Advertisement
ಕಳೆದ ವರ್ಷ ಹೊರತು ಪಡಿಸಿದರೆ, ನಾಲ್ಕು ವರ್ಷ ದಿಂದತಾಲೂಕಿನಲ್ಲಿ ಬರಗಾಲ ಆವರಿಸಿತ್ತು. ಹೇಮಾವತಿ ಅಣೆಕಟ್ಟೆ ನೀರನ್ನುಕೃಷಿಗೆ ಬಳಸದಂತೆ ನೀರಾವರಿ ಇಲಾಖೆಕಟ್ಟುನಿಟ್ಟಿನ ಆದೇಶ ನೀಡಿತ್ತು. ಪ್ರಸಕ್ತ ವರ್ಷ ಮಳೆ ತಡವಾಗಿ ಆರಂಭ ವಾದ್ರೂ ವಾರದಲ್ಲೇ ಹೇಮಾವತಿ ಜಲಾಶಯ ಸಂಪೂರ್ಣ ಭರ್ತಿಯಾಗಿ ಒಂದು ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಸಲಾಗಿದೆ. ಪರಿಣಾಮ, ತೀರದ ಗ್ರಾಮಗಳು, ಕೃಷಿ ಭೂಮಿ ನೆರೆಗೆ ತುತ್ತಾಗುವಂತಾಯಿತು.
Related Articles
Advertisement
ನುಗ್ಗೇಹಳ್ಳಿ ಏತ ನೀರಾವರಿಗೆ ಚಾಲನೆ: ಯಡಿಯೂರಪ್ಪ ಈ ಹಿಂದೆ ಸಿಎಂ ಆಗಿದ್ದಾಗ ನುಗ್ಗೇಹಳ್ಳಿ ಏತನೀರಾವರಿ ಚಾಲನೆ ನೀಡಲಾಗಿತ್ತು. ಹಲವು ಎಡರು ತೊಡರುಗಳ ನಡುವೆ ಕುಟುಂತ ಸಾಗಿದ್ದ ಕಾಮಗಾರಿ ಈಗ ಪೂರ್ಣ ಗೊಂಡಿದ್ದು, 33 ಕ್ಯೂಸೆಕ್ ನೀರು ಹೇಮಾವತಿ ನಾಲೆಯಿಂದ ನುಗ್ಗೇಹಳ್ಳಿ ಹೋಬಳಿ 36 ಕೆರೆಗಳಿಗೆ ಹರಿಯುತ್ತಿದ್ದು, ಈಗಾಗಲೆ ಪ್ರಯೋಗಿಕವಾಗಿ ಚಾಲನೆ ನೀಡಲಾಗಿದೆ.
ತುಮಕೂರು, ಮಂಡ್ಯಕ್ಕೆ ಹೆಚ್ಚು ನೀರು : ಹೇಮಾವತಿ ಅಣೆಕಟ್ಟೆ ಹೊಂದಿರುವ ಹಾಸನ ಜಿಲ್ಲೆಗೆ ಹೋಲಿಸಿದರೆ ತುಮಕೂರು ಹಾಗೂ ಮಂಡ್ಯ ಜಿಲ್ಲೆಗೆ ಹೆಚ್ಚು ಉಪಯೋಗವಾಗುತ್ತಿದೆ, ಆ.8 ರಿಂದ ಹೇಮಾವತಿ ಎಡದಂಡೆ ನಾಲೆಯಲ್ಲಿ ನಿತ್ಯ ನೀರು ಹರಿಯುತ್ತಿದ್ದು, ತುಮಕೂರಿಗೆ2,069ಕ್ಯೂಸೆಕ್, ಮಂಡ್ಯಕ್ಕೆ1,041 ಕ್ಯೂಸೆಕ್ ನೀರು ನಿರಂತರವಾಗಿ ಹರಿಯುತ್ತಿದೆ. ಡಿಸೆಂಬರ್ ಅಂತ್ಯದವರೆಗೆ ನಿತ್ಯವೂ3,110 ಕ್ಯೂಸೆಕ್ ನೀರು ಈ ಎರಡು ಜಿಲ್ಲೆಗೆ ಹರಿಯಲಿದೆ.
