Advertisement

ಉ.ಕದಲ್ಲಿ ಹೆಗಡೆ 2ಲಕ್ಷ ಲೀಡ್, ದ.ಕದಲ್ಲಿ ಕಟೀಲ್ 2ಲಕ್ಷ ಲೀಡ್, ಮುನಿಯಪ್ಪಗೆ ಸೋಲಿನ ಭೀತಿ

04:40 PM May 24, 2019 | Team Udayavani |

ಉತ್ತರಕನ್ನಡ: ಲೋಕಸಭಾ ಚುನಾವಣೆಯ ಮತಎಣಿಕೆ ಮುಂದುವರಿದಿದ್ದು, ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ 2 ಲಕ್ಷ ಮತಗಳ ಮುನ್ನಡೆ ಸಾಧಿಸುವ ಮೂಲಕ ಜಯದತ್ತ ದಾಪುಗಾಲು ಹಾಕಿದ್ದಾರೆ.

Advertisement

ಕೋಲಾರದಲ್ಲಿ ಸತತ ಗೆಲುವು ಸಾಧಿಸುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆಎಚ್ ಮುನಿಯಪ್ಪಗೆ 2019ರ ಲೋಕಸಭಾ ಚುನಾವಣೆ ಫಲಿತಾಂಶ ಶಾಕ್ ನೀಡಿದ್ದು, ಎದುರಾಳಿ ಬಿಜೆಪಿಯ ಮುನಿಸ್ವಾಮಿ ಒಂದು ಲಕ್ಷ ಮತಗಳ ಮುನ್ನಡೆ ಸಾಧಿಸಿದ್ದಾರೆ. ದಕ್ಷಿಣ ಕನ್ನಡದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ 2 ಲಕ್ಷ ಮತಗಳ ಮುನ್ನಡೆ ಸಾಧಿಸುವ ಮೂಲಕ ಹ್ಯಾಟ್ರಿಕ್ ಗೆಲುವಿನತ್ತ ದಾಪುಗಾಲಿಟ್ಟಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ 5,59,771 ಮತ ಪಡೆದಿದ್ದರೆ, ಕಾಂಗ್ರೆಸ್ ನ ಮಿಥುನ್ ರೈ 3,44,689 ಮತ ಪಡೆದಿದ್ದಾರೆ. 2904 ಮತ ನೋಟಾಕ್ಕೆ ಬಿದ್ದಿದೆ. ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆಎಚ್ ಮುನಿಯಪ್ಪ 1,73,448 ಮತ ಗಳಿಸಿದ್ದು, ಬಿಜೆಪಿಯ ಎಸ್. ಮುನಿಸ್ವಾಮಿ 2,83,147 ಮತ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next