Advertisement
ಪಟ್ಟಣದಿಂದ 16 ಕಿ.ಮೀ. ದೂರಘನ್ನಿ ಸಮೀಪ ಹೇಮಾವತಿ ಹೊಳೆಯಿಂದ ನೀರು ತಂದು ಹೌಸಿಂಗ್‌ಬೋರ್ಡ್ ಸಮೀಪ ಶುದ್ಧೀಕರಣ ಮಾಡಿ ಬೆಲಸಿಂದ ಶ್ರೀ ವನದಲ್ಲಿ ಸುಮಾರು 50 ಲಕ್ಷ ಲೀಟರ್ ಸಾಮರ್ಥ್ಯದ ಜಲಸಂಗ್ರಾಹಾರದಲ್ಲಿ ಶೇಖರಣೆ ಮಾಡಿ ಕೆಲ ಮನೆಗಳಿಗೆ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ, ಹೊರತು ಪುರಸಭೆಯ 23 ವಾರ್ಡಿನ ಮನೆಗಳಿಗೆ ನೀರು ಸರಬ ರಾಜು ಮಾಡಲಾಗುತ್ತಿಲ್ಲ.
Related Articles
Advertisement
5 ಕೋಟಿ ವೆಚ್ಚದಲ್ಲಿ ಪೈಪ್‌ಲೈನ್: ಮೂರನೇ ಹಂತದ ಕುಡಿಯುವ ನೀರನ್ನು ಪುರಸಭೆಯ 23 ವಾರ್ಡ್‌ಗಳಿಗೆ ಸರಬರಾಜು ಮಾಡಲು 2019ರಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿಮಂಡಳಿ ಟೆಂಡರ್ ಮಾಡಿ ದ್ದು ಮೂರು ವರ್ಷವಾದರೂ ಕಾಮಗಾರಿ ಸಂಪೂರ್ಣ ಮಾಡುವಲ್ಲಿ ಇಲಾಖೆ ವಿಫಲವಾಗಿದೆ.
ಪುರಸಭೆಯಿಂದ ನಿರ್ವಹಣೆ: ಹೇಮಾವತಿ ನದಿ ತೀರದಲ್ಲಿನ ನೂತನ ಯಂತ್ರಗಾರ, 4 ವಸತಿಗೃಹ,ಹೌಸಿಂಗ್ ಬೋರ್ಡ್‌ನಲ್ಲಿ ನಿರ್ಮಿಸಿರುವ 170 ಲಕ್ಷಲೀಟರ್ ನೀರು ಶುದ್ಧೀಕರಣ ಘಟಕ, 5 ಲಕ್ಷ ಲೀಟರ್‌ಮೇಲಂತಸ್ಥಿನ ಜಲಸಂಗ್ರಹಾರ, 8 ವಸತಿಗೃಹ, 15 ಲಕ್ಷಲೀಟರ್ ನೆಲಹಂತದ ಜಲಸಂಗ್ರಹಗಾರ, ಬೆಲಸಿಂದಶ್ರೀವನದಲ್ಲಿರುವ ನೆಲಸಮದ 50 ಲಕ್ಷ ಲೀಟರ್‌ಜಲಸಂಗ್ರಹಾರ, 2.50 ಲಕ್ಷ ಲೀಟರ್ ನೀರುಶೇಖರಣಾ ಟ್ಯಾಂಕ್ ಹಾಗೂ ಸಿಬ್ಬಂದಿಗೆ 4 ವಸತಿಗೃಹನಿರ್ಮಾಣ ಮಾಡಿರುವುದನ್ನು ಪುರಸಭೆ ನಿರ್ವಹಣೆ ಮಾಡುತ್ತಿದೆ.
30 ವರ್ಷದವರೆಗೆ ಅನುಕೂಲ: 16 ಕಿಮೀ ದೂರದಿಂದ ಪೈಪ್‌ಲೈನ್ ಮೂಲಕ ಹೇಮಾವತಿ ನದಿಯಿಂದ ಬೆಲಸಿಂದ ಶ್ರೀವನದ ವರೆಗೆ ನೀರು ತರಲಾಗುತ್ತಿದೆ. ಈ ಯೋಜನೆ ಮುಂದಿನ 30 ವರ್ಷದವರೆಗೆ ನಗರದಲ್ಲಿ ಸುಮಾರು 1.25 ಲಕ್ಷ ಜನರಿಗೆ ದೊರೆಯಲಿದೆ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡ ಳಿ ಸಹಾಯಕ ಅಭಿಯಂತರ ಸುನಿಲ್ ಉದಯವಾಣಿಗೆ ಮಾಹಿತಿ ನೀಡಿದರು.
