Advertisement

ಸುರಕ್ಷತೆಗಾಗಿ ಹೆಲ್ಮೆಟ್‌ಕಡ್ಡಾಯ: ಶಿವಮೂರ್ತಿ

05:32 PM Jan 31, 2021 | Team Udayavani |

ಮಂಡ್ಯ: ಪೊಲೀಸರಿಗೆ ಹೆದರಿ ಹೆಲ್ಮೆಟ್‌ ಧರಿಸಬೇಡಿ. ನಿಮ್ಮ ಹಾಗೂ ನಿಮ್ಮ ಕುಟುಂಬದ ಸುರಕ್ಷತೆಗಾಗಿ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ ಎಂದು ತಹಶೀಲ್ದಾರ್‌ ಎಂ. ಶಿವಮೂರ್ತಿ ಹೇಳಿದರು. ಕೆ.ಆರ್‌.ಪೇಟೆ ಪಟ್ಟಣದ ಪೊಲೀಸ್‌ ಠಾಣೆಯ ಆವರಣದಲ್ಲಿ ಸಾರ್ವಜನಿಕರಿಗೆ ಹೆಲ್ಮೆಟ್‌ ಜಾಗೃತಿ ಮೂಡಿಸುವ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ತಾಲೂ ಕಿನಲ್ಲಿ 1 ವರ್ಷದ ಹಿಂದೆ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸು ವುದನ್ನು ಜಾರಿಗೆ ತರಲಾ ಗಿತ್ತು.

Advertisement

ಆದರೆ, ಕೋವಿಡ್ ಆಗಮನದಿಂದಾಗಿ ಒಂದು ವರ್ಷ ಹೆಲ್ಮೆಟ್‌ನಿಂದ ವಿನಾಯಿತಿ ನೀಡಲಾ ಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಕೋರ್ಟ್‌ ನಿರ್ದೇಶನದಂತೆ ಎಲ್ಲ ವಾಹನ ಸವಾರರು ಹೆಲ್ಮೆಟ್‌ ಧರಿಸುವುದನ್ನು ಕಡ್ಡಾ ಯಗೊಳಿಸಿದ್ದು, ಸಾರ್ವಜನಿಕರು ಪೊಲೀಸ ರೊಂದಿಗೆ ಸಹಕರಿಸಬೇಕು ಎಂದರು.
ಹಲವು ವಾಹನಗಳಿಗೆ ದಾಖಲೆಗಳೇ ಇಲ್ಲ: ಪ್ರಸ್ತುತ ಹಲವು ವಾಹನಗಳಿಗೆ ದಾಖಲೆಗಳೇ ಇಲ್ಲ. ಇನ್ನು ಕೆಲವು ವಾಹನಗಳಿಗೆ ವಿಮೆ ಅವಧಿ ಮುಗಿದಿರುವುದು ಕಂಡು ಬರುತ್ತಿದೆ. ಅಲ್ಲದೆ, ಕಳವು ಮಾಡಿರುವ ವಾಹನಗಳನ್ನು ಖರೀದಿಸಿ, ಚಲಾವಣೆ ಮಾಡುತ್ತಿರುವ ಪ್ರಕರಣಗಳು ಗಮನಕ್ಕೆ ಬಂದಿವೆ. ವಾಹನ ಏರುವ ಸಮಯದಲ್ಲಿ ಹೆಲ್ಮೆಟ್‌ ಧರಿಸಿ, ಇನ್ಸೂರೆನ್ಸ್‌ ಚಾಲನೆ ಯಲ್ಲಿ ಇದೆಯೇ ಎಂಬುದನ್ನು ಪರೀಕ್ಷಿಸಿ ಕೊಂಡು, ನಿಮ್ಮ ವಾಹನಗಳ ದಾಖಲಾತಿಗಳ ಜೆರಾಕ್ಸ್‌ ಪ್ರತಿಯನ್ನು ವಾಹನದಲ್ಲಿ ಇಟ್ಟುಕೊಂಡು ಸಂಚಾರ ನಿಯಮಗಳನ್ನು ಪಾಲಿಸಿ ಎಂದು ತಿಳಿಸಿದರು.

ಇದನ್ನೂ ಓದಿ:ಜಿಲ್ಲಾಡಳಿತದಿಂದ ಹುತಾತ್ಮರ ಸ್ಮರಣೆ

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ತಹಶೀಲ್ದಾರ್‌ ಶಿವಮೂರ್ತಿ ಪೊಲೀಸ್‌ ಸಿಬ್ಬಂದಿಗಳೊಡನೆ ಹೆಲ್ಮೆಟ್‌ ಧರಿಸಿ, ದ್ವಿಚಕ್ರ ವಾಹನ ಚಲಾಯಿಸುವ ಮೂಲಕ ಸಂಚಾರ ಕೈಗೊಂಡು ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಪಿಎಸ್‌ಐ ಬ್ಯಾಟರಾಯ ಗೌಡ, ಗ್ರಾಮಾಂತರ ಠಾಣೆಯ ಪಿಎಸ್‌ಐ ಸುರೇಶ್‌, ವಕೀಲ ಪ್ರವೀಣ್‌ ಸೇರಿದಂತೆ ಪೊಲೀಸ್‌ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next