ಮಂಡ್ಯ: ಹಣವಂತರು ಹಾಗೂ ಉನ್ನತ ಹುದ್ದೆಯಲ್ಲಿರುವವರು ಸಮಾಜದ ಕೆಳ ವರ್ಗದಲ್ಲಿರುವ ಬಡವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುವುದರಿಂದ ಬಡತವನ್ನು ನೀಗಿಸಬಹುದು. ಅಲ್ಲದೆ, ನೊಂದವರ ಬಾಳಿಗೆ ಬೆಳಕಾದಂತಾಗುತ್ತದೆ ಎಂದು ಉದ್ಯಮಿ, ಜಿಲ್ಲೆಯ ಪ್ರಭಾವಿ ಗುತ್ತಿಗೆದಾರ ರವಿಬೋಜೇಗೌಡ ಹೇಳಿದರು.
ತಮ್ಮ 52ನೇ ವರ್ಷದ ಹುಟ್ಟುಹಬ್ಬದ ಅಂಗ ವಾಗಿ ಅವರ ಹಿತೈಷಿಗಳು ಹಾಗೂ ಅಭಿಮಾನಿ ಬಳಗ ತಾಲೂಕಿನ ಮೇಲುಕೋಟೆ ವಿಧಾನ ಸಭಾ ಕ್ಷೇತ್ರ ದುದ್ದ ಹೋಬಳಿಯ ಮುದಗಂದೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ನನ್ನ ತಂದೆ ಹಾಗೂ ಕುಟುಂಬದ ಹಿರಿಯರು ನೊಂದವರ ಮತ್ತು ಸಮಾಜದ ಒಳಿತಿಗಾಗಿಕೆಲಸ ಮಾಡುತ್ತಿದ್ದರು. ಹಿರಿಯ ಮಾರ್ಗದರ್ಶನದಲ್ಲಿ ನಾನೂ ಮುಂದುವರಿಯುತ್ತಿದ್ದು, ಜನರ ಪ್ರೀತಿ-ವಿಶ್ವಾಸ ಇರಲಿ ಎಂದು ಮನವಿ ಮಾಡಿದರು.
ರಾಜಕಾರಣ ಹೊಸದೇನಲ್ಲ: ಪ್ರಸ್ತುತ ಉದ್ಯಮಿ ಯಾಗಿದ್ದು, ರಾಜಕಾರಣ ನನ್ನ ಮನೆತನಕ್ಕೆ ಹೊಸದೇ ನಲ್ಲ. ಸದ್ಯ ರಾಜಕಾರಣಕ್ಕೆ ಬರುವ ಇಚ್ಛೆ ಇಲ್ಲ. ಮುಂದೆ ನನ್ನ ಗ್ರಾಮಸ್ಥರು ಹಾಗೂ ಅಭಿಮಾನಿಗಳು ಇಚ್ಛಿಸಿದಲ್ಲಿ ರಾಜಕೀಯಕ್ಕೆ ಆಗಮಿಸುವುದಾಗಿ ಹೇಳಿದರು. ಮುದಗಂದೂರು, ಎಂ.ಹೊಸಹಳ್ಳಿ ಗ್ರಾಮಸ್ಥರು ಹಾಗೂ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಂದರ್ಭ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮುತ್ತುಕೃಷ್ಣ, ಡಾ.ಚಂದ್ರಶೇಖರ್, ಮುಖಂಡರಾದ ಶ್ರೀಕಂಠ, ಚನ್ನಪ್ಪ, ಚಂದ್ರು, ವಿಎಸ್‌ಎಸ್‌ಎನ್‌ಬಿ ಮಾಜಿ ಅಧ್ಯಕ್ಷ ಎಚ್.ಎಂ.ಉದಯ ಕುಮಾರ್ ಇತರರಿದ್ದರು.
ಲೇಖನ ಸಾಮಗ್ರಿ, ಪುಸ್ತಕ ವಿತರಣೆ: ಒಟ್ಟು 40 ಮಂದಿ ರಕ್ತದಾನ ಮಾಡಿದ್ದು, ಮಂಡ್ಯ ರಕ್ತನಿಧಿಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ ಆಗಮಿಸಿ ರಕ್ತದ ಚೀಲಗಳನ್ನು ಪಡೆದುಕೊಂಡರು. ಮಧ್ಯಾಹ್ನ 3.30ಕ್ಕೆ ನಗರದ ಎಪಿಎಂಸಿ ಕಚೇರಿ ಸಂಕೀರ್ಣದಿಂದಯುವಕರ ಬೈಕ್ ರ್ಯಾಲಿ ಮೂಲಕ ಹೊಳಲು ಗ್ರಾಮದ ಗಣಪತಿ ದೇವಾಲಯದ ಆವರಣಕ್ಕೆ ತೆರಳಲಾಯಿತು.
ಇದನ್ನೂ ಓದಿ:ವಿಜಯನಗರ ಸಾಮ್ರಾಜ್ಯ ಪತನಕ್ಕೆ ಸಜ್ಜಾದ ಸಿಂಗ್
ಮಂಡ್ಯ ತಾಲೂಕಿನ ಮಲ್ಲನಾಯಕನಕಟ್ಟೆ, ವಿ.ಸಿ.ಫಾರಂ, ಶಿವಳ್ಳಿ, ಹುಳ್ಳೇನಹಳ್ಳಿ ಹಾಗೂ ಹುಲಿಕೆರೆ ಗ್ರಾಮಗಳ ವ್ಯಾಪ್ತಿಯಲ್ಲಿ ಸಂಜೆ 6ಕ್ಕೆ ಪ್ರೌಢಶಾಲಾ ಮಕ್ಕಳಿಗೆ ತಟ್ಟೆ-ಲೋಟ ವಿತರಣೆ, ದುದ್ದ, ಎಂ. ಹೊಸಹಳ್ಳಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಹಾಗೂ ಬನಶಂಕರಿ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ಹಾಗೂ ನೋಟ್‌ಬುಕ್ ವಿತರಿಸಲಾಯಿತು.