Advertisement

ಡಿ.1ರಿಂದ ಸವಾರರಿಗೆ ಹೆಲ್ಮೆಟ್‌ ಕಡ್ಡಾಯ

05:32 PM Nov 11, 2020 | Suhan S |

ಕೋಲಾರ: ಡಿಸೆಂಬರ್‌ 1 ರಿಂದ ಬೆ„ಕ್‌ ಸವಾರರು ಮತ್ತು ಹಿಂಬದಿ ಸವಾರರುಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು ಹಾಗೂ ಆಟೋಗಳಿಗೆ ಕಡ್ಡಾಯವಾಗಿ ಮೀಟರ್‌ಅಳವಡಿಸಬೇಕು.ಈ ಕಾನೂನು ಪಾಲಿಸದವರವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆಸಾರಿಗೆ ಮತ್ತು ಪೊಲೀಸ್‌ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಸೂಚಿಸಿದರು.

Advertisement

ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಸಾರಿಗೆ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಗತ್ಯವಿರುವ ಸೌಲಭ್ಯಗಳನ್ನುಕಲ್ಪಿಸಬೇಕು. ಹೆದ್ದಾರಿಗಳಲ್ಲಿ ವಿದ್ಯುತ್‌ ದೀಪಗಳನ್ನುಸಮರ್ಪಕವಾಗಿಅಳವಡಿಸಬೇಕು ಎಂದು ಲ್ಯಾಂಕೋ ಅಧಿಕಾರಿಗೆ ಸೂಚಿಸಿದರು.

