Advertisement
ಸೆ. 26ರಂದು ಐರೋಲಿಯ ಹೆಗ್ಗಡೆ ಭವನದಲ್ಲಿ ಬಂಟರ ಸಂಘ ಮುಂಬಯಿ ಇದರ ನವಿಮುಂಬಯಿ ಪ್ರಾದೇಶಿಕ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ “ಬಂಟರ ಸಂಘ ನಮ್ಮ ಮನೆಯಲ್ಲಿ ನಮ್ಮ ಮನದಲ್ಲಿ’ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜಕ್ಕೆ ನಾವು ನೀಡಿದ ಸಹಾಯವು ಎಂದೂ ವ್ಯರ್ಥವಾಗುವುದಿಲ್ಲ. ಸಮಾಜದ ಋಣ ನಮ್ಮಲ್ಲಿ ಸದಾ ಇರುತ್ತದೆ. ಅದನ್ನು ತೀರಿಸಲು ಸಂಘ-ಸಂಸ್ಥೆಗಳು ಒಂದು ಉತ್ತಮ ಮಾರ್ಗವಾಗಿದೆ. ಸಂಘಗಳ ಮೂಲಕ ಸಮಾಜ-ಬಾಂಧವರು, ದಾನಿ ಗಳು ಮುಂದೆ ಬಂದು ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
Related Articles
Advertisement
ಬಂಟರ ಸಂಘ ಮುಂಬಯಿ ಇದರ ಸದಸ್ಯತ್ವ ಸಮಿತಿಯ ಕಾರ್ಯಾಧ್ಯಕ್ಷ ಎನ್. ಸಿ. ಶೆಟ್ಟಿ ಸಮಾಜ ಬಾಂಧವರಿಗೆ ಸದಸ್ಯತ್ವ ನೋಂದಣಿಯಿಂದ ಆಗುವ ಲಾಭದ ಬಗ್ಗೆ ಹಾಗೂ ಸ್ಥಳೀಯ ಸಮಿತಿಯಿಂದ ಸದಸ್ಯತ್ವ ಹೆಚ್ಚಿಸುವುದರ ಬಗ್ಗೆ ಮಾಹಿತಿ ನೀಡಿದರು. ಮಾತೃಭೂಮಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಸಮಾಜ ಬಾಂಧವರಿಗೆ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಸೊಸೈಟಿಯ ವಿಶೇಷ ಅಧಿಕಾರಿ ಹರೀಶ್ ಶೆಟ್ಟಿ ಶಿಮುಂಜೆ ಮಾಹಿತಿ ನೀಡಿದರು.
ಬಂಟರ ಸಂಘದ ಜತೆ ಕಾರ್ಯದರ್ಶಿ ಇಂದ್ರಾಳಿ ದಿವಾಕರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಸದಸ್ಯತ್ವ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷ ಎನ್. ಸಿ. ಶೆಟ್ಟಿ, ಸಂಚಾಲಕ ಜಗದೀಶ್ ಶೆಟ್ಟಿ ನಂದಿಕೂರು, ಸ್ಥಳೀಯ ಸಮಿತಿಯ ಕೋಶಾಧಿಕಾರಿ ರವೀಶ್ ಜಿ. ಶೆಟ್ಟಿ, ಜತೆ ಕಾರ್ಯದರ್ಶಿ ನಾಗೇಶ್ ಶೆಟ್ಟಿ ಬೈಕಾಡಿ, ಸದಸ್ಯತ್ವ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷ ಧೀರಜ್ ವಿ. ಶೆಟ್ಟಿ, ಸತೀಶ್ ಶೆಟ್ಟಿ ಮೂಡು ಕೊಟ್ರಪಾಡಿ, ನವಿಮುಂಬಯಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಸಂಜೀವ ಶೆಟ್ಟಿ, ಉದ್ಯಮಿ ತಾಳಿಪಾಡಿಗುತ್ತು ಭಾಸ್ಕರ್ ಶೆಟ್ಟಿ, ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ಸಿ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ನಿಶ್ಮಿತಾ ಎಸ್. ಶೆಟ್ಟಿ. ಮೊದಲಾದವರು ಉಪಸ್ಥಿತರಿದ್ದರು.
