ಹೊಳೆನರಸೀಪುರ: ಪಟ್ಟಣದ ಹೇಮಾವತಿ ನದಿಗೆ ಹಾಕಿರುವ ತಡೆಗೋಡೆಯ ಕಬ್ಬಿಣದ ಸರಳುಗಳನ್ನು ಕಳ್ಳರು ಕಳವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಪಟ್ಟಣದ ಸನಿಹದಲ್ಲೆ ಹಾದು ಹೋಗಿರುವ ನದಿಗೆ ಬರುವ ಹೆಚ್ಚುವರಿ ನೀರಿನಿಂದ ಪಟ್ಟಣವನ್ನು ರಕ್ಷಿಸುವಲ್ಲಿ ಕೋಟ್ಯಂತರ ರೂ. ವೆಚ್ಚಮಾಡಿ ನಿರ್ಮಿಸಿರುವ ತಡೆಗೋಡೆಗೆ ಹಾಕಿರುವ ಕಬ್ಬಿಣದ ಸರಳುಗಳನ್ನು ಕಳ್ಳರು ಕತ್ತರಿಸಿ ಕೊಂಡೊಯಿದ್ದು ಇದರಿಂದ ತಡೆಗೋಡೆ ತನ್ನ ಶಕ್ತಿಕಳೆದುಕೊಳ್ಳುವುದರ ಜತೆಗೆ ವಾಕಿಂಗ್ ಮತ್ತು ಇಲ್ಲಿ ಸಂಚರಿಸುವವರಿಗೆ ದುಷ್ಪರಿಣಾಮ ಉಂಟುಮಾಡಿದೆ.
ಈ ತಡೆಗೋಡೆ ನಿರ್ಮಿಸಿದ ನಂತರ ಈ ತಡೆಗೋಡೆ ಪಕ್ಕದಲ್ಲಿ ಹಿರಿಯ ನಾಗರಿಕರು ಮತ್ತು ಸಂಜೆ ಮತ್ತು ಬೆಳಗಿನ ವೇಳೆ ವಾಕಿಂಗ್‌ಗೆ ಅನುಕೂಲ ಆಗಲೆಂದು ಚಿಕ್ಕದಾದ ರಸ್ತೆಯನ್ನು ನಿರ್ಮಿಸಲಾಗಿದೆ. ಆದರೆ ತಡೆಗೋಡೆ ನಿರ್ಮಿಸಿದ ನಂತರ ವಾಕಿಂಗ್ ಬೇಕಾದ ಸವಲತ್ತು ಒದಗಿಸಬೇಕಾದ ಪುರಸಭೆ ಈ ಭಾಗದಲ್ಲಿ ಬೀದಿ ದೀಪಗಳನ್ನು ಅಳವಡಿಸಿ ಸುಗಮ ವಾಕಿಂಗ್‌ಗೆ ಅನುಕೂಲ ಮಾಡಿಕೊಡಬೇಕಿತ್ತು.
ಇದನ್ನೂ ಓದಿ:- ಚಿಕ್ಕಮಗಳೂರು : ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಗಂಡಾನೆ
ಆದರೆ, ತಡೆಗೋಡೆ ನಿರ್ಮಾಣವಾದ ಹೊಸದರಲ್ಲಿ ಬಹಳಷ್ಟು ಮಂದಿ ವಾಕಿಂಗ್‌ಗೆ ಹೋಗಿ ಬರುವ ಪರಿಪಾಟ ಇರಿಸಿಕೊಂಡಿದ್ದರು. ಆದರೆ ವಾಕಿಂಗ್ ಬೇಕಾದ ಬೀದಿ ದೀಪಗಳು ಇಲ್ಲದೆ ಹೋಗಿದ್ದರಿಂದ ಕಸಕಡ್ಡಿಗಳು ಮತ್ತು ಗಿಡಗಂಟಿಗಳು ಬೆಳೆದು ಹಾಳಾಗಿ ಹೋಗಿದೆ.
ಇದನ್ನೆ ಬಂಡವಾಳ ಮಾಡಿಕೊಂಡ ಕೆಲವು ಕಳ್ಳರು ತಡೆಗೋಡೆಗೆ ಆಳವಡಿಸಿರುವ ಕಬ್ಬಿಣದ ಸರಳುಗಳನ್ನು ಕತ್ತರಿಸಿ ಕದೊಯ್ದಿದ್ದಾರೆ. ಆದ್ದರಿಂದ ಪುರಸಭೆ ಮತ್ತು ತಾಲೂಕು ಆಡಳಿತ ತಡೆಗೋಡೆ ಪಕ್ಕದಲ್ಲಿನ ರಸ್ತೆ, ಬೀದಿ ದೀಪ ಮತ್ತು ಮೂಲ ಸೌಕರ್ಯಗಳನ್ನು ಒದಗಿಸಿ ತಡೆಗೋಡೆ ಶಾಶ್ವತವಾಗಿ ಇರುವಂತೆ ಕಾಯ್ದುಕೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.