Advertisement

ಕಾಂಗ್ರೆಸ್ ನಿಂದ ಸಹಾಯವಾಣಿ ಕೇಂದ್ರ, ಆಕ್ಸಿಜನ್ ಚಿಕಿತ್ಸಾ ಕೇಂದ್ರ: ಮೊಯಿದೀನ್ ಬಾವಾ

09:08 PM May 07, 2021 | Team Udayavani |

ಸುರತ್ಕಲ್: ಸುರತ್ಕಲ್. ಕೃಷ್ಣಾಪುರ, ಗ್ರಾಮಾಂತರದ ವಾಮಾಂಜೂರು,ಕೈಕಂಬ, ಗುರುಪುರದಲ್ಲಿ ತಲಾ 10 ಬೆಡ್ ವ್ಯವಸ್ಥೆಯುಳ್ಳ ಆಕ್ಸಿಜನ್ ಸಹಿತ ತುರ್ತು ಕೋವಿಡ್ ಘಟಕವನ್ನು ನನ್ನ ನೇತೃತ್ವದಲ್ಲಿ  ತೆರೆಯಲಾಗುವುದು ಎಂದು ಮಾಜಿ ಶಾಸಕ  ಮೊಯಿದೀನ್ ಬಾವಾ ಹೇಳಿದ್ದಾರೆ.

Advertisement

ಈ ಎಲ್ಲಾ ಘಟಕಗಳಿಗೆ ಶನಿವಾರ ಚಾಲನೆ ಸಿಗಲಿದೆ. ಸುರತ್ಕಲ್ ನಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರಕ್ಕೆ ಸ್ಥಳ ಪರಿಶೀಲನೆ ಸಂದರ್ಭ ಮಾಹಿತಿ ನೀಡಿದ ಅವರು ಚಿಕಿತ್ಸೆಗೆ ವೆನ್ಲಾಕ್ ಅಥವಾ ಇತರ ಕೇಂದ್ರಗಳಿಗೆ ತೆರಳುವಾಗ ವಿಳಂಬವಾದರೆ, ಅಥವಾ ತುತರ್ಾಗಿ ಆಕ್ಸಿಜನ್ ಸಿಗದ ಸಂದರ್ಭ ನಮ್ಮ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸಿದರೆ ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಅಗತ್ಯ ನೆರವು ನೀಡಲಿದ್ದಾರೆ ಎಂದರು.

ಉಚಿತ ಆಂಬುಲೆನ್ಸ್ ಸೇವೆ ನೀಡಲು ತಯಾರಿ ನಡೆಸಲಾಗುತ್ತಿದೆ. ಬೆಳಗ್ಗೆ 6ರಿಂದ 10ರವರೆಗೆ ಲಾಕ್ಡೌನ್ ಸಡಿಲಿಕೆ ಸಂದರ್ಭ ಈ ವ್ಯವಸ್ಥೆಯನ್ನು ಬೆಳಗ್ಗೆ 8ರಿಂದ10ರವರೆಗೆ ಮಾಡಲಾಗುವುದು ಎಂದರು. ಈ ಬಗ್ಗೆ ಸಹಾಯವಾಣ ದೂರವಾಣಿ ಕೇಂದ್ರದ ಸಂಖ್ಯೆಯನ್ನು ಕಾರ್ಯಕರ್ತರ ಬಳಿ ಪಡೆದುಕೊಳ್ಳ ಬಹುದು ಎಂದಿದ್ದಾರೆ.ಜನತೆ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಖರೀದಿ, ಬೇಕಾಬಿಟ್ಟಿ ಓಡಾಟ ನಡೆಸುವ ಬದಲು ಮಾಸ್ಕ್ ಧರಿಸಿ,ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಆರೋಗ್ಯದ ಕಡೆ ಒತ್ತು ನೀಡಬೇಕಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next