Advertisement

Hejjaru Movie Review; ಹೆಜ್ಜಾರು ಎಂಬ ಹೊಸ ಕೌತುಕ

11:37 AM Jul 20, 2024 | Team Udayavani |

ಒಂದೇ ಊರು, ಒಂದೇ ಘಟನೆ, ಒಂದೇ ರೀತಿಯ ಸನ್ನಿವೇಶಗಳು ಆದರೆ, ಕಾಲಘಟ್ಟ ಮಾತ್ರ ಬದಲು… ಹೀಗೆ ಸಾಗುವ ಕಥೆ “ಹೆಜ್ಜಾರು’. 1965ರ ಕಾಲಮಾನದಿಂದ ಆರಂಭವಾಗುವ ಕಥೆ, ಅಲ್ಲಿ ನಡೆಯುವ ಅಪಘಾತ ಮತ್ತೆ 1995ರಲ್ಲಿ ಮರಕಳಿಸುತ್ತದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ನಡೆದ ಘಟನೆಗಳು ಯಥಾವತ್ತಾಗಿ ಇನ್ನೊಬ್ಬನ ಜೀವನದಲ್ಲೂ ನಡೆಯುವುದು. ಇದರ ಜಾಡು ಹಿಡಿದು ಸಾಗುವ ಕಥೆ, 25 ವರ್ಷಗಳ ಹಿಂದೆ ಏನೆಲ್ಲ ನಡೆದಿದೆ ಎಂಬುದನ್ನು ವರ್ತಮಾನದಲ್ಲಿ ಒಂದೊಂದಾಗಿ ಹೇಳುತ್ತಾ “ಹೆಜ್ಜಾರು’ ಕಥೆ ಸಾಗುತ್ತದೆ. ಕಥೆಯ ವಿಚಾರದಲ್ಲಿ ಒಂದಷ್ಟು ಹೊಸತನವಿರುವ ಸಿನಿಮಾವಿದು.

Advertisement

ಒಂದು ಕಡೆ ಪ್ರೇಮಕಥೆ ಮತ್ತೂಂದು ಕಡೆ ನಡೆಯುವ ಭೀಕರ ಘಟನೆ… ಹೀಗೆ ಸಾಗುವ ಕಥೆಯಲ್ಲಿ ಒಂದಷ್ಟು ತಿರುವುಗಳಿವೆ. ಎರಡು ಕಾಲಘಟ್ಟದ ಎರಡು ಪಾತ್ರಗಳು ಮುಖಾಮುಖೀಯಾಗುವ ಸನ್ನಿವೇಶಗಳು ಕುತೂಹಲಭರಿತವಾಗಿವೆ. ಅದು ಈ ಸಿನಿಮಾದ ಪ್ಲಸ್‌ ಕೂಡಾ. ಇಲ್ಲಿ ಸಸ್ಪೆನ್ಸ್‌, ಥ್ರಿಲ್ಲರ್‌ ಅಂಶಗಳು ಕಥೆಯ ಓಘ ಹೆಚ್ಚಿಸಿವೆ. ಸಿನಿಮಾದ ಹೈಲೈಟ್‌ ಗಳಲ್ಲಿ ಚಿತ್ರದ ಕ್ಲೈಮ್ಯಾಕ್ಸ್‌ ಕೂಡಾ ಒಂದು. ಅದೇನೆಂಬುದನ್ನು ತೆರೆಮೇಲೆಯೇ ನೋಡಬೇಕು.

“ಹೆಜ್ಜಾರು’ ಚಿತ್ರದಲ್ಲಿ ಚಿತ್ರಕಥೆ ಹೆಚ್ಚಿನ ಪ್ರಾಧಾನ್ಯತೆ ಪಡೆದಿದೆ. ನಿರ್ದೇಶಕ ಹರ್ಷಪ್ರಿಯ ತಮ್ಮ ಚೊಚ್ಚಲ ನಿರ್ದೇಶನದಲ್ಲಿ ಒಂದು ಹೊಸ ಬಗೆಯ ಕಥೆಯನ್ನು ನಿರ್ದೇಶಿಸಿದ್ದಾರೆ. ಈ ಮೂಲಕ ಕಂಟೆಂಟ್‌ ಸಿನಿಮಾವೊಂದನ್ನು ನೀಡಿದ್ದಾರೆ. ನಾಯಕ ಭಗತ್‌ ಆಳ್ವ ಕೂಡ ಮೊದಲ ಬಾರಿ ಕಥಾನಾಯಕನ ಹೊಣೆ ಹೊತ್ತಿದ್ದು, ನಟನೆಯಲ್ಲಿ ತಮ್ಮ ಕೌಶಲ್ಯ ತೋರಿಸಿದ್ದಾರೆ. ನಾಯಕಿ ಶ್ವೇತಾ ಪಾತ್ರಕ್ಕೆ ಎರಡನೇ ಭಾಗದಲ್ಲಿ ಮಹತ್ವ ಸಿಕ್ಕಿದೆ. ಗೋಪಾಲ್‌ ದೇಶಪಾಂಡೆ, ನವೀನ್‌ ಕೃಷ್ಣ, ಅರುಣಾ ಬಾಲರಾಜ್‌ ಅವರ ಪೋಷಕ ಪಾತ್ರಗಳು ಕಥೆಗೆ ಹೊಸ ತಿರುವು ನೀಡಿವೆ. ಚಿತ್ರದ ಸಂಭಾಷಣೆಗಳು ತೂಕಭರಿತವಾಗಿವೆ.

 ನಿತೀಶ ಡಂಬಳ

Advertisement

Udayavani is now on Telegram. Click here to join our channel and stay updated with the latest news.

Next