Advertisement
- ಹಿಂದಿನ ವಾರ ನಾನು ಕೇದಾರ ನಾಥಕ್ಕೆ ತೆರಳಿ ದೇವರ ದರ್ಶನ ಪಡೆ ದಿದ್ದೆ. ಈದಿನ ದಕ್ಷಿಣದ ಕೇದಾರ ದಂತಹ ಪುಣ್ಯಸ್ಥಳಕ್ಕೆ ನಾನು ಬಂದಿ ದ್ದೇನೆ. ನರೇಂದ್ರ ಮೋದಿ ಎಂಬ ಸಾಮಾನ್ಯ ವ್ಯಕ್ತಿಗೆ ಪ್ರಧಾನಿ ಯಾಗು ವಂಥ ಆಶೀರ್ವಾದ ಜನತೆ ನೀಡಿದ್ದಾರೆ. ಜನತೆಯ ಪರವಾಗಿ ಹೆಗ್ಗಡೆಯವರ ಚರಣ ಗಳಿಗೆ ಅಭಿವಂದಿಸುತ್ತೇನೆ.
Related Articles
ಮಂಗಳೂರು ಸಹಿತ ಕರ್ನಾಟಕ ಕರಾವಳಿಯ ಬಗ್ಗೆ ಮೋದಿ ಸಾಂದರ್ಭಿಕ ವಾಗಿ ಉಲ್ಲೇಖೀಸಿದರು. ಮಳೆಗಾಲದಲ್ಲಿ ಇಲ್ಲಿನ ಮೀನುಗಾರರಿಗೆ ಪರ್ಯಾಯ ವಾಗಿ ಉದ್ಯೋಗ ದೊರೆಯಬೇಕು. ಸೀವೀಡ್ ಎಂಬ ಯೋಜನೆ ತರ ಬಹುದು. ಸಮುದ್ರದ ಕಳೆಗಳನ್ನು ಕೃಷಿ ರೂಪದಲ್ಲಿ ಸಂಸ್ಕರಿಸಿ ಕಡಲ ಕಿನಾರೆಯಲ್ಲಿ ಬೆಳೆಸಬೇಕು. ಜಲಸಹಿತವಾದ ಈ ಉತ್ಪನ್ನ ಕೃಷಿ ಕಾರ್ಯದ ಗದ್ದೆಗಳಲ್ಲಿ ಪೂರಕವಾದ ಗೊಬ್ಬರವಾಗುತ್ತದೆ. ಆದಾಯವನ್ನು ನೀಡು ತ್ತದೆ. ಹೆಗ್ಗಡೆ ಯವರು ಈ ಬಗ್ಗೆ ಚಿಂತನೆ ನಡೆಸಲು ಮೋದಿ ವಿನಂತಿಸಿ ದರು. ಇಲ್ಲಿ ಅಡಿಕೆ ಬೆಲೆ ಕುಸಿದಾಗ ಇಲ್ಲಿನ ಬೆಳೆಗಾರರು ಗುಜರಾತ್ ಮುಖ್ಯ ಮಂತ್ರಿಯಾಗಿದ್ದ ನನ್ನಲ್ಲಿಗೆ ಬರುತ್ತಿದ್ದರು ಎಂದು ನೆನಪಿಸಿಕೊಂಡರು.
Advertisement
ಚೆಹೆರೇಪರ್ ಮುಸ್ಕಾರಾಹಟ್ ಹಟ್‌ತೀ ನಹೀಂ…“ನಮೋ’ಶ್ರೀ ಮಂಜು ನಾಥಾಯ ಎಂದು ಪ್ರೇಕ್ಷಕರಲ್ಲಿ ಮೂರು ಬಾರಿ ಹೇಳಿಸಿದರು ಹೆಗ್ಗಡೆಯವರು. ಇದರ ಔಚಿತ್ಯ ತಿಳಿಯಿತೇ ಎಂದು ಅವರು ಕೇಳಿದಾಗ ಸಭಾಂಗಣ ಪೂರ್ತಿ “ಹೌದು’ ಎಂದಿತು! - ನಮೋ ಮಂಜುನಾಥ, ಧರ್ಮಸ್ಥಳದ ನನ್ನ ಪ್ರೀತಿಯ ಬಂಧು ಭಗಿನಿಯರೇ, ನಿಮ ಗೆಲ್ಲಾ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿ ಹಿಂದಿಯಲ್ಲಿ ಮುಂದು ವರಿ ಸಿದರು ಮೋದಿ. - ಹೆಗ್ಗಡೆಯವರನ್ನು ಅನೇಕ ಬಾರಿ ಭೇಟಿಯಾಗಿದ್ದೇನೆ. ಅದೇ ಮುಗುಳುನಗೆ; ಎಂದೂ ಆಯಾಸವಿಲ್ಲ. ಚೆಹೆರೇಪರ್ ಮುಸ್ಕಾರಾ ಹಟ್ ಹಟ್‌ತೀ ನಹೀಂ…! - ಹಿಂದೆ ಹೇಳುತ್ತಿದ್ದರು: ಕೇಂದ್ರ ಸರಕಾರ ಒಂದು ರೂಪಾಯಿ ನೀಡಿದರೆ ಹಳ್ಳಿಗೆ ಬಂದದ್ದು 15 ಪೈಸೆ ಮಾತ್ರ. ಉಳಿದ ಮೊತ್ತ ನಡುವೆ ಯಾರ್ಯಾರದೋ ಪಾಲಾಗು ತ್ತಿತ್ತು. ಈಗ ಹೇಳು ತ್ತೇವೆ: ಕೇಂದ್ರ ಸರಕಾರ ನೀಡುವ ಪೂರ್ಣ ಮೊತ್ತ ಹಳ್ಳಿ ಯನ್ನು ಪ್ರಾಮಾ ಣಿಕ ವಾಗಿ, ಪಾರ ದರ್ಶಕ ವಾಗಿ ತಲುಪುತ್ತಿದೆ.