ಪ್ರಾದೇಶಿಕ ಸಮಿತಿಯ ಎಲ್ಲ ಪದಾಧಿಕಾರಿಗಳು ಹಾಗೂ ಪರಿಸರದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸನ್ನಿಧಿ ಶೆಟ್ಟಿ ಪ್ರಾರ್ಥನೆ ಹಾಡಿದರು. ಪ್ರಾದೇಶಿಕ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಬಂಟರ ಸಂಘ ನೀಡುತ್ತಿರುವ ಸೌಲಭ್ಯಗಳು ಪ್ರತಿಯೋರ್ವ ಸಾಮಾನ್ಯ ಸಮಾಜ ಬಂಧುಗಳಿಗೂ ತಲುಪಬೇಕು. ಸಂಘವು ಮಾಡುತ್ತಿರುವ ಸಮಾಜಪರ ಕಾರ್ಯಗಳ ಅರಿವು ಎಲ್ಲರಿಗೂ ಇರಬೇಕು. ಇದರ ಸದುಪಯೋಗವನ್ನು ಸಮಾಜ ಬಾಂಧವರು ಪಡೆದುಕೊಳ್ಳಬೇಕು. ಇದಕ್ಕಾಗಿ ಪ್ರತಿ ಮನೆಯಿಂದಲೂ ಸದಸ್ಯತ್ವ ಅಭಿಯಾನ ಮಾಡಬೇಕು ಎಂಬ ಸದುದ್ದೇಶ ಇಟ್ಟುಕೊಂಡು ಬಂಟರ ಸಂಘ ನಮ್ಮ ಮನೆಯಲ್ಲಿ-ನಮ್ಮ ಮನದಲ್ಲಿ ಎಂಬ ವಿನೂತನವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಾತೃಭೂಮಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಸಮಾಜ ಬಾಂಧವರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು.-ಹರೀಶ್ ಶೆಟ್ಟಿ ಪಡುಬಿದ್ರೆ, ಕಾರ್ಯಾಧ್ಯಕ್ಷರು, ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿ
ಸಂಘದ ಒಂಬತ್ತು ಪ್ರಾದೇಶಿಕ ಸಮಿತಿಗಳಲ್ಲಿ ನವಿಮುಂಬಯಿ ಪ್ರಾದೇಶಿಕ ಸಮಿತಿಯು ಮೊದಲ ಸಮಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಂಟರ ಸಂಘದ ಪ್ರಾದೇಶಿಕ ಸಮಿತಿಗಳಲ್ಲಿ ಮೊಟ್ಟಮೊದಲು ಸ್ಥಳೀಯ ಸಮಿತಿಯನ್ನು ಸ್ಥಾಪಿಸಿದ್ದು ನವಿಮುಂಬಯಿಯಲ್ಲಿ ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಇಂದು ವಿನೂತನವಾದ ಬಂಟರ ಸಂಘ ನಮ್ಮ ಮನೆಯಲ್ಲಿ-ನಮ್ಮ ಮನದಲ್ಲಿ ಎಂಬ ಕಾರ್ಯಕ್ರಮವನ್ನು ಆಯೋಜಿಸಿ ಇತರ ಸಮಿತಿಗಳಿಗೆ ನವಿಮುಂಬಯಿ ಪ್ರಾದೇಶಿಕ ಸಮಿತಿ ಮಾದರಿಯಾಗಿದೆ. ಸಂಘದ ಸಮಾಜಪರ ಯೋಜನೆಗಳು ಸಮಾಜ ಬಾಂಧವರ ಮನೆ-ಮನಗಳಿಗೆ ತಲುಪುವಲ್ಲಿ ಪ್ರಾದೇಶಿಕ ಸಮಿತಿಗಳ ಕಾರ್ಯ ಅಭಿನಂದನೀಯ.-ಸುಬ್ಬಯ್ಯ ಶೆಟ್ಟಿ, ಸಮನ್ವಯಕರು, ಬಂಟರ ಸಂಘ ಪೂರ್ವ ವಲಯದ ಪ್ರಾದೇಶಿಕ ಸಮಿತಿಗಳು
-ಚಿತ್ರ-ವರದಿ: ಸುಭಾಷ್ ಶಿರಿಯಾ