Advertisement

ಹೇಮಾವತಿ ನಾಲೆ ಆಧುನೀಕರಣ ಕಾಮಗಾರಿ ಅವೈಜ್ಞಾನಿಕ

12:16 PM Sep 07, 2019 | Suhan S |

ಕೆ.ಆರ್‌.ಪೇಟೆ: ತಾಲೂಕಿನಲ್ಲಿ 800 ಕೋಟಿ ರೂ.ಗಳ ವೆಚ್ಚದಲ್ಲಿ ಮಾಡುತ್ತಿ ರುವ ಹೇಮಾವತಿ ಎಡದಂಡೆ ನಾಲೆಯ ಆಧುನೀಕರಣ ಕಾಮಗಾರಿಯು ಸಂಪೂರ್ಣ ಅವೈಜ್ಞಾನಿಕ ಹಾಗೂ ಕಳಪೆಯಿಂದ ಕೂಡಿದೆ.

Advertisement

800 ಕೋಟಿ ರೂಪಾಯಿ ಖರ್ಚು ಮಾಡಿ ನಾಲೆ ಆಧುನೀಕರಣ ಮಾಡುವುದರಿಂದ ತಾಲೂಕಿಗೆ ಸಮಸ್ಯೆಯಾಗಲಿದೆ. ಕಾರಣ, ಈ ಹಿಂದೆ ಕೆಲವೆಡೆಗಳಲ್ಲಿ ನಾಲೆಯ ಒಳಭಾಗದ ನೀರಿನಿಂದ ಅಂತರ್ಜಲ ಮಟ್ಟದ ಉತ್ತಮವಾಗಿತ್ತು. ಕೊಳವೆ ಬಾವಿಗಳು ಮತ್ತು ಕೆಲ ಕೆರೆಗಳಿಗಳಲ್ಲಿ ನೀರು ಉಳಿದುಕೊಳ್ಳುತ್ತಿತ್ತು. ಆದರೆ ಈಗ ನಾಲೆಯ ಇಬ್ಬದಿಗೆ ಮತ್ತು ತಳಭಾಗಕ್ಕೆ ಸಿಮೆಂಟ್ ಹಾಕುವುದರಿಂದ ಒಂದೇ ಒಂದು ಹನಿ ನೀರು ಭೂಮಿಯಲ್ಲಿ ಇಂಗಲು ಸಾಧ್ಯವಿಲ್ಲವಾಗಿದೆ. ಇದರಿಂದ ಈ ಭಾಗದಲ್ಲಿ ಅಂತರ್ಜಲ ಸಂಪೂರ್ಣ ಕ್ಷೀಣಿಸಿ ಕೊಳವೆ ಬಾವಿಗಳು ಬತ್ತಿಹೋಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ.

ಸಿಮೆಂಟ್‌ನಲ್ಲಿ ಪ್ಯಾಕ್‌: ಬಹುತೇಕ ಬರ ಪೀಡಿತ ಪ್ರದೇಶದಲ್ಲಿಯೇ ಹರಿಯುವ ಕಾಲುವೆಯ ನೀರು ಮಣ್ಣಿನಲ್ಲೇ ಹರಿಯುವದರಿಂದ ಭೂಮಿ ತಂಪಾಗಿರುತ್ತಿತ್ತು. ಕೊಳವೆ ಬಾವಿಗಳಲ್ಲಿ ಕುಡಿಯುವ ನೀರಾದರೂ ಸಿಗುತ್ತಿತ್ತು. ಆದರೆ, ಈಗ ಆಧುನೀಕರಣದ ಹೆಸರಲ್ಲಿ ಸಿಮೆಂಟ್‌ನಲ್ಲಿ ಪ್ಯಾಕ್‌ ಮಾಡುವುದರಿಂದ ಭೂಮಿಗೆ ನೀರಿಂಗುವುದಿಲ್ಲ.

ಪಾಂಡವಪುರ ತಾಲೂಕಿಗೆ ಅನುಕೂಲ: ಇದರಿಂದ ಮುಂದಿನ ದಿನಗಳಲ್ಲಿ ಸಂತೇಬಾಚಹಳ್ಳಿ ಹಾಗೂ ಶೀಳನೆರೆ ಹೋಬಳಿಯ ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸುವುದು ಖಚಿತ. ಆದರೆ, ತಾಲೂಕಿನಲ್ಲಿ ನಾಲೆ ನವೀಕರಣ ಮಾಡಿರುವುದರಿಂದ ಪಕ್ಕದಲ್ಲಿರುವ ಪಾಂಡವಪುರ ಮತ್ತು ನಾಗಮಂಗಲ ತಾಲೂಕಿಗೆ ನೀರು ಸರಾಗವಾಗಿ ಹರಿಯಲು ಅನುಕೂಲವಾಗಿದೆ.

ಪಾಂಡವಪುರ ತಾಲೂಕಿಗೆ ನೀರು ವೇಗವಾಗಿ ಹರಿದು ಬರಲಿ ಎಂಬ ಕಾರಣದಿಂದಲೇ ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು ಅವರೇ ಈ ನಾಲೆಯ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿಸಿದ್ದಾರೆ ಎಂದೂ ತಾಲೂಕಿನ ನಾಗರೀಕರ ಆರೋಪವಾಗಿದೆ.

Advertisement

ಅಗತ್ಯ ಸ್ಥಳಗಳ ಅಭಿವೃದ್ಧಿ ಇಲ್ಲ: ಕೊಟ್ಯಾಂತರ ರೂಪಾಯಿ ಖರ್ಚು ಮಾಡಿ ನಾಲೆ ಆಧುನೀಕರಣ ಮಾಡಲಾಗುತ್ತಿದ್ದರೂ, ಮುಖ್ಯವಾಗಿ ನಾಲೆಯಲ್ಲಿ ನೀರು ಹರಿಯುವ ಮೇಲ್ಸೇತುವೆ, ಗೇಟ್ವಾಲ್, ಪ್ರಮುಖ ಸೇತುವೆಗಳನ್ನು ದುರಸ್ತಿ ಮಾಡಿಸಿಲ್ಲ. ದಿನಗಳಲ್ಲಿ ಆಧುನಿಕರಣವಾಗಿರುವ ನಾಲೆಯಲ್ಲಿ ಹೆಚ್ಚು ನೀರು ಹರಿಯಬಿಟ್ಟರೆ ಗೇಟ್ವಾಲ್ಗಳ ಬಳಿ ನಾಲುವೆ ಬಿರುಕು ಬಿಡುವ ಸಾಧ್ಯತೆಗಳಿವೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next