ಕೊಪ್ಪಳ: ಕಳೆದ 7 ವರ್ಷದಿಂದ ಎರಡು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಮಗನ ಚಿಕಿತ್ಸೆಗಾಗಿ ನೆರವು ನೀಡಿ, ಸಹಾಯ ಮಾಡಿ ಎಂದು ಹೊಸಳ್ಳಿ ಗ್ರಾಮದ ನೇತ್ರಾವತಿ ಲಕ್ಷ್ಮಣ ಮ್ಯಾಗಳಮನಿ ಮನವಿ ಮಾಡಿದರು. ನಗರದ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜನಿಸಿದಾಗ ಚೆನ್ನಾಗಿಯೇ ಇದ್ದ ಮಗ ಮಹೇಶನಿಗೆ ಮೂರು ವರ್ಷವಯಸ್ಸಿನಲ್ಲಿ ಮುಖ, ಕೈ-ಕಾಲು ಬಾವು ಬರಲಾರಂಭಿಸಿದವು. ಇದರಿಂದ ಕೊಪ್ಪಳ ಮಕ್ಕಳ ವೈದ್ಯರ ಬಳಿ ಚಿಕಿತ್ಸೆಗೆ ಬಂದಾಗ ಕಿಡ್ನಿ ಸಮಸ್ಯೆ ಇರುವುದು ಗೊತ್ತಾಯಿತು. ನಂತರ 2 ವರ್ಷ ಗಂಗಾವತಿ, ಬಳ್ಳಾರಿಯಲ್ಲಿ 2 ವರ್ಷ ಮತ್ತು ಬೆಂಗಳೂರಿನ ಆಸ್ಪತ್ರೆಯಲ್ಲಿ ಒಂದು ವರ್ಷ ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಿದರು. ಆದರೆ 2017ರಿಂದ ನಿರಂತರವಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ವೈದ್ಯರು ಮಾತ್ರ ಮಗನ ಬೆಳವಣಿಗೆ ತಕ್ಕಂತೆ ಕಿಡ್ನಿಗಳು ಬೆಳವಣಿಗೆ ಆಗಿಲ್ಲ. ಹೀಗಾಗಿ ಪ್ರೊಟೀನ್ ಕೊರತೆಯಾಗಿ ಕಿಡ್ನಿ ಸಮಸ್ಯೆಯಾಗಿವೆ. ಮಗು 20 ವರ್ಷ ಆಗುವವರೆಗೂ ನಿರಂತರ ಚಿಕಿತ್ಸೆ ನೀಡಬೇಕು ಎಂದಿದ್ದಾರೆ ಎಂದರು.
ಇದನ್ನೂ ಓದಿ:3 ಕೋಟಿ ರೂ.ನಲ್ಲಿ ಹೆಚ್ಚುವರಿ ವಸತಿ ಗೃಹ
ಹಾಗಾಗಿ ಪ್ರತಿ ತಿಂಗಳುಬೆಂಗಳೂರಿಗೆ ಹೋಗಿ ರಕ್ತಪರೀಕ್ಷೆ ಹಾಗೂ ಔಷಧ ಸೇರಿ ಇತರೆ 10 ಸಾವಿರ ರೂ. ವೆಚ್ಚವಾಗುತ್ತಿದೆ. ಇಷ್ಟೊಂದು ಹಣವು ಭರಿಸಲು ನಮಗೆ ಸಾಧ್ಯವಾಗುತ್ತಿಲ್ಲ. ನಾನು ಕಿರ್ಲೋಸ್ಕರ್ ಕಂಪನಿಯಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದು, ಈಗಾಗಲೇ 7 ಲಕ್ಷಕ್ಕೂ ಅಧಿಕ ಹಣ ಚಿಕಿತ್ಸೆಗಾಗಿ ಖರ್ಚು ಮಾಡಿದ್ದೇನೆ. ಮುಂದಿನ ಚಿಕಿತ್ಸೆಗಾಗಿ ಹಣ ಹೊಂದಿಸುವುದು ಸಾಕಾಗಿ ಹೋಗಿದೆ. ಒಂದು ದಿನದ ಔಷಧ ತಪ್ಪಿಸಿದರೆ ಮಗನ ಮುಖ ಹಾಗೂ ಕೈ-ಕಾಲುಗಳು ಬಾವು ಬಂದು ಮಗ ಗೋಳಾಡುತ್ತಾನೆ ಎಂದು ಅಳಲು ತೋಡಿಕೊಂಡರು.
ಕಿಡ್ನಿ ಸಮಸ್ಯೆಯಿಂದಾಗಿ ಬಿಪಿ ಹಾಗೂ ಶುಗರ್ ಹೆಚ್ಚಳದಿಂದಾಗಿ ಕಣ್ಣಿನಲ್ಲಿ ಪೊರೆ ಬಂದು ಕಣ್ಣುಗಳು ಕೂಡ ಶಸ್ತ್ರ ಚಿಕಿತ್ಸೆ ಮಾಡಿಸಬೇಕು ಎಂದು ವೈದ್ಯರು ಸೂಚಿಸಿದ್ದಾರೆ. ಆದರೆ ಇನ್ನೂ ಪ್ರತಿ ತಿಂಗಳು ಔಷಧಿಗಾಗಿ ಖರ್ಚು ಮಾಡಲು ಆಗುತ್ತಿಲ್ಲವಾಗಿದೆ. ಆದ್ದರಿಂದ ಯಾರಾದರೂ ಮಗನ ಚಿಕಿತ್ಸೆಗಾಗಿ ನೆರವು ನೀಡುವಂತೆ ಮನವಿ ಮಾಡಿದರು.
ಮಹೇಶ್ ತಾಯಿ ನೇತ್ರಾವತಿ ಮ್ಯಾಗಳಮನಿ ಸಿಂಡಿಕೇಟ್ ಬ್ಯಾಂಕ್ ಹೊಸಳ್ಳಿ ಬ್ರಾಂಚ್, ಖಾತೆ ನಂ. 18222410002392, ಐಎಫ್‌ಸಿ ಕೋಡ್ ನಂ ಎಸ್‌ವೈಎನ್‌ಬಿ 0001822, ಹೆಚ್ಚಿನ ಮಾಹಿತಿಗಾಗಿ ಮೊ. 7259328754 ಸಂಪರ್ಕಿಸಿ ಸಹಾಯ ಮಾಡಲು ಕೋರಿದ್ದಾರೆ.