Advertisement

ಕಷ್ಟದಲ್ಲಿ ಇದ್ದವರಿಗೆ ನೆರವಾಗಿ, ಇಲ್ಲವಾದರೆ ತೆಪ್ಪಗಿದ್ದು ಬಿಡಿ…

07:50 PM Dec 15, 2020 | Suhan S |

ನನ್ನ ಸ್ನೇಹಿತನೊಬ್ಬನಿದ್ದ. ನಾನೇನು ಮಾಡಲು ಹೊರಟರೂ -“ಅಯ್ಯೋ, ನಿಂಗೇನ್‌ ಹುಚ್ಚು ಮಾರಾಯಾ? ಇಷ್ಟು ಬಂಡವಾಳ ಸುರಿದು ಇದನ್‌ನ್ಯಾಕೆ ಮಾಡೋಕೆ ಹೋದೆ !? ಇದು ನಮ್ಮಪ್ಪನಾಣೆ ಉದ್ದಾರಾಗುವಂತದ್ದಲ್ಲ ಬಿಡು ಬಿಡು… ಎಂದು ಅದೇನೋ ವ್ಯಂಗ್ಯವೋ, ವಿಕಾರವೋ ಆದ ಧಾಟಿಯಲ್ಲಿ ಷರಾ ಬರೆದುಬಿಡುತ್ತಿದ್ದ. ನನ್ನದೋ ಸೋತು ಸುಣ್ಣವಾಗಿ ಏದುಸಿರು ಬಿಡುತ್ತಿದ್ದಕಾಲ. ಇವನ ಮಾತುಕೇಳಿ ಒಳಗೇ ಮತ್ತೂಂದಷ್ಟುಕುಸಿದು ಹೋಗುತ್ತಿದ್ದೆ. ಅಯ್ಯೋ, ನಾನಿದನ್ನ ಮಾಡಬಾರದಿತ್ತಾ…?

Advertisement

ಎಡವಿಬಿಟ್ಟೆನಾ…? ಮತ್ತೆ ನಷ್ಟ ಹೊಂದಿದರೇನು ಗತಿ…!? ಎಂದೆಲ್ಲಾ ಯೋಚನೆಗೆ ಬೀಳುತ್ತಿದ್ದೆ. ನನ್ನಗ್ರಹಚಾರವೋ ಮತ್ತಿನ್ನೇನು ಸುಡುಗಾಡೋ… ಮಾಡುತ್ತಿದ್ದಕೆಲಸಗಳೂ ಕಡೇ ಹಂತದಲ್ಲಿನೆಗೆದುಬೀಳುತ್ತಿದ್ದವು.ಕಡೆಕಡೆಗೆ ನನ್ನ ಪ್ರತಿಯೊಂದು ಕೆಲಸದಲ್ಲಿಯೂ ಅವನು ನೆಗೆಟಿವ್‌ ಒಪೀನಿಯನ್‌’ಗಳನ್ನುಹೇರತೊಡಗಿದಾಗ ನನಗೆ ಉಸಿರುಗಟ್ಟತೊಡಗಿ, ಒಂದು ದಿನ ಇಂಥದ್ದೇ ಯಾವುದೋ ವಿಚಾರಕ್ಕೆ ಕಂಡಾಪಟ್ಟೆ ಜಗಳಾಡಿ ದೂರ ಸರಿಸಿಬಿಟ್ಟೆ.

ಅದೇನೋ ಅವತ್ತಿನಿಂದ ಬೆನ್ನು ಹತ್ತಿದ್ದ ಬೇತಾಳವನ್ನುಕೆಳಗೆ ಜಾಡಿಸಿದಂತಹ ಹಗುರ ಭಾವ! ಇಂತಹ ಹತ್ತಾರು ಜನ ನಮ್ಮಸುತ್ತಲಿರುತ್ತಾರೆ. ಇಂಥವರನ್ನುಸಾಧ್ಯವಾದಷ್ಟುಕೊಡವಿ ದೂರವಿಡುವುದು ನಮ್ಮ ಮನಸ್ಸಿನ ಆರೋಗ್ಯಕ್ಕೆ ತುಂಬಾ ಅಗತ್ಯ. ಮುಖ್ಯವಾದ ಸಂಗತಿಯೆಂದರೆ, ಹಾಗೆ ನಮಗೆ ಅನಗತ್ಯ ಸಲಹೆ ನೀಡುತ್ತಾ, ನಮ್ಮೊಳಗಿನವಿಶ್ವಾಸವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುವ ಮಂದಿ, ತಾವೂ ಕೂಡಾ ಯಾವುದೇ ಕೆಲಸದಲ್ಲೂ ದೊಡ್ಡ ಯಶಸ್ಸುಕಂಡಿರುವುದಿಲ್ಲ. ಯಶಸ್ಸು ಕಂಡವರು ಹಾಗೆ ಒಣ ಸಲಹೆಗಳನ್ನು ನೀಡುವುದಿಲ್ಲ. ಕಾರಣ, ಅವರಿಗೆ ಎತ್ತರದ ಮೆಟ್ಟಿಲುಗಳನ್ನು ಹತ್ತುವವರ ಆಯಾಸದ ಅರಿವಿರುತ್ತದೆ.

“ನಿಂದಕರಿರಬೇಕಯ್ಯಾ…’ ಎಂಬ ಮಾತಿದೆಯಾದರೂ ಗೆಳೆಯರ ಮುಖವಾಡ ತೊಟ್ಟು ಸದಾ ನಮ್ಮಕಾಲೆಳೆಯುವವರನ್ನುಸಾಧ್ಯವಾದಷ್ಟೂದೂರವಿಡುವುದು ಜಾಣತನ. ಹಾಗೆಯೇ ನಾವೂಕೂಡಾಅಷ್ಟೇ. ನಮ್ಮವರಕೆಲಸಗಳಲ್ಲಿ ಸುಖಾಸುಮ್ಮನೆ ತಲೆ ತೂರಿಸದೇ,ಕಾಲೆಳೆಯದೇ, ಅವರ ರೆಟ್ಟೆಯಕಸುವನ್ನು ಕಮ್ಮಿ ಮಾಡದೇ, ನಮ್ಮ ಪಾಡಿಗಿರುವುದು ಸಹಾನಾವವರಿಗೆ ಮಾಡುವ ಸಹಾಯಗಳಲ್ಲೊಂದು. ಸಾಧ್ಯವಾದರೆ ಅವರಕಷ್ಟಗಳಿಗೆ ಹೆಗಲುಕೊಟ್ಟು,ಆಗದಿದ್ದರೆ ತೆಪ್ಪಗಿದ್ದುಬಿಟ್ಟರೆ ನಮ್ಮ ತೂಕವೂಹೆಚ್ಚುತ್ತದೆ. ಸೋಲಿನ ನೋವು ಸೋತವರಿಗಷ್ಟೇ ಗೊತ್ತಿರುತ್ತದೆ

 

Advertisement

ಕಾರ್ತಿಕಾದಿತ್ಯ ಬೆಳಗೋಡು

Advertisement

Udayavani is now on Telegram. Click here to join our channel and stay updated with the latest news.

Next