Advertisement

ದಕ್ಷಿಣ ಕನ್ನಡ ಲಾಕ್ ಡೌನ್ ಆದೇಶದಲ್ಲೂ ವಾಹನಗಳ ಸುಗಮ ಸಂಚಾರ; ಆರೋಗ್ಯ ಅಧಿಕಾರಿಗಳು ವಿಳಂಬ

11:16 AM Mar 27, 2020 | keerthan |

ಪಡುಬಿದ್ರಿ: ಮಂಗಳೂರಿನಲ್ಲಿ ರವಿವಾರ ಒಂದು ಕೋವಿಡ್-19 ಸೋಂಕು ಪ್ರಕರಣ ಪತ್ತೆಯಾದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಲಾಕ್ ಡೌನ್ ಆದೇಶವಿದ್ದರೂ ಉಡುಪಿ- ದಕ್ಷಿಣ ಕನ್ನಡ ಗಡಿ ಭಾಗದ ಹೆಜಮಾಡಿಯಲ್ಲಿ ವಾಹನಗಳ ಸಂಚಾರ ಸುಗಮವಾಗಿರುವುದು ಕಂಡು ಬಂದಿದೆ.

Advertisement

ಲಾಕ್ ಡೌನ್ ಆದೇಶದ ಮೇರೆಗೆ ಇಂದು ಮುಂಜಾನೆ ಹೆಜಮಾಡಿ ಟೋಲ್ ಗೇಟ್ ವಯಾ ದಕ್ಷಿಣ ಕನ್ನಡ ಜಿಲ್ಲೆಗೆ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿತ್ತು. ಆದರೆ ವಾಹನ ಜಂಗುಳಿ ಜಾಸ್ತಿಯಾದ ಹಿನ್ನಲೆಯಲ್ಲಿ ಈ ನಿರ್ಬಂಧವನ್ನು ಸಡಿಲಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಲಾಯಿತು.

ಬಾರದ ಆರೋಗ್ಯ ಅಧಿಕಾರಿಗಳು
ಉಡುಪಿ ಜಿಲ್ಲೆಗೆ ಪ್ರವೇಶಿಸುವ ವಾಹನ ಪ್ರಯಾಣಿಕರನ್ನು ಆರೋಗ್ಯ ತಪಾಸಣೆ ಮಾಡಬೇಕಿದೆ. ಆದರೆ ತಪಾಸಣೆ ಮಾಡಬೇಕಾದ ಅಧಿಕಾರಿಗಳು ಬೆಳಗ್ಗೆ 9.30ರ ತನಕವೂ ಸ್ಥಳಕ್ಕೆ ಆಗಮಿಸಿಲ್ಲ. ಎಲ್ಲಾ ಗೂಡ್ಸ್, ಖಾಸಗಿ ವಾಹನಗಳ ಸವಾರರು ತಪಾಸಣೆ ಇಲ್ಲದೆ ದಕ್ಷಿಣ ಕನ್ನಡದಿಂದ ಉಡುಪಿಗೆ ಪ್ರವೇಶಿಸುತ್ತಿದ್ದಾರೆ.

ನಿಯಮ ಮೀರಿ ಬಂದ ಬಸ್ ವಾಪಾಸ್
ದಕ್ಷಿಣ ಕನ್ನಡ ಜಿಲ್ಲೆಗೆ ಬಸ್ ಸಂಚಾರವನ್ನು ನಿಷೇಧಿಸಲಾಗಿದ್ದರೂ ನಿಯಮ ಮೀರಿ ಬಂದ ಖಾಸಗಿ ಬಸ್ ಒಂದನ್ನು ಹೆಜಮಾಡಿ ಟೋಲ್ ಗೇಟ್ ನಲ್ಲಿ ತಡೆದು ವಾಪಾಸ್ಸು ಕಳುಹಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next