Advertisement

ಸಣ್ಣ ಕಾಫಿ ಬೆಳೆಗಾರರ ಕುಟುಂಬಕ್ಕೆ ಸಹಾಯಧನ ವಿತರಣೆ

07:09 PM Sep 16, 2020 | Suhan S |

ಚಿಕ್ಕಮಗಳೂರು: ಮಸಗಲಿ ಗ್ರಾಮದಸುತ್ತಮುತ್ತ ಸಣ್ಣ ಕಾಫಿ ಬೆಳೆಗಾರರು ಜೀವನೋಪಾಯಕ್ಕಾಗಿ ಬೆಳೆಸಿದ್ದತೋಟವನ್ನು ಅರಣ್ಯ ಇಲಾಖೆಯವರ ದೌರ್ಜನ್ಯದಿಂದ ನಾಶ ಮಾಡಿದ್ದು ಕಾಫಿ ಗಿಡಗಳು ನಾಶವಾಗಿರುವ ಕುಟುಂಬಕ್ಕೆ ಜಿಲ್ಲಾ ಯುವ ಜನತಾದಳದಿಂದ ಸಹಾಯಧನ ನೀಡಲಾಯಿತು.

Advertisement

ಜೆಡಿಎಸ್‌ ಜಿಲ್ಲಾ ವಕ್ತಾರ ಹೊಲದಗದ್ದೆ ಗಿರೀಶ್‌ ಮಾತನಾಡಿ, ಮಸಗಲಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಅರಣ್ಯಾಧಿ ಕಾರಿಗಳ ದೌರ್ಜನ್ಯದಿಂದ ಹೊಟ್ಟೆಪಾಡಿಗಾಗಿ ಜೀವನ ಸಾಗಿಸುತ್ತಿರುವ ಕಡು ಬಡವರ ಕಾಫಿ ತೋಟಗಳನ್ನು ನಾಶಮಾಡಿರುವುದು ಅತ್ಯಂತ ಖಂಡನೀಯ. ತಮ್ಮ ಪತಿ ಹಾಗೂ ತೋಟವನ್ನು ಕಳೆದುಕೊಂಡ ಗ್ರಾಮದ ವಿಜಯಮ್ಮ, ಲಲಿತಮ್ಮ ಹಾಗೂ ದೇವಕಮ್ಮ ಕುಟುಂಬದವರಿಗೆ ಜಿಲ್ಲಾ ಯುವಜನತಾದಳ ವತಿಯಿಂದ ತಲಾ 10 ಸಾವಿರ ರೂ. ಸಹಾಯಧನ ನೀಡಿ ಮಾನವೀಯತೆ ಮರೆದಿದ್ದು,ಸಾಕಷ್ಟು ಸಮಾಜಮುಖೀ ಕೆಲಸವನ್ನು ಮಾಡಿಕೊಂಡು ಬಂದಿರುವಯುವಜನತಾದಳ ಕಾರ್ಯಕರ್ತರನ್ನು ಶ್ಲಾಘಿಸಿದರು.

ಈ ಹಿಂದೆ ಜೆಡಿಎಸ್‌ ಮುಖಂಡರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಈ ಭಾಗದ ಒತ್ತುವರಿ ಮಾಡಿರುವ 211 ಕುಟುಂಬವನ್ನು ಕೂಡಾ ನಿರಾಶ್ರಿತರೆಂದು ಪರಿಗಣಿಸಿ ಅವರಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಬೇಕೆಂದುಒತ್ತಾಯಿಸಲಾಗಿತ್ತು ಎಂದರು. ಯುವಜನತಾದಳದ ಜಿಲ್ಲಾಧ್ಯಕ್ಷ  ವಿನಯ್‌ ಮಾತನಾಡಿ, ಸಣ್ಣ ಸಹಾಯಧನ ನೀಡಿದ್ದು ಅವರ ದಿನನಿತ್ಯ ಉಪಯೋಗಕ್ಕೆ ಬಳಕೆಯಾಗಲಿದೆ ಎಂದು ಅವರು, ಇಂತಹ ಕಷ್ಟದ ಸಮಯದಲ್ಲಿರುವ ಕುಟುಂಬಕ್ಕೆ ಯುವಜನತಾದಳ ವತಿಯಿಂದ ಸಹಾಯಕ್ಕೆ ಸದಾ ಸಿದ್ಧವಿದೆ ಎಂದು ತಿಳಿಸಿದರು.

ಒತ್ತುವರಿ ಸಮಿತಿ ಅಧ್ಯಕ್ಷರಾದ ಎಂ.ಎಲ್‌. ಬಸವರಾಜ, ಯುವಜನತಾ ದಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಆರ್‌. ಕುಶ, ಮುಖಂಡರಾದ ಆಶ್ರಯ್‌, ಶಶಿಧರ್‌, ಮಲ್ಲಂದೂರು ಕುಮಾರ್‌, ಸಂದೇಶ್‌, ಶಂಕರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next