Advertisement

ಜನವರಿಯಿಂದಲೇ ಹೆಲ್ಮೆಟ್‌ ಕಡ್ಡಾಯ

06:03 PM Dec 25, 2021 | Team Udayavani |

ಸಿಂಧನೂರು: ಪ್ರತಿಯೊಬ್ಬರೂ ಕಾನೂನು ಗೌರವಿಸಬೇಕು. ಅಪಘಾತ ತಡೆಗೆ ಮುಂಜಾಗ್ರತೆ ಅಗತ್ಯ. ಜನವರಿಯಿಂದಲೇ ಜಿಲ್ಲೆಯಲ್ಲಿ ಹೆಲ್ಮೆಟ್‌ ಕಡ್ಡಾಯಗೊಳಿಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ. ನಿಖೀಲ್‌ ಹೇಳಿದರು.

Advertisement

ನಗರದ ಸುಕಾಲಪೇಟೆ ರಸ್ತೆಯಲ್ಲಿರುವ ಡಿವೈಎಸ್ಪಿ ಕಚೇರಿಯಲ್ಲಿ ಪೊಲೀಸ್‌ ಸಿಬ್ಬಂದಿ ಹಾಗೂ ಮಕ್ಕಳ ಓದಿಗಾಗಿ ಹೊಸ ಗ್ರಂಥಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ಸಿಂಧನೂರಿನಲ್ಲಿ ಹೆಲ್ಮೆಟ್‌ ಜಾಗೃತಿ ಅಭಿಯಾನ ಆರಂಭಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ತಾಲೂಕಿನಲ್ಲಿ ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು, ಜನರಲ್ಲಿ ಜಾಗೃತಿ ಅಗತ್ಯವಿದೆ ಎಂದರು.

ಮರಳು ಅಕ್ರಮಕ್ಕೆ ತಡೆ

ಅಕ್ರಮ ಮರಳು ಸಾಗಾಣಿಕೆ ಕಡಿವಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ದೇವದುರ್ಗದಲ್ಲಿ ಸಭೆ ನಡೆದಿದೆ. ಇನ್ನು ಮುಂದೆ ಅಕ್ರಮ ಮರಳು ಸಾಗಾಣಿಕೆಗೆ ಕಡಿವಾಣ ಬೀಳಲಿದೆ. ಗಣಿ ಮತ್ತು ಭೂ ವಿಧಿ ವಿಜ್ಞಾನ ಇಲಾಖೆಗೆ 25 ಹೋಂ ಗಾರ್ಡ್‌ ಒದಗಿಸಲಾಗಿದೆ. ಮರಳು ತಡೆ ಸಮಿತಿಯಲ್ಲಿ ಇರುವ ಇತರೆ ಇಲಾಖೆಗಳು ಸಹ ಸಹಕರಿಸಬೇಕು ಎಂದರು.

Advertisement

ಡಿವೈಎಸ್ಪಿ ವೆಂಕಟಪ್ಪ ನಾಯಕ್‌ ಮಾತನಾಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಸಹಕಾರದೊಂದಿಗೆ ನಮ್ಮ ಪೊಲೀಸ್‌ ಸಿಬ್ಬಂದಿಗಾಗಿ ಗ್ರಂಥಾಲಯ ಆರಂಭಿಸಿದ್ದೇವೆ. ನಾನು ಸೇರಿದಂತೆ ನಮ್ಮ ಅಧಿಕಾರಿಗಳೂ ಕೈಜೋಡಿಸಿದ್ದಾರೆ. 100ಕ್ಕೂ ಅಧಿಕ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳು ಇಲ್ಲಿವೆ ಎಂದರು.

ಈ ವೇಳೆ ಪ್ರೊಬೆಷನರಿ ಡಿವೈಎಸ್ಪಿ ಲಕ್ಷ್ಮೀಕಾಂತ, ಸಿಪಿಐಗಳಾದ ಉಮೇಶ ಕಾಂಬಳೆ, ಗುರುರಾಜ, ಪಿಎಸ್‌ಐಗಳಾದ ಎರಿಯಪ್ಪ, ಸೌಮ್ಯ ಹಿರೇಮಠ, ಚಂದ್ರಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next