ಗೋಲ್ಡ್ ಕೋಸ್ಟ್ : ಇಲ್ಲೀಗ ಸಾಗುತ್ತಿರುವ 2018ರ ಕಾಮನ್ವೆಲ್ತ್ ಗೇಮ್ಸ್ನ ಆರನೇ ದಿನವಾದ ಇಂದು ಭಾರತದ ಹಿನಾ ಸಿಧು ಅವರು 25 ಎಂ ಪಿಸ್ಟಲ್ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತದ ಒಟ್ಟು ಚಿನ್ನದ ಪದಕಗಳ ಸಂಖ್ಯೆ 11ಕ್ಕೇರಿತು.
ಹಿನಾ ಸಿಧು ಅವರಂತೆಯೇ ಭರವಸೆಯ ಸ್ಪರ್ಧಿಯಾಗಿದ್ದ ಅನ್ನು ರಾಜ್ ಸಿಂಗ್ ಅವರು ಆರನೇ ಸ್ಥಾನಿಯಾಗಿ ಮೂಡಿ ಬಂದು ನಿರಾಶೆ ಉಂಟುಮಾಡಿದರು.
ಭಾರತದ ಒಟ್ಟು ಪದಕ ಪದಕ ಗಳಿಕೆ ಈಗ 11 ಚಿನ್ನ, 4 ಬೆಳ್ಳಿ ಮತ್ತು 5 ಕಂಚು ಆಗಿದೆ.
ಇಂದು ಬೆಳಗ್ಗೆ ಪುರುಷರ ಹಾಕಿಯಲ್ಲಿ ಭಾರತ ಮಲೇಶ್ಯವನ್ನು 2-1 ಅಂತರದಲ್ಲಿ ಸೋಲಿಸುವ ಮೂಲಕ ಸೆಮಿ ಫೈನಲ್ ಸ್ಥಾನವನ್ನು ಖಾತರಿಪಡಿಸಿಕೊಂಡಿತು. ಭಾರತ ಮೂರು ಪಂದ್ಯಗಳಲ್ಲಿ ಎರಡನ್ನು ಗೆಲ್ಲುವ ಮೂಲಕ ಭಾರತಕ್ಕೆ ಸೆಮಿ ಫೈನಲ್ ತೇರ್ಗಡೆ ಸಾಧ್ಯವಾಯಿತು.
ಪುರುಷರ 50 ಎಂ ರೈಫಲ್ ಫೈನಲ್ ಸ್ಪರ್ಧೆಗೆ ತೇರ್ಗಡೆಗೊಂಡ ಹೊರತಾಗಿಯೂ ಭಾರತದ ಗಗನ್ ನಾರಂಗ್ ಮತ್ತು ಚೈನ್ ಸಿಂಗ್ ಅವರು ಪದಕ ಗೆಲ್ಲಲು ವಿಫಲರಾಗಿ ನಿರಾಶೆ ಉಂಟು ಮಾಡಿದರು.