Advertisement

ಅರುಣಾಚಲದಲ್ಲಿ ಸೇನಾ ಹೆಲಿಕಾಪ್ಟರ್ ದುರಂತ : ಐವರ ಪೈಕಿ ನಾಲ್ವರ ಮೃತದೇಹ ಪತ್ತೆ

07:59 PM Oct 21, 2022 | Team Udayavani |

ಸಿಯಾಂಗ್ : ಭಾರತೀಯ ಸೇನೆಯ ಎಎಲ್ ಹೆಚ್ ಹೆಲಿಕಾಪ್ಟರ್ ಅರುಣಾಚಲ ಪ್ರದೇಶದ ಮೇಲಿನ ಸಿಯಾಂಗ್ ಜಿಲ್ಲೆಯಲ್ಲಿ ಪತನಗೊಂಡಿರುವ ಅವಘಡದಲ್ಲಿ ಐದು ಮಂದಿ ಸೇನಾ ಸಿಬಂದಿ ಅಸುನೀಗಿದ್ದಾರೆ.

Advertisement

ಟ್ಯೂಟಿಂಗ್ ಪ್ರಧಾನ ಕಚೇರಿಯಿಂದ 25 ಕಿಲೋಮೀಟರ್ ದೂರದಲ್ಲಿ ಪತನಗೊಂಡಿದ್ದು, ಗುವಾಹಟಿಯ ರಕ್ಷಣಾ PRO ಪ್ರಕಾರ, ಅಪ್ಪರ್ ಸಿಯಾಂಗ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ 10:40 ಕ್ಕೆ ಸುಧಾರಿತ ಲಘು ಹೆಲಿಕಾಪ್ಟರ್ (ALH) ಪತನಗೊಂಡಿದ್ದು, ಗಂಟೆಗಳ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯ ನಂತರ, ತಂಡವು ಇಲ್ಲಿಯವರೆಗೆ ಐವರಲ್ಲಿ ನಾಲ್ವರ ಮೃತದೇಹಗಳನ್ನು ಹೊರತೆಗೆದಿದೆ. ರಸ್ತೆ ಸಂಪರ್ಕವಿಲ್ಲದ ದುರ್ಗಮ ಪ್ರದೇಶದಲ್ಲಿ ಹುಡುಕಾಟ ಮುಂದುವರಿದಿದೆ.

ದುರಂತಕ್ಕೆ ಗುರಿಯಾದ ಹೆಲಿಕಾಪ್ಟರ್‌ನಲ್ಲಿ ಒಟ್ಟು 5 ಸಿಬಂದಿ ಇದ್ದರು ಎಂದು ಪಿಆರ್ಒ (ರಕ್ಷಣಾ) ತೇಜ್‌ಪುರ ತಿಳಿಸಿದ್ದಾರೆ. ಸೈನ್ಯದ 1 MI17, 2 ALH  ಒಳಗೊಂಡಿರುವ IAF ನ ಜಂಟಿ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆ ತಕ್ಷಣವೇ ಪ್ರಾರಂಭಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next