Advertisement
ಎಬಿವಿಪಿ ಪುತ್ತೂರು ಘಟಕದ ವತಿಯಿಂದ ನೆಹರೂನಗರ ವಿವೇಕಾನಂದ ಮಹಾವಿದ್ಯಾಲಯದ ಕೇಶವ ಸಂಕಲ್ಪ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಪ್ರವಾಹ ಸಂತ್ರಸ್ತರಿಗೆ ನೀಡುವ ವಸ್ತುಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ಎಬಿವಿಪಿ ಕಾರ್ಯಕರ್ತರು ನಿರತವಾಗಿದ್ದಾರೆ. ವಿದ್ಯಾರ್ಥಿ ಯುವ ಸಮೂಹ ಬಟ್ಟೆಬರೆಗಳನ್ನು ಸಂಗ್ರಹಿಸುವ ಮೂಲಕ ಮಾನವೀಯ ಸ್ಪಂದನ ವ್ಯಕ್ತಪಡಿಸಿದ್ದಾರೆ.
ಕೊಡಗು ಜಿಲ್ಲಾ ಪ್ರವಾಹ ಸಂತ್ರಸ್ತರಿಗೆ ಶನಿವಾರ ಬೆಳಗ್ಗೆ ಬಿಸ್ಕತ್, ಬ್ರೆಡ್ ಸಹಿತ ಅಗತ್ಯ ವಸ್ತುಗಳ ಪ್ರಥಮ ಕಂತನ್ನು ಪುತ್ತೂರು ಜಿಲ್ಲಾ ವಿಹಿಂಪ ಕಾರ್ಯಾಲಯದಿಂದ ರವಾನಿಸಲಾಯಿತು. ವಿಹಿಂಪ ಮತ್ತು ಬಜರಂಗದಳದ ತಂಡ ಕೊಡಗು ಪ್ರದೇಶಕ್ಕೆ ತೆರಳಿ ಅಲ್ಲಿನ ನಿರಾಶ್ರಿತರಿಗೆ ಅಗತ್ಯವಿರುವ ವಸ್ತುಗಳ ಕುರಿತು ಮಾಹಿತಿ ಸಂಗ್ರಹಿಸಿ ಶನಿವಾರ ಸಂಜೆ ಪುತ್ತೂರಿಗೆ ಮರಳಲಿದೆ. ಸಂತ್ರಸ್ತರಿಗೆ ಅಗತ್ಯವಿರುವ ವಸ್ತುಗಳನ್ನಷ್ಟೇ ಇಲ್ಲಿಂದ ರವಾನಿಸಲಾಗುತ್ತದೆ. ಸಂಗ್ರಹಿತ ಇತರ ಸಾಮಗ್ರಿಗಳನ್ನು ಶನಿವಾರ ಸಂಜೆ ಲಾರಿಗಳಲ್ಲಿ ಕೊಡಗು ಜಿಲ್ಲೆಗೆ ಕಳುಹಿಸಲಾಗುತ್ತದೆ ಎಂದು ಮುಖಂಡರು ತಿಳಿಸಿದ್ದಾರೆ. ಸುಬ್ರಹ್ಮಣ್ಯ: ಕೊಡಗು ಜಿಲ್ಲೆಯಲ್ಲಿ ಸುರಿದ ಭೀಕರ ಮಳೆಯಿಂದ ಆಸ್ತಿಪಾಸ್ತಿ ಹಾಗೂ ಮನೆಗಳನ್ನು ಕಳಕೊಂಡು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿರುವ ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ಸುಬ್ರಹ್ಮಣ್ಯ ನಾಗರಿಕರು, ಸ್ಥಳೀಯ ಸಂಘಸಂಸ್ಥೆಗಳ ನೆರವಿನಿಂದ ಸುಮಾರು ಮೂರು ಸಾವರದಷ್ಟು ಚಪಾತಿ ಸಿದ್ಧಪಡಿಸಿ ಶನಿವಾರ ಪರಿಹಾರ ಕೇಂದ್ರಕ್ಕೆ ರವಾನಿಸಲಾಯಿತು. ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಅರ್ಚಕರು, ರೋಟರಿಕ್ಲಬ್ ಸುಬ್ರಹ್ಮಣ್ಯ, ಇನ್ನರ್ ವೀಲ್ ಕ್ಲಬ್ ಸುಬ್ರಹ್ಮಣ್ಯ ಇದರ ಸದಸ್ಯರು, ಹಾಗೂ ಸ್ಥಳೀಯರು ನಾಗರಿಕರು ಸೇರಿ ಸುಮಾರು ಮೂರು ಸಾವಿರದಷ್ಟು ಚಪಾತಿಯನ್ನು ಎಸ್‌ಎಲ್‌ಆರ್ ವಸತಿಗ್ರಹದ ಬಳಿ ಸಿದ್ಧಪಡಿಸಿದರು. ಅರ್ಚಕ ಕೈಲಾಸ ಭಟ್ ಹಾಗೂ ಅಕ್ಷಯಧಾರ ವಸತಿಗೃಹದವರು ತಲಾ ಒಂದು ಕ್ವಿಂಟ್ವಾಲ್‌ನಷ್ಟು ಗೋಧಿ ಹಿಟ್ಟು ನೀಡಿದರು. ಉಳಿದಂತೆ ಸಂಘ ಸಂಸ್ಥೆಗಳು, ಸ್ಥಳೀಯರು ನೆರವು ನೀಡಿ ತಯಾರಿಕೆಯಲ್ಲಿ ಭಾಗವಹಿಸಿ ಸುಮಾರು ಮೂರು ಸಾವಿರದಷ್ಟು ಚಪಾತಿ ತಯಾರಿಸಿದರು. ಅವುಗಳನ್ನು ನೆರೆ ಸಂತ್ರಸ್ತ ಕೇಂದ್ರಕ್ಕೆ ತಲುಪಿಸಲಾಯಿತು.