Advertisement
ಆಹಾರ ಮೇಳ, ಸಂತೆ, ಕರಕುಶಲ ವಸ್ತು ಪ್ರದರ್ಶನ, ವಿಜ್ಞಾನ ಮೇಳದಲ್ಲಿ ಖುಷಿ- ಖುಷಿಯಿಂದಲೇ ಪಾಲ್ಗೊಂಡ ಮಕ್ಕಳು ಪಠ್ಯದ ಹೊರತಾದ ಹೊಸತೊಂದು ಅನುಭವವನ್ನು ಪಡೆದುಕೊಂಡರು.
ಪ್ರತಿ ದಿನ ತರಗತಿಯಲ್ಲಿ ಕುಳಿತು ಪಾಠ ಪ್ರವಚನಕ್ಕಷ್ಟೇ ಸೀಮಿತವಾಗಿದ್ದ ಮಕ್ಕಳು ತಾವೇ ಕೈಯಾರೆ ತಯಾರಿಸಿದ ಆಹಾರ ಖಾದ್ಯಗಳನ್ನು ಮಾರಾಟ ಮಾಡುತ್ತಿದ್ದರು. ಆಹಾರ ಮೇಳಕ್ಕೆ ಬಂದ ಗ್ರಾಹಕರ ಮನವೊಲಿಸಿ ತಾವು ತಯಾರಿಸಿದ ತಿಂಡಿ – ತಿನಿಸುಗಳನ್ನು ಮಾರಾಟ ಮಾಡಿದ ಮಂದಹಾಸ ಕಾಣಿಸಿತು. ಬೆಳಗ್ಗೆ ಬೇಗ ಬಂದು ಶಾಲೆಯಲ್ಲೇ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಅಡುಗೆ ಸಿಬಂದಿ ಮಾರ್ಗದರ್ಶನ ವಿದ್ಯಾರ್ಥಿಗಳಿಗಿತ್ತು. ಗ್ರಾಹಕರಿಗೆ, ವಿದ್ಯಾರ್ಥಿಗಳ ಪೋಷಕರಿಗಾಗಿ ಕರಕುಶಲ ವಸ್ತು ಪ್ರದರ್ಶನ ಹಾಗೂ ವಿಜ್ಞಾನ ಮಾದರಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಶಿಕ್ಷಕಿಯರ ಮಾರ್ಗದರ್ಶನದಲ್ಲಿ ತಯಾರಿ ಸಿದ ವಿದ್ಯಾರ್ಥಿಗಳೇ ತಯಾರಿಸಿದ ಕರಕುಶಲ ವಸ್ತುಗಳು ನೋಡುಗರನ್ನು ಆಕರ್ಷಿಸಿದವು.
Related Articles
ಆಹಾರ ಮೇಳವು ಒಂದು ರೀತಿಯಲ್ಲಿ ವಾರದ ಸಂತೆಯಂತೆ ಕಂಡು ಬಂತು. ದಿನಸಿ ವಸ್ತುಗಳ ಖರೀದಿಗೆ ರಿಯಾಯತಿ ದರಕ್ಕಾಗಿ ವಿದ್ಯಾರ್ಥಿಗಳು ಹಾಗೂ ಗ್ರಾಹಕರ ಮಧ್ಯೆ ಭಾರೀ ಚರ್ಚೆಯೇ ನಡೆಯಿತು. ಮೆಣಸು, ಕೊತ್ತಂಬರಿ, ಹುಳಿ, ಬೆಳ್ಳುಳ್ಳಿ, ಈರುಳ್ಳಿ, ಜೀರಿಗೆ, ಮೆಂತೆ, ಕಾಳುಮೆಣಸು ಸೇರಿದಂತೆ ಹಲವು ದಿನಸಿ ವಸ್ತುಗಳನ್ನು ಖರೀದಿಸಲು ಗ್ರಾಹಕರು ಮುಗಿಬಿದ್ದರು.
Advertisement
ಪ್ರಾಪಂಚಿಕ ಜ್ಞಾನದ ಅರಿವುಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನ, ವ್ಯಾಪಾರ ಕೌಶಲವನ್ನು ಕಲಿಸುವ ಉದ್ದೇಶದಿಂದ ಈ ಆಹಾರ ಮೇಳವನ್ನು ಆಯೋಜಿಸಲಾಗಿದೆ. ಮಕ್ಕಳು ತಾವೇ ತಯಾರಿಸಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡಿದ್ದಾರೆ. ಸಹ ಶಿಕ್ಷಕಿಯರು, ಶಾಲಾಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿಗಳು ಹಾಗೂ ಮಕ್ಕಳ ಪೋಷಕರು ಆಹಾರ ಮೇಳಕ್ಕೆ ಸಹಕಾರ ನೀಡಿದ್ದಾರೆ.
-ದಿವಾಕರ್, ಶಾಲಾ ಮುಖ್ಯೋಪಾಧ್ಯಾಯರು