Advertisement

ಹೇಮರೆಡ್ಡಿ ಮಲ್ಲಮ್ಮ ಜೀವನ ಚರಿತ್ರೆ ಮಾದರಿ

05:07 PM Jun 12, 2017 | Team Udayavani |

ಚಿಂಚೋಳಿ: ಮಹಾಸಾ ಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಜೀವನ ಚರಿತ್ರೆ ಎಲ್ಲರಿಗೂ ಮಾದರಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಮರೆಡ್ಡಿ ಮಲ್ಲಮ್ಮಳ ಜಯಂತ್ಯುತ್ಸವನ್ನು ಸರಕಾರದಿಂದಲೇ ಆಚರಿಸಲು ಆದೇಶ ಹೊರಡಿಸಿ ಬಹುದಿನ ಬೇಡಿಕೆ ಈಡೇರಿಸಿದ್ದು ಸಂತಸವನ್ನುಂಟು ಮಾಡಿದೆ ಎಂದು ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಹೇಳಿದರು. 

Advertisement

ಪಟ್ಟಣದ ಗಂಗಮ್ಮ ಭೀಮಶೆಟ್ಟಿ ಪಾಟೀಲ ಕಲ್ಯಾಣ ಮಂಟಪದಲ್ಲಿ ರವಿವಾರ ಹೇಮರೆಡ್ಡಿ ಮಲ್ಲಮ್ಮನವರ 595ನೇ ಜಯಂತ್ಯುತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಬೃಹತ್‌ ರಕ್ತದಾನ ಶಿಬಿರ ಮತ್ತು ಗೌರವ ಪೂರ್ಣ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 

ಚಿಂಚೋಳಿ ಪಟ್ಟಣದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಿಸಿದ ಮರುದಿನವೇ ಹೊಸದಾಗಿ ನಿರ್ಮಿಸಲಾಗಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನವನ್ನು ತೆರವುಗೊಳಿಸುವುದು ರೆಡ್ಡಿ ಸಮಾಜಕ್ಕೆ ನೋವುಂಟು ಮಾಡಿದೆ. ಚಿಂಚೋಳಿ ಪಟ್ಟಣದಲ್ಲಿ ಖಾಸಗಿ ಜಮೀನಿನಲ್ಲಿ ನಿರ್ಮಿಸಲಾಗಿದ್ದ ಹೇಮರೆಡ್ಡಿ ಮಲ್ಲಮ್ಮಳ ದೇವಾಲಯವನ್ನು ರಾಜಕೀಯ ಷಡ್ಯಂತ್ರದಿಂದ ಕೆಡವಿ ಹಾಕಲಾಗಿದೆ. 

ಜುಲೈನೊಳಗೆ ಹೇಮರೆಡ್ಡಿ ಮಲ್ಲಮ್ಮಳ ದೇವಸ್ಥಾನ ನಿರ್ಮಿಸಲು ಪರ್ಯಾಯ ಸ್ಥಳ ಪರಿಶೀಲಿಸಿ ಕೊಡಬೇಕು. ಇಲ್ಲದಿದ್ದರೆ ಬೆಂಗಳೂರಿನಲ್ಲಿ ಮೌನ ಸತ್ಯಾಗ್ರಹ ನಡೆಸುವುದಾಗಿ ಹೇಳಿದರು. ಹೇಮರೆಡ್ಡಿ ಮಲ್ಲಮ್ಮಳ ದೇವಸ್ಥಾನ ಯಾವುದೇ ರಾಜ್ಯ-ರಾಷ್ಟ್ರೀಯ ಹೆದ್ದಾರಿಗೆ ಅಡ್ಡಿಯಾಗಿರಲಿಲ್ಲ.

ಅಧಿಕಾರಿಗಳು ಎಚ್ಚರ ತಪ್ಪಿ ಇಂತಹ ಅನಾಹುತ ಮಾಡಿರುವುದು ತುಂಬಾ ನೋವಿನ ಸಂಗತಿಯಾಗಿದೆ. ಕಲ್ಯಾಣ ನಾಡು ಸರ್ವರಿಗೂ ಸಮಬಾಳು ಶಾಂತಿ ನೀಡಿದ ಶರಣ ನಾಡಾಗಿದೆ. ಯಾವುದೇ ಸಮಾಜದ ಗುಡಿ ಗುಂಡಾರಗಳನ್ನು ಕೆಡುವುದು ಸೂಕ್ತ ಹಾಗೂ ಸಮಂಜಸವಾದುದ್ದಲ್ಲ.

Advertisement

ಶಾಸಕ ಡಾ| ಉಮೇಶ ಜಾಧವ ಹೇಮರೆಡ್ಡಿ ಮಲ್ಲಮ್ಮಳ ದೇವಸ್ಥಾನ ನಿರ್ಮಿಸಲು ಮುಂದಾಗಬೇಕು ಎಂದು ಹೇಳಿದರು. ಮಾಜಿ ಸಚಿವ ಸುನೀಲ ವಲ್ಯಾಪುರೆ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ್‌ ರಮೇಶ ಯಾಕಾಪುರ, ಜಿಪಂ ಸದಸ್ಯ ಗೌತಮ ಪಾಟೀಲ, ಮಧುಸೂಧನರೆಡ್ಡಿ ಪಾಟೀಲ, ವಿಶಾಲಕ್ಷಿ ಕರೆಡ್ಡಿ ಮಾತನಾಡಿದರು. ರವಿಶಂಕರರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಹೆಡಗಿಮುದ್ರಿಯ ಶ್ರೀಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ತಾಲೂಕು ರೆಡ್ಡಿ ಸಮಾಜದ ಅಧ್ಯಕ್ಷ ಕಿರಣರೆಡ್ಡಿ ಪಾಟೀಲ, ಜಿಪಂ ಸದಸ್ಯ ರಾಮಲಿಂಗಾರೆಡ್ಡಿ ದೇಶಮುಖ, ಜಗಜೀವನರಾಮರೆಡ್ಡಿ ಮಿರಿಯಾಣ, ಅರುಣ ಪವಾರ, ಲಲ್ಲೇಶರೆಡ್ಡಿ, ಶಾಂತುರೆಡ್ಡಿ ನರನಾಳ, ಭೀಮರೆಡ್ಡಿ ವåಕಾಶಿ, ರಾಜೇಂದ್ರ ಗೋಸುಲ ಮತ್ತು ರೆಡ್ಡಿ ಸಮಾಜದ ಗಣ್ಯರು ಭಾಗವಹಿಸಿದ್ದರು. ಶ್ರೀನಿವಾಸ ಬಂಡಿ ಸ್ವಾಗತಿಸಿದರು. ಸೋಮನಾಥರೆಡ್ಡಿ ಗರಗಪಳ್ಳಿ ನಿರೂಪಿಸಿದರು. ಹಣಮಂತರೆಡ್ಡಿ ಕೊಳ್ಳುರ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next