Advertisement

My Hero: ಜಾತಿ ಪದ್ಧತಿ ಸುತ್ತ ಚಿತ್ರದ ಕಥೆ ʼಮೈ ಹೀರೋʼ ತೆರೆಗೆ ಬರಲು ಸಿದ್ದ

04:24 PM Aug 26, 2024 | Team Udayavani |

“ಮೈ ಹೀರೋ’ ಎಂಬ ಚಿತ್ರ ಆ.30ರಂದು ತೆರೆಕಾಣುತ್ತಿದೆ. ಅವಿನಾಶ್‌ ವಿಜಯಕುಮಾರ್‌ ನಿರ್ಮಿಸಿ, ನಿರ್ದೇಶಿಸಿರುವ ಚಿತ್ರವಿದು.

Advertisement

ಹಾಲಿವುಡ್‌ ಕಲಾವಿದರಾದ ಜಿಲಾಲಿ ರಜ್‌ ಕಲ್ಲಹ್‌, ಎರಿಕ್‌ ರಾಬರ್ಟ್‌ ಹಾಗೂ ಬಾಲನಟ ವೇದಿಕ್‌ ಕೌಶಿಕ್‌ ಮೈ ಹೀರೋ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಕಾಶ್‌ ಬೆಳವಾಡಿ ಅವರು ಜಿಲ್ಲಾಧಿಕಾರಿಯಾಗಿ, ಹಿರಿಯ ನಟ ದತ್ತಣ್ಣ ಅವರು ಪುರೋಹಿತರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಟಿ ಅಂಕಿತಾ ಅಮರ್‌ ಮಧ್ಯಪ್ರದೇಶದ ಯುವತಿಯಾಗಿ ನಟಿಸಿದ್ದಾರೆ.

ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಅವಿನಾಶ್‌ ವಿಜಯಕುಮಾರ್‌, ನಾನು ಮೂಲತಃ ರಂಗಭೂಮಿ ಕಲಾವಿದ. ನನ್ನ ನಿರ್ದೇಶನದ ಮೊದಲ ಚಿತ್ರವಿದು. ಎ.ವಿ. ಸ್ಟುಡಿಯೋಸ್‌ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದೇವೆ. ನಮ್ಮ ತಾಯಿ 2009ರಲ್ಲಿ ಚಿಲಿಪಿಲಿ ಹಕ್ಕಿಗಳು ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಹಿಂದುಳಿದವರ ಮೇಲೆ ನಡೆಯುವ ಶೋಷಣೆ ಕುರಿತಂತೆ ಮಾಡಿರುವ ಕಾನ್ಸೆಪ್ಟ್ ಇದು. ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ಒಂದು ಘಟನೆ ನಡೆದಿತ್ತು.

ಅದನ್ನು ಇಟ್ಟುಕೊಂಡು ಈ ಚಿತ್ರಕಥೆ ರಚಿಸಿದ್ದೇನೆ. ಕನ್ನಡ, ಇಂಗ್ಲೀಷ್‌ ಹಾಗೂ ಹಿಂದಿ ಭಾಷೆಗಳಲ್ಲಿ ಸಂಭಾಷಣೆ ಇರುತ್ತದೆ. ಹಳ್ಳಿಗಳಲ್ಲಿ ಈಗಲೂ ಜಾತಿ ಪದ್ಧತಿ ಇದೆ. ಬೇರೆ ಬೇರೆ ದೇಶಗಳಲ್ಲೂ ಸಹ ಇದೆ. ಇದನ್ನೇ ಪ್ರಮುಖವಾಗಿಟ್ಟಿಕೊಂಡು ಸಿನಿಮಾ ಮಾಡಿದ್ದೇನೆ. ಪಿವಿಆರ್‌, ಐನಾಕ್ಸ್‌ ಅವರು ವಿತರಣೆ ಮಾಡುತ್ತಿದ್ದಾರೆ’ ಎಂದರು.

“ನಾನು ಈ ಚಿತ್ರದಲ್ಲಿ ಮಧ್ಯಪ್ರದೇಶದ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಮೈ ಹೀರೋ ಚಿತ್ರದಲ್ಲಿ ಎನ್‌ಜಿಓ ಪಾತ್ರ ನನ್ನದು. ಮಧ್ಯಪ್ರದೇಶದ ಮಹೇಶ್ವರ ಎಂಬ ಸ್ಥಳದಲ್ಲಿ ವಾರಣಾಸಿಯಲ್ಲಿರುವಂತೆ ಅನೇಕ ಘಾಟ್‌ಗಳಿವೆ. ಅಹಲ್ಯಬಾಯಿ ಎಂಬ ಮಹಾರಾಣಿ ಈ ಘಾಟ್‌ ಗಳನ್ನು ನಿರ್ಮಿಸಿದ್ದರು. ಅಲ್ಲಿ ಅವರ ಪ್ರತಿಮೆ ಕೂಡ ಇದೆ. ಈ ಚಿತ್ರದಲ್ಲಿ ನಟಿಸುವುದಕ್ಕೆ ಮುಂಚೆ ನಾನು ಅಲ್ಲಿನ ವಿಷಯಗಳನ್ನು ತಿಳಿದುಕೊಂಡು ನಟಿಸಿದ್ದೇನೆ’ ಎಂದರು ನಟಿ ಅಂಕಿತಾ ಅಮರ್‌.

Advertisement
Advertisement

Udayavani is now on Telegram. Click here to join our channel and stay updated with the latest news.