Advertisement

ಉಪಕಾರಿ ಕಾಫಿ

02:00 PM Jan 17, 2018 | |

ಆಫೀಸಿನಲ್ಲಿ ಕೆಲಸ ಜಾಸ್ತಿಯಾಗಿ ತಲೆ ಸಿಡಿಯುತ್ತಿತ್ತು. ಒಂದು ಕಾಫಿ ಕುಡಿದರೆ ಹೇಗೆ ಅಂತ ಅವಳಿಗೆ ಅನ್ನಿಸಿತು. ತಕ್ಷಣ, “ಅಯ್ಯೋ ಬೇಡ, ಹೆಲ್ತ್‌ ಹಾಳಾಗುತ್ತೆ’ ಅನ್ನೋ ಯೋಚನೆ. ಆದರೆ, ಕಾಫಿ ಅಂದ್ರೆ ಅಷ್ಟೊಂದು ಭಯ ಬೇಡ ಅನ್ನುತ್ತವೆ ಕೆಲವು ಸಂಶೋಧನೆಗಳು. ಅದರಿಂದ ಏನೇನು ಉಪಯೋಗ ಗೊತ್ತೇ?

Advertisement

– ಮನೆ, ಆಫೀಸ್‌, ಮಕ್ಕಳ ಪಾಲನೆ… ಹೀಗೆ ನೀವು ದೈಹಿಕವಾಗಿ, ಮಾನಸಿಕವಾಗಿ ಸುಸ್ತಾಗಿರುತ್ತೀರಿ. ಆಗ ಒಂದು ಕಪ್‌ ಕಾಫಿ ಕುಡಿದರೆ, ಅದರಲ್ಲಿರುವ ಕೆಫೇನ್‌ ಅಂಶ ನಿಮಗೆ ಚೈತನ್ಯ ಒದಗಿಸಬಲ್ಲದು. ಮೆದುಳನ್ನು ಆ್ಯಕ್ಟಿವ್‌ ಮಾಡಲು ಸಹ ಕೆಫೇನ್‌ ಸಹಕಾರಿ.

– ಕಾಫಿಯಲ್ಲಿರುವ ಕೆಫೇನ್‌ ಅಂಶ ದೇಹದಲ್ಲಿ ಶೇಖರಣೆಯಾಗಿರುವ ಅನಗತ್ಯ ಕೊಬ್ಬನ್ನು ಕರಗಿಸಿ ನಿಮ್ಮನ್ನು ಫಿಟ್‌ ಆಗಿಸುತ್ತೆ.

– ಹೆಚ್ಚಿನವರಿಗೆ ಬೆಳಗೆದ್ದ ಕೂಡಲೆ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಕೆಫೇನ್‌ ಅಂಶದಿಂದಾಗಿ ರಕ್ತದಲ್ಲಿ ಅಡ್ರೆನಲಿನ್‌ ಹಾರ್ಮೋನ್‌ ಹೆಚ್ಚೆಚ್ಚು ಬಿಡುಗಡೆಯಾಗಿ ನರಗಳಿಗೆ ಚೈತನ್ಯ ಬರುತ್ತದೆ.

– ಮಹಿಳೆಯರು ಆರೋಗ್ಯದ ಕಡೆ ಗಮನ ಕೊಡುವುದು ಕಡಿಮೆ. ಹಾಗಾಗಿ ಅವರಲ್ಲಿ ಮಧಮೇಹದಂಥ ಕಾಯಿಲೆಗಳು ಹೆಚ್ಚೆಚ್ಚು ಕಾಣಿಸುತ್ತಿವೆ. ಸಕ್ಕರೆ ಕಾಯಿಲೆ ತಡೆಯುವಲ್ಲಿಯೂ ಕಾಫಿ ಸಹಕಾರಿ ಅನ್ನುತ್ತವೆ ಸಂಶೋಧನೆಗಳು.

Advertisement

– ವಯಸ್ಸಾದವರಲ್ಲಿ ಕಾಣಿಸಿಕೊಳ್ಳುವ ನರ ಸಂಬಂಧೀ ಸಮಸ್ಯೆಗಳಾದ ಆಲೆl„ಮರ್‌, ಪಾರ್ಕಿನ್‌ಸನ್‌ ಕಾಯಿಲೆಗಳ ಅಪಾಯವನ್ನೂ ಕಾಫಿ ಕೊಂಚ ಮಟ್ಟಿಗೆ ಕಡಿಮೆ ಮಾಡುತ್ತದಂತೆ. ಕೆಫೇನ್‌ ಅಂಶವೇ ಇದಕ್ಕೆ ಮುಖ್ಯ ಕಾರಣ. 

– ಯಾಕೋ ತಲೆನೋವು, ಮೂಡು ಚೆನ್ನಾಗಿಲ್ಲ ಅನ್ನಿಸಿದಾಗ ಕಾಫಿ ಕುಡಿದರೆ ಮನಸ್ಸು ರಿಲ್ಯಾಕ್ಸ್‌ ಆಗುತ್ತದೆ. 2011ರ ಹಾರ್ವರ್ಡ್‌ ಸ್ಟಡಿ ಪ್ರಕಾರ, ಕಾಫಿ ಕುಡಿಯುವ ಮಹಿಳೆಯರು ಖನ್ನತೆಗೊಳಗಾಗುವ ಪ್ರಮಾಣ ಉಳಿದವರಿಗಿಂತ ಶೇ. 20ರಷ್ಟು ಕಡಿಮೆ.  

– ಕಾಫಿ ಕುಡಿಯುವುದರಿಂದ ಲಿವರ್‌ಗೆ ಶಕ್ತಿ ಸಿಗುವುದಷ್ಟೇ ಅಲ್ಲದೆ, ಸಿರೋಸಿಸ್‌, ಹೆಪಟೈಟಿಸ್‌ನಂಥ ಕಾಯಿಲೆಗಳನ್ನು ದೂರ ಮಾಡಬಹುದು.

– ಕಾಫಿಯಲ್ಲಿ ಆ್ಯಂಟಿಆಕ್ಸಿಡೆಂಟ್ಸ್‌ ಪ್ರಮಾಣ ಇತರೆ ಪೇಯಗಳಿಗಿಂತ ಅಧಿಕವಾಗಿರುವುದರಿಂದ, ಅದು ಆರೋಗ್ಯಕ್ಕೆ ಒಳ್ಳೆಯದು ಎಂದೂ ಸಂಶೋಧನೆಗಳಿಂದ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next