ಅಸಮಾಧಾನ: ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಸರ್ವಿಸ್‌ ರಸ್ತೆ ನಿರ್ಮಿಸಿದ್ದು, ಇಲ್ಲಿ ಡ್ರೈನೇಜ್‌ ನಿರ್ಮಿಸಬೇಕು. ಎ.ಪಿ.ಎಂ.ಸಿ., ಮೆಡಿಕಲ್‌ ಕಾಲೇಜು ಇಲ್ಲಿ ಹೆಚ್ಚಿನ ವಿದ್ಯುತ್‌ ದೀಪಗಳನ್ನು ಅಳವಡಿಸಬೇಕು. ಹೆದ್ದಾರಿಯಲ್ಲಿ ಸ್ವಚ್ಛತೆ ಕಾಪಾಡಬೇಕು. ಬೇರೆ ಬೇರೆ ಜಿಲ್ಲೆಗಳ ಹೆದ್ದಾರಿಗಳಲ್ಲಿ ಸ್ವತ್ಛತೆ ಉತ್ತಮವಾಗಿ ಕಾಪಾಡಿದ್ದಾರೆ. ನಮ್ಮ ಜಿಲ್ಲೆಯ ಹೆದ್ದಾರಿಗಳಲ್ಲಿ ಸ್ವಚ್ಛತೆ ಯಾಕೆ ಕಾಪಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುರಕ್ಷತಾ ಕ್ರಮ ಕೈಗೊಂಡಿಲ್ಲ: ವರ್ಷದ ಹಿಂದೆ ನಡೆದ ಸಭೆಯಲ್ಲಿ 14 ಬ್ಲಾಕ್‌ ಸ್ಪಾಟ್‌ ಗಳನ್ನು ಗುರುತಿಸಿ ಸುರಕ್ಷತೆ ಕೈಗೊಳ್ಳವಂತೆ ಲ್ಯಾಂಕೋ ಸಂಸ್ಥೆಗೆ ಸೂಚಿಸಲಾಗಿತ್ತು. ಆದರೆ ಸಂಪೂರ್ಣವಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ಜೀವ ಅತ್ಯಮೂಲ್ಯವಾದದ್ದು ಹೊದ ಜೀವವನ್ನು ತರಲು ಸಾಧ್ಯವಿಲ್ಲ. ಜೀವ ಉಳಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಅಂಕಿ ಅಂಶಮಾಹಿತಿ ಜೊತೆ ಬನ್ನಿ: ನಗರದಲ್ಲಿ 3 ರಿಂದ4ರಸ್ತೆಗಳನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗುತ್ತಿದೆ. ನಗರ ಸಾರಿಗೆ ವ್ಯವಸ್ಥೆ ಪ್ರಾರಂಭಿಸಿ. ಜಿಲ್ಲಾಧಿಕಾರಿಗಳಕಚೇರಿಗೆಪ್ರತ್ಯೇಕ ಬಸ್‌ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಕೆ.ಎಸ್‌.ಆರ್‌.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಿ, ಮುಂದಿನ ಸಭೆಗೆ ಅಂಕಿ ಅಂಶಗಳ ಸೂಕ್ತ ಮಾಹಿತಿಯೊಂದಿಗೆ ಬರುವಂತೆ ಸಾರಿಗೆ ಇಲಾಖೆ ಮತ್ತು ಪೊಲೀಸ್‌ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಸಭೆಯಲ್ಲಿ ಕೆ.ಜಿ.ಎಫ್‌ ಪೊಲೀಸ್‌ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಕರನ್‌, ಜಿಲ್ಲಾ ಹೆಚ್ಚುವರಿ ಪೊಲೀಸ್‌ಅಧೀಕ್ಷಕಿಹೆಚ್‌.ಜಾಹ್ನವಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ಪ್ರಶಾಂತ್‌ ಸೇರಿದಂತೆ ಸಾರಿಗೆ ಇಲಾಖೆ, ಕಾರ್ಮಿಕ ಇಲಾಖೆ, ಕೆ.ಎಸ್‌.ಆರ್‌.ಟಿ.ಸಿ. ಇಲಾಖೆಗಳ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಸರ್ವಿಸ್ರಸ್ತೆ ತಾತ್ಕಾಲಿಕ ಒತ್ತುವರಿ:ತೆರವಿಗೆ ಜಿಪಂ ಸಿಇಒ ಸೂಚನೆಜಿಲ್ಲಾ ಪಂಚಾಯತ್‌ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಆರ್‌.ರವಿಕುಮಾರ್‌ಮಾತನಾಡಿ, ಕೊಂಡರಾಜನಹಳ್ಳಿ ಬೈಪಾಸ್‌ ಬಳಿ ಸರ್ವಿಸ್‌ ರಸ್ತೆಯನ್ನು ವ್ಯಾಪಾರಿಗಳು ಹಾಗೂ ವರ್ತಕರು ತಾತ್ಕಾಲಿಕವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಇದನ್ನು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತೆರೆವುಗೊಳಿಸಬೇಕು. ಹೆದ್ದಾರಿಯಲ್ಲಿ ಬರುವ ಸಂಪೂರ್ಣ ಜಾಗವನ್ನು ಸುಗಮ ಸಾರಿಗೆಗೆ ಬಳಸಬೇಕು ಎಂದರು. ಜಿಲ್ಲೆಯಲ್ಲಿ ಕಳೆದ 6 ತಿಂಗಳಿಂದ ಮಡೇರಹಳ್ಳಿಯ ಬೈಪಾಸ್‌ ಬಳಿ ವಿವಿಧ ಅಪಘಾತಗಳು ಉಂಟಾಗಿ 7 ಜನರು ಮರಣ ಹೊಂದಿದ್ದಾರೆ. ಅವೈಜ್ಞಾನಿಕ ಸ್ಪೀಡ್‌ ಬ್ರೇಕರ್‌ಗಳನ್ನು ತೆಗೆದು ವೈಜ್ಞಾನಿಕವಾಗಿ ಸ್ಪೀಡ್‌ ಬ್ರೇಕ್‌ ಅಳವಡಿಸಬೇಕು ಎಂದರು.

ಮುಂದಿನ ತಿಂಗಳು ರಸ್ತೆ ಸುರಕ್ಷತಾ ಸಭೆಕರೆಯಲಾಗುವುದು. 15 ದಿನದೊಳಗೆ 20 ಬ್ಲಾಕ್‌ ಸ್ಟಾಟ್‌ಗಳಲ್ಲಿ ತಾತ್ಕಾಲಿಕ ಸುರಕ್ಷತಾ ಕ್ರಮಗಳನ್ನುಕೈಗೊಳ್ಳಬೇಕು. 3 ತಿಂಗಳೊಳಗೆ ಶಾಶ್ವತಕ್ರಮಗಳನ್ನು ಪ್ರಾರಂಭಿಸಬೇಕು. ಸಿ.ಸತ್ಯಭಾಮ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next