3ನೇ ಹಂತದ ಯೋಜನೆ ಸಿದ್ಧ: ಪ್ರತಿ ನಿತ್ಯ 8 ತಾಸು ಯಂತ್ರ ಚಾಲನೆ ಮಾಡಿದರೆ ನಗರದಲ್ಲಿನ ಎಲ್ಲ ಮನೆಗಳಿಗೆ ಪೈಪ್ ಮೂಲಕ ಯಾವುದೇ ಯಂತ್ರ ಬಳಸದೆದಿನದ 24 ತಾಸು ನೀರು ಹರಿಸಬಹುದು. ಆ ಮಾದರಿಯಲ್ಲಿ ಮೂರನೇ ಹಂತದ ಕುಡಿಯುವ ನೀರು ಸರಬರಾಜು ಯೋಜನೆ ತಯಾರಾಗಿದೆ ಎಂದು ಮಾಹಿತಿ ನೀಡಿದರು.
ಮೂರನೇ ಹಂತದ ಕುಡಿಯುವ ನೀರು ಪುರಸಭೆ ವ್ಯಾಪ್ತಿಯಲ್ಲಿ ಹಲವುವಾರ್ಡ್‌ಗೆ ಕಳೆದ ಒಂದು ವರ್ಷದಿಂದಸರಬರಾಜು ಮಾಡಲಾಗುತ್ತಿದೆ. ನಾವುಮಾತ್ರ ಕೊಳವೆ ಬಾವಿ ನೀರುಕುಡಿಯುವುದು ತಪ್ಪಿಲ್ಲ. ಈ ಬಗ್ಗೆ ಪುರಸಭೆಅಧಿಕಾರಿಗಳನ್ನು ವಿಚಾರಿಸಿದರೆ ಹಾರಿಕೆ ಉತ್ತರ ನೀಡುತ್ತಾರೆ. ಮುಂದಿನ 30ವರ್ಷದವರೆಗೆ ಪುರಸಭೆ ವ್ಯಾಪ್ತಿಯಲ್ಲಿನೀರಿನ ಸಮಸ್ಯೆ ಉಂಟಾಗದ ರೀತಿ ಯೋಜನೆ ಮಾಡಿದ್ದೇವೆ ಎನ್ನುವ ಸರ್ಕಾರನಗರ ವ್ಯಾಪ್ತಿಗೆ ಯಾಕೆ ಸಂಪೂರ್ಣಹೇಮಾವತಿ ನೀರು ಹರಿಸ ಲಾಗುತ್ತಿಲ್ಲ.-ರೇಣುಕುಮಾರ್,ಗೂರನಹಳ್ಳಿ ಬಡಾವಣೆ ನಿವಾಸಿ
ಪುರಸಭೆ 23 ವಾರ್ಡ್‌ನ ಮನೆಗೆ ಹೇಮಾವತಿ ಹೊಳೆಯ ನೀರುಹರಿಸಲು ಅಗತ್ಯ ಪೈಪ್‌ಲೈನ್ ಅಳವಡಿಕೆಗೆ ನಗರ ನೀರು ಸರಬರಾಜು ಮತ್ತುಒಳಚರಂಡಿ ಮಂಡಳಿ ಟೆಂಡರ್ ಪ್ರಕ್ರಿಯೆ ಮಾಡು ವುದಾಗಿ ತಿಳಿಸಿದೆ. 6 ತಿಂಗಳ ಒಳಗೆಎಲ್ಲ ವಾರ್ಡ್‌ಗೆ ಹೇಮೆ ನೀರು ಸರಬರಾಜು ಮಾಡಲಾಗುವುದು, ಈಗ ಪೈಪ್‌ಲೈನ್ ಇರುವ ಕಡೆಗೆ ಮಾತ್ರ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.-ಕೃಷ್ಣಮೂರ್ತಿ, ಪುರಸಭೆ ಮುಖ್ಯಾಧಿಕಾರಿ
-ಶಾಮಸುಂದರ್ ಕೆ. ಅಣ್ಣೇನಹಳ್ಳಿ