ನವ ದೆಹಲಿ : ವಿಶ್ವದ ಖ್ಯಾತ ಮದ್ಯ ಉತ್ಪಾದನಾ ಕಂಪೆನಿ ಯುಬಿ ( ಕಂಪನಿ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್) ಷೇರು ಪಾಲುಗಳನ್ನು ಮಾರಾಟ ಮಾಡಿದೆ ಎಂದು ತನ್ನ ಸ್ಟಾಕ್ ಎಕ್ಸ್ ಚೇಂಜ್ ಫೈಲಿಂಗ್ ನಲ್ಲಿ ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ಬ್ಲೂಮ್ ಬರ್ಗ್ ವರದಿ ಮಾಡಿದೆ.
39.64 ಮಿಲಿಯನ್ ಷೇರುಗಳ ಪಾಲನ್ನು ಕಂಪೆನಿ ಹೈನೆಕೆನ್ ಗೆ ಹಸ್ತಾರಿಸಿದೆ.
ಇದನ್ನೂ ಓದಿ : ರೈಡರ್ ಬಿಡುಗಡೆ ಮುನ್ನವೇ ಮತ್ತೊಂದು ಬಿಗ್ ಸಿನಿಮಾದಲ್ಲಿ ನಿಖಿಲ್
ಹೆಚ್ಚುವರಿ 39.64 ಮಿಲಿಯನ್ ಷೇರುಗಳನ್ನು ಯುಬಿಎಲ್ ನಿಂದ ಖರೀದಿಸಿದೆ ಎಂದು ಹೈನೆಕೆನ್ ಎನ್‌ವಿ ಘೋಷಿಸಿಸದ್ದು, ಈ ಷೇರು ಖರೀದಿಯೊಂದಿಗೆ, ಯುಬಿಎಲ್ ನಲ್ಲಿ ಹೈನೆಕೆನ್ ಕಂಪನಿ ಷೇರುಗಳು ಶೇಕಡಾ 46.50 ರಿಂದ ಶೇಕಡಾ 61.50ಕ್ಕೆ ಹೆಚ್ಚಳವಾಗಿದೆ.
ಹೈನೆಕೆನ್ ಗೆ ಸೆಬಿ ಅನುಮೋದನೆಯು ಮುಕ್ತವಾಗಿ ಖರೀದಿಗೆ ಸಾಧ್ಯವಾಗಿದೆ. ಇದರ ಜೊತೆಗೆ ಬ್ಯಾಂಕ್ ನಲ್ಲಿ ಅಡಮಾನ ಇಟ್ಟಿರುವ ಉಳಿದ ಶೇಕಡಾ 11ರಷ್ಟು ಯುಬಿ ಗ್ರೂಪ್ ಪಾಲನ್ನು ಕೂಡ ಹೈನೆಕನ್ ಖರೀದಿಸಬಹುದು” ಎಂದು ಎಮ್ ಕೆ ರಿಸರ್ಚ್ ತನ್ನ ವರದಿಯಲ್ಲಿ ತಿಳಿಸಿದೆ.
ಈ ವಹಿವಾಟು ಸಕಾರಾತ್ಮಕವಾಗಿದೆ ಮತ್ತು ಯುಬಿಬಿಎಲ್ ಮತ್ತು ಭಾರತೀಯ ಬಿಯರ್ ಮಾರುಕಟ್ಟೆಯಲ್ಲಿ ಅದರ ಬದ್ಧತೆ ಮತ್ತು ಆಸಕ್ತಿಯನ್ನು ಸೂಚಿಸುತ್ತದೆ.
ಇದನ್ನೂ ಓದಿ : ಶಿವಮೊಗ್ಗ ಏರ್ ಪೋರ್ಟ್ ನೀಲ ನಕ್ಷೆ ವಿವಾದ: ಕಾಂಗ್ರೆಸ್ ಟೀಕೆಗೆ ಕಿಡಿಕಾರಿದ ಸಚಿವ ಈಶ್ವರಪ್ಪ