ಸೂಚಿಸಿದ ಚಿಕಿತ್ಸೆಯ ಬಗ್ಗೆ ವಿವರವಾಗಿ ಅರಿತುಕೊಂಡು ಮನೆಮಂದಿಯಲ್ಲಿ ಚರ್ಚಿಸಿ ನಿಮ್ಮ ಆರೈಕೆಗೆ ಉತ್ತಮವಾದುದನ್ನು ಆಯ್ಕೆ ಮಾಡಿ ಮಾಹಿತಿ ಪತ್ರಕ್ಕೆ ಒಪ್ಪಿಗೆ ಸಹಿ ಹಾಕಬೇಕಾಗುತ್ತದೆ.
- ಹಿಮೋಡಯಾಲಿಸಿಸ್ ಚಿಕಿತ್ಸೆಯನ್ನು ಆಯ್ಕೆ ಮಾಡಿಕೊಂಡಾಗ ರಕ್ತನಾಳ ಪ್ರವೇಶಿಸಲು ದಾರಿಯ ಸ್ಥಾಪನೆ (establishment of vascular access) ಖಂಡಿತವಾಗಿಯೂ ಹಿಮೋಡಯಾಲಿಸಿಸ್ ಚಿಕಿತ್ಸೆ ನೀಡಲು ಸಾಧ್ಯವಾಗುವುದೇ ಇಲ್ಲ . ಆದುದರಿಂದ ಇದನ್ನು ಹಿಮೋಡಯಾಲಿಸಿಸ್ ಚಿಕಿತ್ಸೆ ಪಡೆಯುವ ವ್ಯಕ್ತಿಯ “ಜೀವನ ರೇಖೆ’’ (lifeline) ಎಂದು ಸಾಮಾನ್ಯವಾಗಿ ಹೇಳುತ್ತಾರೆ.
- ರಕ್ತನಾಳದ ದಾರಿಯು (Vascular Access) ನಿಮ್ಮ ಜೀವನರೇಖೆಯಾಗಿರುವುದರಿಂದ ನೀವು ಅದರ ಸುಸ್ಥಿತಿಯ ಬಗ್ಗೆ ಕಾಳಜಿಯನ್ನು ವಹಿಸಬೇಕಾಗುತ್ತದೆ. ಇದರಿಂದ ನಿಮಗೆ ತುರ್ತುಪರಿಸ್ಥಿತಿ ಅಥವಾ ಯಾವುದೇ ಗಳಿಗೆಯಲ್ಲಿ ವೇಗವಾಗಿ ಡಯಾಲಿಸಿಸ್ ಚಿಕಿತ್ಸೆ ಪಡೆಯಬೇಕಾಗಿ ಬಂದಲ್ಲಿ ಕೂಡಲೇ ಹಿಮೋಡಯಾಲಿಸಿಸ್ ಚಿಕಿತ್ಸೆಯನ್ನು ನೀಡಬಹುದು.
- ಹಿಮೋಡಯಾಲಿಸಿಸ್ ದಿವಸಕ್ಕೆ 4 ಗಂಟೆಯಂತೆ ವಾರದಲ್ಲಿ ಮೂರು ದಿವಸ ಅಂದರೆ ವಾರಕ್ಕೆ 12 ಗಂಟೆ ಮಾತ್ರ ಮಾಡಲಾಗುತ್ತದೆ. ಆದ್ದರಿಂದ ಡಯಾಲಿಸಿಸ್ ಇಲ್ಲದ ದಿನಗಳಲ್ಲಿ ರಕ್ತದಲ್ಲಿ ತ್ಯಾಜ್ಯ ವಸ್ತುಗಳ ಹಾಗೂ ಸೇವಿಸಿದ ನೀರಿನ ಶೇಖರಣೆಯಾಗುವುದರಿಂದ ವೈದ್ಯರ ಸಲಹೆಯಂತೆ ಪಥ್ಯಾಹಾರ ಮತ್ತು ನೀರಿನ ಸೇವನೆಯ ಪ್ರಮಾಣವನ್ನು ಪಾಲಿಸಬೇಕಾಗುತ್ತದೆ. ಎರಡು ಡಯಾಲಿಸಿಸ್ ಚಿಕಿತ್ಸೆಗಳ ನಡುವಿನ ದಿನಗಳಲ್ಲಿ ದೇಹದ ತೂಕ 3 ಕಿಲೋಗ್ರಾಂಗಿಂತ ಹೆಚ್ಚಾಗಿರದಿದ್ದರೆ ಸೂಕ್ತವಾಗಿರುತ್ತದೆ. ಇದರಿಂದ ಡಯಾಲಿಸಿಸ್ ಒಳಗಾಗುವಾಗ ರಕ್ತದೊತ್ತಡದ ಕುಸಿತ, ಸ್ನಾಯುಸೆಳೆತ, ವಾಂತಿ ಮತ್ತು ಸುಸ್ತಾಗುವುದನ್ನು ತಡೆಗಟ್ಟಬಹುದು.
- ವೈದ್ಯಕೀಯ ರಂಗದಲ್ಲಿ ಈವರೆಗೆ ಲಭ್ಯವಿರುವ ಯಾವುದೇ ಮೂತ್ರಪಿಂಡ ಪರ್ಯಾಯ ಚಿಕಿತ್ಸೆಯನ್ನು ಆಯ್ಕೆ ಮಾಡಿಕೊಂಡರೂ ಅದು ಶಾಶ್ವತ ಮೂತ್ರಪಿಂಡ ವೈಫಲ್ಯತೆಯನ್ನು ಸಂಪೂರ್ಣವಾಗಿ ಗುಣಪಡಿಸುವ ಚಿಕಿತ್ಸೆಯಲ್ಲ . ಆದುದರಿಂದ ವಿವಿಧ ರೀತಿಯ ಚಿಕಿತ್ಸೆಗಳ ಬಗ್ಗೆ ಮಾಹಿತಿ ಪಡೆದು ತಮಗೆ ಸೂಕ್ತವಾಗುವ ಚಿಕಿತ್ಸೆಯನ್ನು ವೈದ್ಯರೊಂದಿಗೆ ಚರ್ಚಿಸಿ ಆಯ್ಕೆ ಮಾಡಿಕೊಳ್ಳುವುದು ಉತ್ತಮ.