Advertisement

ಟೋಲ್‌ ವಿರುದ್ಧ ಬಸ್‌ ಮಾಲಕರ ಪ್ರತಿಭಟನೆ, ಬಸ್‌ ಸಂಚಾರ ರದ್ದು: ಪ್ರಯಾಣಿಕರು ಅತಂತ್ರ

10:02 PM Feb 18, 2021 | Team Udayavani |

ಪಡುಬಿದ್ರಿ: ಹೆಜಮಾಡಿ ಒಳ ರಸ್ತೆಗಳಲ್ಲಿ ಸಂಚರಿಸುವ ಖಾಸಗಿ ಸರ್ವಿಸ್‌ ಬಸ್‌ಗಳಿಂದ ಟೋಲ್‌ ಸಂಗ್ರಹಕ್ಕೆ ಮುಂದಾಗಿರುವ ಕ್ರಮವನ್ನು ಖಂಡಿಸಿ ಟೋಲ್‌ ಬಳಿ ಹಠಾತ್ತಾಗಿ ಬಸ್‌ ಸಂಚಾರ ರದ್ದುಗೊಳಿಸಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ಇದರಿಂದ ಪ್ರಯಾಣಿಕರು ಅತಂತ್ರರಾದರು.

Advertisement

ಫೆ. 15ರಿಂದ ಫಾಸ್ಟಾಗ್‌ ಕಡ್ಡಾಯ ಗೊಳಿಸಿ ಎಲ್ಲ ವಾಹನಗಳಿಗೆ ವಿನಾಯಿತಿ ಯನ್ನು ರದ್ದುಗೊಳಿಸಿದ ಪರಿಣಾಮ ಹೆಜಮಾಡಿ ಹಳೆ ಎಂಬಸಿ ರಸ್ತೆಯಲ್ಲಿ ಸಂಚರಿಸುವ ಸರ್ವಿಸ್‌ ಬಸ್‌ಗಳಿಂದಲೂ ನವಯುಗ ಟೋಲ್‌ ಕಂಪೆನಿ ಗುರುವಾರ ಟೋಲ್‌ ಸಂಗ್ರಹ ಆರಂಭಿಸಿತು.

ಬುಧವಾರವೂ ಟೋಲ್‌ ಸಂಗ್ರಹ ವಿರೋಧಿಸಿ ಸರ್ವಿಸ್‌ ಬಸ್‌ಗಳು ಹಠಾತ್ತಾಗಿ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿ ಟೋಲ್‌ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿತ್ತು. ಗುರುವಾರ ಬೆಳಗ್ಗೆ ಟೋಲ್‌ ವಿನಾಯಿತಿ ನೀಡಿ ಮತ್ತೆ ಏಕಾಏಕಿ ಟೋಲ್‌ ಸಂಗ್ರಹಕ್ಕೆ ಮುಂದಾದ ನವಯುಗ ಕಂಪೆನಿ ಕ್ರಮವನ್ನು ವಿರೋಧಿಸಿದ ಕೆಲ ಖಾಸಗಿ ಸರ್ವಿಸ್‌ ಬಸ್‌ ಮಾಲಕರು ಟೋಲ್‌ ನೀಡದೆ ಬಸ್‌ಗಳನ್ನು ಹಳೆ ಎಂಬಿಸಿ ರಸ್ತೆ ಟೋಲ್‌ ಕೇಂದ್ರ ಆಸುಪಾಸಿನಲ್ಲಿಯೇ ಪ್ರಯಾಣಿಕರನ್ನಿಳಿಸಿ ಪ್ರತಿಭಟನೆ ನಡೆಸಿದರು.

ಇದರೊಂದಿಗೆ ಹಿಂದುಗಡೆಯಿಂದ ಅಗಮಿಸಿದ ಹಲವಾರು ಬಸ್‌ಗಳನ್ನು ತಡೆದು ಜನರನ್ನಿಳಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಪ್ರಯಾಣಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಅತಂತ್ರರಾದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಸ್‌ಗಳನ್ನು ರಸ್ತೆಯಿಂದ ತೆರವು ಗೊಳಿಸಿದರು. ಈ ಮಧ್ಯೆ ಬಸ್‌ ಮಾಲಕರು ಜಿಲ್ಲಾಧಿಕಾರಿ ಹಾಗೂ ಸಂಸದರಿಗೆ ಮನವಿ ಸಲ್ಲಿಸಲು ತೆರಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next