Advertisement

ಹೆಜಮಾಡಿ ಬಂದರು ಪ್ರದೇಶ ಸ್ಥಳ ಪರಿಶೀಲನೆಗೆ ಅಧಿಕಾರಿಗಳ ಭೇಟಿ

10:04 PM Jun 17, 2019 | Team Udayavani |

ಪಡುಬಿದ್ರಿ: ಬಹು ನಿರೀಕ್ಷಿತ ಹೆಜಮಾಡಿ ಮೀನುಗಾರಿಕಾ ಬಂದರು ಯೋಜನೆಯ ಅನುಷ್ಠಾನದ ನಿಟ್ಟಿನಲ್ಲಿ ವಿವಿಧ ಇಲಾಖಾಧಿಕಾರಿಗಳು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು.

Advertisement

ಯೋಜನೆಯ ಪ್ರಥಮ ಹಂತವಾಗಿ ಕೇಂದ್ರ ಸರಕಾರವು 13.86 ಕೋಟಿ ರೂ. ಬಿಡುಗಡೆ ಮಾಡಿದ್ದು, ಅಷ್ಟೇ ಅನುದಾನ ರಾಜ್ಯ ಸರಕಾರ ಬಿಡುಗಡೆ ಮಾಡಬೇಕಿದೆ. ಕೇಂದ್ರ ಸರಕಾರದ ಅನುದಾನದ ಮೂಲಕ ಪ್ರಥಮ ಹಂತದ ಕಾಮಗಾರಿ ನಡೆಸುವ ನಿಟ್ಟಿನಲ್ಲಿ ಕುಂದಾಪುರ ಸಹಾಯಕ ಕಮಿಶನರ್‌ ಮಧುಕೇಶ್ವರ್‌, ಬಂದರು ಮತ್ತು ಮೀನುಗಾರಿಕಾ ಅಧಿಕಾರಿ ಜಯರಾಜ್‌, ಉಡುಪಿ ಕೃಷಿ ಇಲಾಖಾಧಿಕಾರಿ ಮೋಹನ್‌ ರಾಜ್‌, ತೋಟಗಾರಿಕಾ ಅಧಿಕಾರಿ ಕಂದಾಯ ಪರಿವೀಕ್ಷಕ ರವಿಶಂಕರ್‌, ಮೀನುಗಾರಿಕಾ ಉಪ ನಿರ್ದೇಶಕ ಪಾರ್ಶ್ವನಾಥ್‌, ಸಹಾಯಕ ನಿರ್ದೇಶಕರಾದ ಶಿವಕುಮಾರ್‌ ಮತ್ತು ಕಿರಣ್‌, ಸರ್ವೇಯರ್‌ ಶಿವಣ್ಣ ಮುಂತಾದವರು ಸ್ಥಳೀಯ ಮೀನುಗಾರ ಮುಖಂಡರೊಂದಿಗೆ ಯೋಜನಾ ಸ್ಥಳಕ್ಕೆ ಭೇಟಿ ನೀಡಿ ಸಮಾಲೋಚನೆ ನಡೆಸಿದರು.

ಮೀನುಗಾರರ ಮುಖಂಡರಾದ ವಿಜಯ ಎಸ್‌. ಬಂಗೇರ ಮತ್ತು ವಿನೋದ್‌ ಕೋಟ್ಯಾನ್‌ ಇಲಾಖಾಧಿಕಾರಿ ಗಳಲ್ಲಿ ಸ್ಥಳೀಯ ಮೀನುಗಾರರ ಬಹುದಿನದ ಬೇಡಿಕೆಯಾದ ಹೆಜಮಾಡಿ ಬಂದರು ಯೋಜನೆಯನ್ನು ಆದಷ್ಟು ಶೀಘ್ರ ಅನುಷ್ಠಾನಗೊಳಿಸುವಂತೆ ವಿನಂತಿಸಿದರು.

ಬಂದರು ನಿರ್ಮಾಣ ಸ್ಥಳ ಪರಿಶೀಲನೆ ನಡೆಸಿದ್ದು, ಈ ಕೂಡಲೇ ಜಮೀನು ವರ್ಗಾವಣೆ ಪ್ರಕ್ರಿಯೆ ನಡೆಸಿ ಕೊಡುವುದಾಗಿ ಸಹಾಯಕ ಕಮೀಷನರ್‌ ಮಧುಕೇಶ್ವರ್‌ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next