ಏತ ನೀರಾವರಿಯಿಂದ ಕೃಷಿಆರಂಭ : ಹೇಮಾವತಿ ನಾಲೆಯಿಂದ ಬಾಗೂರು ಹಾಗೂ ಓಬಳಾಪುರ ಏತನೀರಾವರಿ ಯೋಜನೆಯಿಂದ58ಕ್ಯೂಸೆಕ್ ನೀರು ಹರಿದು5 ಸಾವಿರ ಎಕರೆಕೃಷಿ ಭೂಮಿಗೆ ಅನುಕೂಲವಾಗಿದೆ.ಕಾರೇಹಳ್ಳಿ ಏತನೀರಾವರಿಯಿಂದ58ಕ್ಯೂಸೆಕ್ ನೀರು ಹರಿದು5 ಸಾವಿರಕೃಷಿ ಭೂಮಿಗೆ ನೀರು ಒದಗಿಸಲಾಗುತ್ತಿದೆ. ಆ ಭಾಗದ ರೈತರು ಪ್ರಸಕ್ತ ಸಾಲಿನಿಂದಲೇಕೃಷಿ ಚಟುವಟಿಕೆ ಆರಂಭಿಸಿದ್ದಾರೆ.
ಹೇಮಾವತಿ ಜಲಾಶಯದಅಚ್ಚು ಕಟ್ಟು ಪ್ರದೇಶ : ಹೇಮಾವತಿ ಎಡದಂಡೆ ನಾಲೆ ಹಾದುಹೋಗುವ ಪ್ರದೇಶದಲ್ಲಿ ಶ್ರವಣಬೆಳಗೊಳ, ದಂಡಿಗನಹಳ್ಳಿ ಹಾಗೂ ಕಸಬಾ ಹೋಬಳಿಯಿಂದ19,400 ಎಕರೆ ಅಚ್ಚುಕಟ್ಟು ಪ್ರದೇಶವಿದ್ದರೆ, ಶ್ರೀರಾಮದೇವರ ನಾಲೆ ಹಾದು ಹೋಗಿರುವ ದಂಡಿಗನಹಳ್ಳಿ ಹೋಬಳಿ ಹಾಗೂ ಮಂಡ್ಯ ಜಿಲ್ಲೆಕಿಕ್ಕೇರಿ ಹೋಬಳಿ ಭಾಗದಲ್ಲಿ6,700 ಎಕರೆ ಅಚ್ಚುಕಟ್ಟು ಪ್ರದೇಶದಲ್ಲಿ ಪ್ರಸಕ್ತ ವರ್ಷ ರೈತರು ಭತ್ತ ನಾಟಿ ಮಾಡಿದ್ದಾರೆ.
ಪ್ರಸಕ್ತ ವರ್ಷ ಉತ್ತಮವಾಗಿ ಮಳೆಯಾಗಿದೆ.ಹೇಮವತಿ ಅಣೆಕಟ್ಟುಭರ್ತಿಯಾಗಿದೆ. ಹಾಗಾಗಿ ಮುಂಗಾರಿನ ವೇಳೆ ರೈತರುಭತ್ತಬೇಸಾಯ ಮಾಡಲು ಹಾಗೂ ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕೆರೆ ಕಟ್ಟೆ ತುಂಬಿಸಲಾಗುತ್ತಿದೆ. – ರಂಗೇಗೌಡ, ತಾಂತ್ರಿಕ ವಿಭಾಗ, ಕಾವೇರಿ ನೀರಾವರಿ ನಿಗಮ.
ಹೇಮಾವತಿ ನಾಲೆಯಿಂದ ಕೃಷಿ ಚಟುವಟಿಕೆಗೆ ಸಕಾಲಕ್ಕೆ ನೀರು ಪೂರೈಸುತ್ತಿರುವುದರಿಂದ ಭತ್ತದಬೆಳೆ ಉತ್ತಮವಾಗಿದೆ. ಕೋವಿಡ್ ವೇಳೆ ಮನೆಯಲ್ಲಿ ಕುಳಿತು ಸೋಮಾರಿಗಳಾಗಿದ್ದರು. ನಾಲೆಗೆ ನೀರು ಹರಿಸಿದ್ದರಿಂದ ಮನೆಗೆಬೇಕಾದಷ್ಟು ಭತ್ತ, ಇತರೆಬೆಳೆಬೆಳೆದುಕೊಳ್ಳಲು ಅನುಕೂಲವಾಗಿದೆ. – ಪುನೀತ್ ರಘುಸ್ವಾಮಿ, ರೈತ, ಚಿಕ್ಕಬಿಳತಿ ಗ್ರಾಮ.
– ಶಾಮಸುಂದರ್ ಕೆ.ಅಣ್ಣೇನಹಳ್ಳಿ