Advertisement

ಎಲ್‌ಐಸಿ ಆಡಳಿತ ನಿರ್ದೇಶಕರಾಗಿ ಹೇಮಂತ ಭಾರ್ಗವ ನೇಮಕ

12:36 PM Feb 10, 2017 | udayavani editorial |

ಹೊಸದಿಲ್ಲಿ : ಸರಕಾರಿ ಒಡೆತನದ ಭಾರತೀಯ ಜೀವವಿಮಾ ನಿಗಮದ (LIC) ಆಡಳಿತ ನಿರ್ದೇಶಕರನ್ನಾಗಿ ಹೇಮಂತ ಭಾರ್ಗವ ಅವರನ್ನು ಇಂದು ನೇಮಿಸಲಾಗಿದೆ.

Advertisement

ಹೇಮಂತ ಭಾರ್ಗವ ಅವರು ಪ್ರಕೃತ ಎಲ್‌ಐಸಿ ದಿಲ್ಲಿ ಝೋನಲ್‌ ಮ್ಯಾನೇಜರ್‌ ಆಗಿದ್ದಾರೆ. 

ಭಾರ್ಗವ ಅವರ ನೇಮಕಾತಿಗೆ ಕೇಂದ್ರ ಸಚಿವ ಸಂಪುಟವಿಂದು ಅನುಮೋದನೆ ನೀಡಿತು. 2019ರ ಜುಲೈ 31ರಂದು ನಿವೃತ್ತರಾಗುವ ತನಕ ಭಾರ್ಗವ ಅವರು ಈ ಎಲ್‌ಐಸಿಯ ಎಂಡಿ ಆಗಿರುತ್ತಾರೆ ಎಂದು ಸಿಬಂದಿ ಸಚಿವಾಲಯ ಹೊರಡಿಸಿರುವ ಆದೇಶ ತಿಳಿಸಿದೆ. 

ಎಲ್‌ಐಸಿ ಯ ಉನ್ನತ ಆಡಳಿತೆಯು ಓರ್ವ ಅಧ್ಯಕ್ಷ ಹಾಗೂ ಮೂವರು ಆಡಳಿತ ನಿರ್ದೇಕರನ್ನು ಹೊಂದಿರುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next