Advertisement
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ವಿಜಯ್ ಬಿ. ಹೆಗ್ಡೆ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯಾಧ್ಯಕ್ಷರಾದ ಸಂಜೀವ ಪಿ. ಹೆಗ್ಡೆ, ಕಾರ್ಯದರ್ಶಿ ಶಂಕರ್ ಹೆಗ್ಡೆ, ಕೋಶಾಧಿಕಾರಿ ರಮೇಶ್ ಹೆಗ್ಡೆ ಉಪಸ್ಥಿತರಿದ್ದರು. ಸುಜಾತಾ ಹೆಗ್ಡೆ ಅವರ ಪ್ರಾರ್ಥನೆಯೊಂದಿಗೆಪ್ರಾರಂಭಗೊಂಡ ಮಹಾಸಭೆಯಲ್ಲಿ, 52ನೇ ವಾರ್ಷಿಕ ಮಹಾ ಸಭೆಯ ಮುಖ್ಯಾಂಶಗಳು, ವಾರ್ಷಿಕ ವರದಿ ಮತ್ತು 2016-2017ನೇ ಸಾಲಿನ ಲೆಕ್ಕ ಪತ್ರ, ಮುಂತಾದ ವಿಷಯಗಳನ್ನು ಮಂಡಿಸಿ ಸದಸ್ಯರಿಂದ ಮಂಜೂರು ಪಡೆಯಲಾಯಿತು. 2017-2018ನೇ ಸಾಲಿಗೆ ಆಂತರಿಕ ಲೆಕ್ಕ ಪರಿಶೋಧಕರಾಗಿ ಶ್ರೀಕಾಂತ್ ಜಯರಾಮ್ ಹೆಗ್ಡೆ ವಿಕ್ರೋಲಿ ಇವರನ್ನು ನೇಮಿಸಲಾಯಿತು.
ಕಾರ್ಯದರ್ಶಿಯಾಗಿ ಶಂಕರ್ ಆರ್. ಹೆಗ್ಡೆ ಡೊಂಬಿವಿಲಿ ಮತ್ತು ಕೋಶಾಧಿಕಾರಿಯಾಗಿ ರಮೇಶ್ ಎಂ. ಹೆಗ್ಡೆ ಡೊಂಬಿವಿಲಿ
ಅವಿರೋಧವಾಗಿ ಆಯ್ಕೆಯಾದರು. ಸಂಜೀವ ಪಿ. ಹೆಗ್ಡೆ ಅವರನ್ನು ಗೌರವ ಕಾರ್ಯಾಧ್ಯಕ್ಷರಾಗಿ ಸರ್ವಾನುಮತದಿಂದ ಆರಿಸಲಾಯಿತು. ಸಂಘದ ಆಡಳಿತ ಮಂಡಳಿಗೆ ಬೇಕಾದ 19 ಸದಸ್ಯರಿಗಾಗಿ 26 ಸದಸ್ಯರು ಉಮೇದ್ವಾರಿಕೆಯನ್ನು ಸಲ್ಲಿಸಿದ್ದು ಚುನಾವಣಾ ಅಧಿಕಾರಿ ನೀತಾ ಸತೀಶ್ ಹೆಗ್ಡೆ
ಚುನಾವಣಾ ಪ್ರಕ್ರಿಯೆಯನ್ನು ನಡೆಸಿ 19 ಚುನಾಯಿತ ಸದಸ್ಯರ ಯಾದಿಯನ್ನು ಮಹಾ ಸಭೆಗೆ ತಿಳಿಸಿದರು. ಅನಂತರ ಸಮಾಜದ 139 ಬಡ ವಿದ್ಯಾರ್ಥಿಗಳಿಗೆ 2017-2018ನೇ ವರ್ಷದ ವಿದ್ಯಾರ್ಥಿ ವೇತನವನ್ನು ನೀಡಿ ಗೌರವಿಸಲಾಯಿತು. ಸಮಾಜದ 11 ಬಡ ಮಕ್ಕಳನ್ನು ಸಮಾಜದ ದಾನಿಗಳಾದ ಕೊಡ್ಯಡ್ಕ ಜಯರಾಮ ಹೆಗ್ಡೆ, ದಿ| ಸಿ. ಬಾಬು ಹೆಗ್ಡೆ ಡೊಂಬಿವಿಲಿ, ಮನೋಜ್ ಹೆಗ್ಡೆ ಥಾಣೆ, ಸುರೇಂದ್ರ ಕುಮಾರ್ ಹೆಗ್ಡೆ ಅಂಧೇರಿ, ದೇವೇಂದ್ರ ಹೆಗ್ಡೆ ಬೆಂಗಳೂರು, ಲೀಲಾವತಿ ರವೀಂದ್ರ ಹೆಗ್ಡೆ ಮುಲುಂಡ್ ಮತ್ತು ಸುಧಾಕರ್ ಶೆಟ್ಟಿ ಇವರ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಕ ವಿದ್ಯಾರ್ಥಿ ವೇತನ ನಿಧಿಯಡಿಯಲ್ಲಿ ದತ್ತು ಸ್ವೀಕರಿಸಲಾಯಿತು.
Related Articles
Advertisement