Advertisement

ಮೃತ ಕೃಷಿ ಕಾರ್ಮಿಕ ಕುಟುಂಬಕ್ಕೆ ಸಹಾಯ

12:43 PM Dec 11, 2021 | Team Udayavani |

ಅಫ‌ಜಲಪುರ: ತಾಲೂಕಿನ ಭೈರಾಮಡಗಿಯಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಕೃಷಿ ಕೂಲಿ ಕಾರ್ಮಿಕನ ಬಡ ಕುಟುಂಬಕ್ಕೆ ಗ್ರಾಮ ಪಂಚಾಯಿತಿ ಸದಸ್ಯರಿಬ್ಬರು ವೈಯಕ್ತಿಕವಾಗಿ ಆರ್ಥಿಕ ಸಹಾಯ ನೀಡಿದ್ದಾರೆ.

Advertisement

ಮೃತಪಟ್ಟ ಮಾಳಪ್ಪ ಸೂರ್ಯಕಾಂತ ಕಡಗಂಚಿ ಕೃಷಿ ಕೂಲಿ ಕಾರ್ಮಿಕನ ಪತ್ನಿಗೆ ಸಾಂತ್ವನ ಹೇಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಸೈಬಣ್ಣ ಹಣಮಂತ ಕಲಬುರಗಿ 15000ರೂ., ಸಿದ್ಧಪ್ಪ ನಿಂಬರಗಿ 10000ರೂ. ವೈಯಕ್ತಿಕ ನೆರವು ನೀಡಿದ್ದಾರೆ.

ಬಡ ಕೃಷಿಕ ಅಕಾಲಿಕವಾಗಿ ಮೃತಪಟ್ಟಿದ್ದರಿಂದ ಮನೆ ಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ನೆರವು ನೀಡಲಾಗಿದೆ ಎಂದು ಗ್ರಾಪಂ ಸದಸ್ಯರು ತಿಳಿಸಿದ್ದಾರೆ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಧುತ್ತರಗಾಂವ, ಗ್ರಾಮ ಪಂಚಾಯಿತಿ ಸದಸ್ಯೆ ವಿಜಯಲಕ್ಷ್ಮೀ ಮಲ್ಲಿಕಾರ್ಜುನ, ತುಕಾರಾಂ ಯಳಸಂಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next