Advertisement

ಹೇಮಾಮಾಲಿನಿ ಪುತ್ರಿ ಇಶಾ ಡಿಯೋಲ್‌ ರಾಜಕೀಯಕ್ಕೆ ಎಂಟ್ರಿ?

09:08 PM Feb 17, 2024 | Team Udayavani |

ಮುಂಬೈ: ಹಿರಿಯ ನಟಿ ಹಾಗೂ ಸಂಸದೆ ಹೇಮಾಮಾಲಿನಿ ಅವರ ಪುತ್ರಿ ಇಶಾ ಡಿಯೋಲ್‌ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ? ಮಗಳು ಇಶಾಗೆ ರಾಜಕೀಯದ ಬಗ್ಗೆ ವಿಶೇಷ ಒಲವಿದ್ದು, ಯಾವಾಗ ಬೇಕಿದ್ದರೂ ರಾಜಕೀಯಕ್ಕೆ ಸೇರ್ಪಡೆಗೊಳ್ಳಬಹುದು ಎಂದು ಸ್ವತಃ ಹೇಮಾ ಅವರೇ ಹೇಳಿದ್ದಾರೆ.

Advertisement

ಇದು ವಿಚ್ಛೇದನದ ಬಳಿಕ ಈಶಾ ರಾಜಕೀಯ ಪ್ರವೇಶಿಸುವ ಸುಳಿವನ್ನು ನೀಡಿದೆ. 2012ರಲ್ಲಿ ಉದ್ಯಮಿ ಭರತ್‌ ತಕ್ತಾನಿ ಅವರ ಕೈ ಹಿಡಿದಿದ್ದ ನಟಿ ಇಶಾ ಡಿಯೋಲ್‌, ತಮ್ಮಿಬ್ಬರ 11 ವರ್ಷಗಳ ದಾಂಪತ್ಯಕ್ಕೆ ವಿದಾಯ ಹೇಳಿರುವುದಾಗಿ ಈ ತಿಂಗಳ ಆರಂಭದಲ್ಲಷ್ಟೇ ಘೋಷಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next