Advertisement

ನಾಗಮಂಗಲ ಕೆರೆಗಳಿಗೆ ಹೇಮೆಯ ನೀರು

06:16 AM May 27, 2020 | Lakshmi GovindaRaj |

ನಾಗಮಂಗಲ: ಹೇಮಾವತಿ ಅಣೆಕಟ್ಟೆಯಿಂದ ತಾಲೂಕಿನ  ಕೆರೆಗಳಿಗೆ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಶಾಸಕ ಸುರೇಶ್‌ ಗೌಡ ನಾಲಾ ಪ್ರದೇಶಕ್ಕೆ ಭೇಟಿ ನೀಡಿ ಹರಿದು ಬರುತ್ತಿರುವ ನೀರಿನ ಪ್ರಮಾಣ ಪರಿಶೀಲಿಸಿದರು.

Advertisement

ನೀರಾವರಿ ಇಲಾಖೆ  ಅಧಿಕಾರಿಗಳೊಂದಿಗೆ ಸಾಮಕಹಳ್ಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ತಾಲೂಕಿನ ಕೆರೆಗಳಿಗೆ ನೀರು ಹರಿಸುವಂತೆ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡರಲ್ಲಿ ಮನವಿ  ಮಾಡಲಾಗಿತ್ತು. ಇದೀಗ ನಾಲೆಗಳಿಗೆ ನೀರು ಬಿಟ್ಟಿದ್ದು, ಕೆರೆಕಟ್ಟೆಗಳಿಗೆ ಹರಿಯುತ್ತಿದೆ.

ಯಾವುದೇ ಕಾರಣಕ್ಕೂ ನೀರಿನ ಪ್ರಮಾಣ ಕಡಿಮೆ ಮಾಡದಂತೆ ಹಾಗೂ ನೀರು ಪೋಲಾಗದಂತೆ ಜಾಗೃತಿ ವಹಿಸುವಂತೆ ಮತ್ತು ಎಲ್ಲಾ ಕೆರೆಗಳನ್ನು  ತುಂಬಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನನ್ನ ಮನವಿಗೆ ಸ್ಪಂದಿಸಿರುವ ಸಚಿವದ್ವಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ನೀರಿನ ಸಮಸ್ಯೆ ಬಗೆಹರಿಸಿ: ಕುಡಿಯುವ ನೀರು ಪೂರೈಕೆಗೆಂದು ಗ್ರಾಮದಲ್ಲಿ ಕೊಳವೆ ಬಾವಿ  ತೆಗೆಸಿದ್ದೀರಿ. ಆದರೆ, ಇದುವರೆಗೂ ಪೈಪ್‌ಲೈನ್‌ ಕೆಲಸವಾಗಿಲ್ಲ. ವಾರ  ಕ್ಕೊಮ್ಮೆ ಕುಡಿವ ನೀರು ಬಿಡುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಬಿಂಡಿಗನವಿಲೆ ಗ್ರಾಮಸ್ಥರು ಶಾಸಕರಲ್ಲಿ ಮನವಿ ಮಾಡಿದರು. ಇದಕ್ಕೆ ಶಾಸಕ ಸುರೇಶ್‌ಗೌಡ  ಪ್ರತಿಕ್ರಿಯಿಸಿ ಕುಡಿಯುವ ನೀರಿನ ವಿಚಾರದಲ್ಲಿ ನಿರ್ಲಕ್ಷ  ಮಾಡಿದರೆ ಶಿಸ್ತು ಕ್ರಮ ಜರುಗಿಸಲಾಗುವುದು. ಒಂದು ವಾರದೊಳಗೆ ಪೈಪ್‌ಲೈನ್‌ ಸರಿಪಡಿಸಿ ಸಾರ್ವಜನಿಕರಿಗೆ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next